ಹುಬ್ಬಳ್ಳಿ: ಮುಂಬರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲ ೮೨ ವಾರ್ಡಗಳಲ್ಲೂ ಶಿವಸೇನಾ ಪಕ್ಷದಿಂದ ಅಭ್ಯರ್ಥಿ ಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಕುಮಾರ ಹಕಾರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಎಲ್ಲ ವಾರ್ಡು ಗಳಲ್ಲಿ ಅಭ್ಯರ್ಥಿಗಳನ್ನು ಗುರುತಿಸುವ ಕಾರ್ಯ ಪ್ರಾರಂಭಿಸಿದ್ದು, ಇದಕ್ಕಾಗಿ ಪಕ್ಷದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಘಟಕದಿಂದ ಚುಣಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಣಾಳಿಕೆ ಸಿದ್ಧಪಡಿಸುವಿಕೆ ಪ್ರಚಾರ ಕಾರ್ಯ ಸಹಿತ ಹಲವಾರು ಚುನಾವಣೆ ಕೆಲಸಗಳಿಗೆ ಕೋರ ಕಮಿಟಿಯೊಂದನ್ನು ಸಿದ್ಧಪಡಿಸ ಲಾಗಿದ್ದು, ಅದರ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮಾಡಲಾಗುತ್ತಿದೆ ಎಂದರು.
ಕೋರ ಕಮೀಟಿ ಸದ್ಯಸರಾಗಿ ಲಕ್ಷ÷್ಮಣ ಮೊರಬ ವಕೀಲರು, ರಾಘವೇಂದ್ರ ಕಠಾರೆ, ಗಣೇಶ ಕದಂ, ಸುಭಾಷ ಮುಂಡಗೋಡ, ಸುಭಾಷ ಬಟ್ಟ ಹಾಗೂ ಸಿದ್ದು ಭೋಸ್ಲೆ ನೇಮಕಗೊಂಡಿದ್ದು, ಇವರ ಜೊತೆ ಜಿಲ್ಲಾ ಅಧ್ಯಕ್ಷ ಅಣ್ಣಪ್ಪ ದೊಡ್ಡಮನಿ, ಕಾರ್ಯಾಧ್ಯಕ್ಷ ಕುಬೇರ ಪವಾರ, ಪ್ರಧಾನ ಕಾರ್ಯದರ್ಶಿ ರಾಜು ನಾಯಕವಾಡಿ ಹಾಗೂ ವಕ್ತಾರ ಬಸವರಾಜ ಮಳ್ಳಿ ಎಲ್ಲರೂ ಸೇರಿ ಪಾಲಿಕೆ ಚುನಾವಣೆಗೆ ಪಕ್ಷವನ್ನು ಸದೃಢಗೊಳಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ವಿನಯ ಮಾಳದಕರ ಸಹಿತ ಕೋರ ಕಮಿಟಿ ಸದಸ್ಯರು ಹಾಗೂ ಜಿಲ್ಲಾ ಪದಾಧಿಕಾರಿಗಳು ಇದ್ದರು.