ಹುಬ್ಬಳ್ಳಿ: ದೇಶದಾದ್ಯಂತ ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಮತ್ತು ದಿನಸಿ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ರಾಜ್ಯ ಶಿವಸೇನೆ ಕಾರ್ಯಕರ್ತರು ನಗರದ ಮಿನಿ ವಿಧಾನಸೌಧ ಎದುರು ಇಂದು ಪ್ರತಿಭಟನೆ ಮಾಡಿದರು.
ಕೋವಿಡ್‌ನಿಂದ ಈಗಾಗಲೇ ಸಾರ್ವಜನಿಕರು ನಲುಗಿ ಹೋಗಿದ್ದಾರೆ. ಹಲವಾರು ಜನರು ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಿದೆ. ತಕ್ಷಣ ಸರ್ಕಾರ ಪೆಟ್ರೋಲ್, ಡಿಸೇಲ್ ಮತ್ತು ಅನಗತ್ಯ ವಸ್ತುಗಳ ಮೇಲೆ ಹೇರಲಾದ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ತಹಶೀಲ್ದಾರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದಾರೆ.
ಹು-ಧಾ ಮಹಾನಗರ ಜಿಲ್ಲಾ ಶಿವಸೇನಾ ಅಧ್ಯಕ್ಷ ಅಣ್ಣಪ್ಪ ದೊಡ್ಡಮನಿ, ಜಿಲ್ಲಾ ಕಾರ್ಯಾಧ್ಯಕ್ಷ ಕುಬೇರ ಪವಾರ, ಬಸವರಾಜ ಮಳ್ಳಿ, ಶಿವು ಮತ್ತಿಗಟ್ಟಿ, ಸುನೀಶ ಮಳೇಕರ ಮತ್ತು ರಾಘು ಚಚ್ಹಾಣ ಮತ್ತಿತರರಿದ್ದರು.