ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ 71ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ನಾಳೆಯಿಂದ ಸೇವೆ ಮತ್ತು ಸಮರ್ಪಣಾ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.
ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಸೆ.17ರಿಂದ ಅ. 7ರ ವರೆಗೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ರಾಜ್ಯದಲ್ಲಿ ನಾಳೆ ಒಂದೇ ದಿನ 30ಲಕ್ಷ ಜನರಿಗೆ ಲಸಿಕೆ ಹಾಕಿಸುವ ಸಂಕಲ್ಪ ಮಾಡಲಾಗಿದೆ ಎಂದರು.
17ರ0ದು ಮೋದಿ ಜನ್ಮದಿನ, 25ರಂದು ಪಂಡಿತ ದೀನ ದಯಾಳ ಅವರ ಹುಟ್ಟುಹಬ್ಬ, ಆ.2ರಂದು ಮಹಾತ್ಮಾ ಗಾಂಧೀಜಿ ಜಯಂತಿ ಹಾಗೂ 7ರಂದು ಮೋದಿ ಚುನಾಯಿತ ಸರ್ಕಾರದ ಪ್ರಮುಖರಾಗಿ 20 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ವಿಧಾಯಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ರಾಜ್ಯದ 37 ಜಿಲ್ಲೆಗಳಲ್ಲಿ ಬೃಹತ್ ಮಟ್ಟದ ಆರೋಗ್ಯ ಶಿಬಿರ ನಡೆಸುವುದು, ಕೊಳಗೇರಿ, ಅನಾಥಶ್ರಮ. ಆಸ್ಪತ್ರೆಗಳು ಮತ್ತು ವೃದ್ದಾಶ್ರಮಗಳಲ್ಲಿ ಪಕ್ಷದ ಎಸ್.ಸಿ, ಎಸ್, ಟಿ ಮತ್ತು ಓಬಿಸಿ ಮೋರ್ಚಾದ ಕಾರ್ಯಕರ್ತರು ಹಣ್ಣುಗಳನ್ನು ವಿತರಣೆ ಮಾಡುವರು, ಅಭಿಯಾನದ 20 ದಿನಗಳ ಅವಧಿಯಲ್ಲಿ ಪ್ರಧಾನಮಂತ್ರಿಗಳ ಶುಭ ಹಾರೈಸುವ ಮತ್ತು ಬಡವರಿಗಾಗಿ ಅವರು ಕೈಕೊಂಡ ಕಲ್ಯಾಣ ಕಾರ್ಯಗಳಿಗಾಗಿ ಅವರಿಗೆ ಧನ್ಯವಾದ ತಿಳಿಸಲು 5 ಕೋಟಿ ಅಂಚೆ ಕಾರ್ಡ್ ಗಳನ್ನು ಸಜ್ಜುಗೊಳಿಸಿ, ದೇಶದ ಎಲ್ಲ ಬೂತಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಅಂಚೆ ಕಾರ್ಡುಗಳನ್ನು ಬರೆಸುವುದು, ಪ್ರತಿ ಜಿಲ್ಲೆಯಲ್ಲಿ ಯುವ ಮೋರ್ಚಾ ವತಿಯಿಂದ ರಕ್ತದಾನ ಶಿಬಿರ ಆಯೋಜಿಸು ವುದು ಸೇರಿದಂತೆ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಅಲ್ಲದೇ ಕರ್ನಾಟಕದ ಕಾವೇರಿ, ಮಲಪ್ರಭಾ, ಕೃಷ್ಣಾ ನದಿ ಸೇರಿ ಭಾರತದ ಎಲ್ಲ 71 ನದಿಗಳ ಸ್ವಚ್ಛತಾ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಪಕ್ಷೇತರ ಅರ್ಭರ್ಥಿಯಾಗಿ ವಾರ್ಡ್ ನಂಬರ್ 69ರಿಂದ ಚುನಾಯಿತರಾದ ದುರ್ಗವ್ವ ಬಿಜವಾಡ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಹುಡಾ ಅಧ್ಯಕ್ಷ ನಾಗೇಶ ಕಲಬುರಗಿ, ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಈರಣ್ಣಾ ಜಡಿ, ದತ್ತಮೂರ್ತಿ ಕುಲಕರ್ಣಿ ಇದ್ದರು.