ಧಾರವಾಡ: ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಮುಖಂಡ ಶಂಕರ ಮುಗದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಜರುಗಿದ ಚುನಾವಣೆಯಲ್ಲಿ ಶಂಕರ ಮುಗದ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಒಂದೇ ನಾಮಪತ್ರ ಸಲ್ಲಿಸಿದ ಪರಿಣಾಮ ಚುನಾವಣಾಧಿಕಾರಿ ಆರ್.ಟಿ.ಪೋಳ ಅವರು ಶಂಕರ ಮುಗದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಅವಿರೋಧವಾಗಿ ಆಯ್ಕೆಯಾದ ಶಂಕರ ಮುಗದ ಅವರನ್ನು ಶಾಸಕ ಅಮೃತ ದೇಸಾಯಿ,ಮುಖಂಡರಾದ ಅಡಿವೆಪ್ಪ ಹೊನ್ನಪ್ಪನವರ, ಬಸವರಾಜ ಹೊಸೂರ, ರಾಮಣ್ಣ ಕನಾಜಿ, ಪ್ರಕಾಶ ಕೊರಿಕೊಪ್ಪ, ಅಭಿಷೇಕ ಹೊನ್ನಪ್ಪನವರ ಮತ್ತಿತರರು ಅಭಿನಂದಿಸಿದರು.
ಹಾವೇರಿ, ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಒಕ್ಕೂಟದ ಅಧ್ಯಕ್ಷರಾಗಿದ್ದ ಬಸವರಾಜ ಅರಬಗೊಂಡ ವಿರುದ್ಧ ಒಕ್ಕೂಟದ ನಿರ್ದೇಶಕರು ಕಳೆದ ದಿ. ೨ ರಂದು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಜಯ ಲಭಿಸಿತ್ತು.
ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಇಂದು ಆಯ್ಕೆಯಾಗುವ ಮೂಲಕ ಶಂಕರ ಮುಗದ ಅವರು ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೇರಿದಂತಾಗಿದೆ.