ಹುಬ್ಬಳ್ಳಿ: ನಾಳೆ ಮಧ್ಯಾಹ್ನ ಚುನಾವಣಾ ಆಯೋಗದ ಆಯುಕ್ತರು ಧಾರವಾಡ ಜಿಲ್ಲಾಧಿಕಾರಿ ಅವರೊಂದಿಗೆ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಚುನಾವಣೆ ಕುರಿತಂತೆ ಸಂವಾದ ನಡೆಸಲಿದ್ದು ಬಹುತೇಕ ಚುನಾವಣೆ ಘೋಷಣೆ ನಿಶ್ಚಿತ ಎಂಬ ಮಾತು ಬಿಜೆಪಿ ಅಂಗಳದಿAದಲೇ ಕೇಳಿ ಬರುತ್ತಿದೆಯಲ್ಲದೇ ಆ ಪಕ್ಷದಲ್ಲಿ ಚಟುವಟಿಕೆಗಳು ತುರುಸುಗೊಂಡಿದೆ.
ಈಗಾಗಲೇ ನಾಲ್ಕೂ ಮಂಡಲಗಳ ಅಧ್ಯಕ್ಷರ ,ಕರ‍್ಯದರ್ಶಿಗಳ ಸಭೆ ನಡೆಸಿ ಸಂಘಟನೆಗೆ ಒಂದುವಾರದ ಗಡುವು ನೀಡಿದ್ದರ ಮಧ್ಯೆಯೇ ಆಕಾಂಕ್ಷಿಗಳು ತಮ್ಮ ಪರಿಚಯ ಪತ್ರ ನೀಡುವಂತೆ ಸೂಚಿಸಲಾಗಿದ್ದು,
ಇಂದು ವಿವಿಧ ವಾರ್ಡಗಳ ಮಹಿಳಾ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆನ್ನಲಾಗಿದೆ.
ಎಸ್ ಸಿ ಮೀಸಲಾತಿ ಅನ್ಯಾಯ, ವಾರ್ಡ ಮೀಸಲಾತಿ ತಾರತಮ್ಯ, ಪೂರ್ವದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ ಹಿನ್ನೆಲೆಯಲ್ಲಿ ಹೈಕೋರ್ಟಗೆ ರಿಟ್ ಅರ್ಜಿ ಸಲ್ಲಿಕೆಯಾಗಿದ್ದರೂ ಮುಂದಕ್ಕೆ ಹೋಗಬಹುದೆಂಬ ಅನುಮಾನ ಆಯೋಗದ ಸಿದ್ದತೆಗಳಿಂದ ಕಡಿಮೆಯಾಗುತ್ತಿದ್ದು ಬಿಜೆಪಿಯಂತೆಯೇ ಕಾಂಗ್ರೆಸ್ಸಿನಲ್ಲಿಯೂ ಅದರಲ್ಲೂ ಸೆಂಟ್ರಲ್ ಕ್ಷೇತ್ರದಲ್ಲಿ ಗರಿಗೆದರಿದೆ.
ಪಾಲಿಕೆ ಚುನಾವಣೆಗೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಚುನಾವಣಾ ಆಯೋಗ ಜಿಲ್ಲಾಧಿಕಾರಿಗೆ ಸೂಚಿಸಿದ್ದು ನಾಳೆ ಸಂವಾದದ ನಂತರ ಸ್ಪಷ್ಟ ಚಿತ್ರಣ ಹೊರಬೀಳಲಿದೆ.