ಹುಬ್ಬಳ್ಳಿ-ಧಾರವಾಡ ಸುದ್ದಿ
ಪಾಲಿಕೆ ಚುನಾವಣೆ: ಕೇಸರಿ ನಾಗಾಲೋಟ

ಪಾಲಿಕೆ ಚುನಾವಣೆ: ಕೇಸರಿ ನಾಗಾಲೋಟ

ಹುಬ್ಬಳ್ಳಿ: ಬಿಜೆಪಿಯ ಬಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಜನತೆ ಇನ್ನೂ ಭ್ರಮನಿರಸನಗೊಂಡಿಲ್ಲ. ಆಶಾಭಾವನೆ ಹೊಂದಿದ್ದಾರೆAಬುದು ಪ್ರಸಕ್ತ ಪಾಲಿಕೆ ಚುನಾವಣೆ ತೋರಿಸಿದ್ದು 82 ವಾರ್ಡಗಳ ಪೈಕಿ39 ವಾರ್ಡ್ಗಳಲ್ಲಿ ಕಮಲ ಬಾವುಟ ಹಾರಿದ್ದು ಹ್ಯಾಟ್ರಕ್ ಜಯಭೇರಿ ಬಾರಿಸಿದ್ದರೂ ಅತಂತ್ರದ ಹಣೆಪಟ್ಟಿ ತಪ್ಪಿಲ್ಲವಾಗಿದೆ.
ಕಳೆದ ಬಾರಿಯಂತೆ ಈ ಬಾರಿಯೂ ಸ್ಪಷ್ಟ ಬಹುಮತ ಪಡೆಯಲಿದ್ದೇವೆ. 65ಕ್ಕೂ ಹೆಚ್ಚು ಗೆಲುವು ಸಾಧಿಸುವ ಕನಸು ನನಸಾಗದೇ ಹೋದರೂ ಅತಿಹೆಚ್ಚು 39 ಸ್ಥಾನ ಪಡೆದು ಅಧಿಕಾರ ಹಿಡಿಯುವುದನ್ನು ಖಚಿತ ಪಡಿಸಿದೆ.


ಅಧಿಕಾರಕ್ಕೆ 42ರ ಮ್ಯಾಜಿಕ್ ನಂ ಬೇಕಾಗಿತ್ತಾದರೂ 39 ಗೆದ್ದಿರುವ ಬಿಜೆಪಿಗೆ ಇಬ್ಬರು ಬಂಡುಕೋರರು ಅವರ ಪಕ್ಷದವರೇ ಇದ್ದು ಅಲ್ಲದೇ 6 ಜನಪ್ರತಿನಿಧಿಗಳ ಮತವೂ ಇರುವುದರಿಂದ ಗೆದ್ದು ನಲ್ವತ್ತರ ಸಮೀಪ ಬರುವ ಮೂಲಕ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿಯುವುದು ಖಚಿತವಾಗಿದೆ.
ಕಾಂಗ್ರೆಸ್ ಈ ಬಾರಿ 33 ಸ್ಥಾನ ಗಳಿಸಿದ್ದು, ಎಂಐಎA 3, ಪಕ್ಷೇತರರು 6 ಹಾಗೂ ಓರ್ವ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಉಳಿದೆಲ್ಲರು ಮೈತ್ರಿಕೂಟ ಮಾಡಿಕೊಂಡಲ್ಲಿ ಕಾಂಗ್ರೆಸ್‌ಗೆ ಮೇಯರ್‌ಗಿರಿ ಏರುವ ಅವಕಾಶ ಇದೆ.


ಧಾರವಾಡ ಗ್ರಾಮೀಣದ 9 ಕ್ಷೇತ್ರಗಳಲ್ಲಿ ಕೈ( 4), ಕಮಲ(5) ಸಮಬಲ ಕುಸ್ತಿ ನಡೆದಿದ್ದು ಪಶ್ಚಿಮದಲ್ಲಿ ಬಿಜೆಪಿಗೆ13ಹೆಚ್ಚಿನ ಸ್ಥಾನಗಳು ಬಂದಿದ್ದು ಕಾಂಗ್ರೆಸ್ 10 ಪಡೆದರೆ ತಲಾ ಒಂದು ಪಕ್ಷೇತರ ಮತ್ತು ಜೆಡಿಎಸ್ ಪಾಲಾಗಿದೆ.
ಸೆಂಟ್ರಲ್‌ನಲ್ಲಿನ 25ರ ಪೈಕಿ ಬಿಜೆಪಿ 14 ಸ್ಥಾನ ಗಳಿಸಿದ್ದು ಕಾಂಗ್ರೆಸ್ 8 ಸ್ಥಾನ ಗಳಿಸಿದೆ.ಮೂವರು ಪಕ್ಷೇತರರು ವಿಜಯೀಯಾಗಿದ್ದಾರೆ.
ಪೂರ್ವ ಕ್ಷೇತ್ರದಲ್ಲಿನ 23ರಲ್ಲಿ ಕಾಂಗ್ರೆಸ್ 11, ಬಿಜೆಪಿ 7, ಎಂಐಎA 3 ಹಾಗೂ ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.


ಬಿಜೆಪಿ ಆರಂಭದಲ್ಲಿ ನಿಚ್ಚಳ ಬಹುಮತದತ್ತ ಮುನ್ನಡೆದಿದ್ದರೂ ನಂತರ ಪೂರ್ವದಲ್ಲಿ ಹೇಳಿಕೊಳ್ಳುವ ಸಾಧನೆ ಪರಾಭವಗೊಂಡಿದೆ.
ಮಹಾನಗರದಲ್ಲಿ ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳಿಗೆ ದೊಡ್ಡ ಪಾಠವನ್ನು ಕಲಿಸಿದ್ದಾರೆ 6 ವಾರ್ಡ ಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದರೆ ಮಾಜಿ ಮೇಯರ್ ಡಾ.ಪಾಂಡುರ0ಗ ಪಾಟೀಲ ( 55), ಕೆಸಿಸಿ ಬ್ಯಾಂಕ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ ( 29), ಪಾಲಿಕೆ ಮಾಜಿ ಸದಸ್ಯೆ ರತ್ನಾ ಪಾಟೀಲ ( 39), ಮಾಜಿ ಪಾಲಿಕೆ ಸದಸ್ಯ ಅಲ್ತಾಫ್ ಕಿತ್ತೂರ ಪತ್ನಿ ಸಾಹೀರಾಬಾನು ಕಿತ್ತೂರ, ಎಸ್ ಸಿ ಮೋರ್ಚಾದ ಉಪಾಧ್ಯಕ್ಷ ಮಹೇಂದ್ರ ಕೌತಾಳ, ಮಹಾನಗರ ಉಪಾಧ್ಯಕ್ಷ ಉಮೇಶ ದುಶಿ,ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ, ಅಲ್ತಾಫ್ ಹಳ್ಳೂರ ಪುತ್ರ (71), 73ರಲ್ಲು ಶೋಭಾ ವಾಲಿ, ಸಂಜಯ ಕಪಟಕರ ( 23) ,ಮಾಜಿ ವಿಜನಗೌಡ ಪತ್ನಿ ವಿದ್ಯಾ ಪಾಟೀಲ(82), ಡಾ.ಆಮ್ರಪಾಲಿ ಜಕ್ಕಪ್ಪನವರ(56), ಮುಂತಾದವರು ಸೋಲುಂಡಿದ್ದಾರೆ.


48 ವಾರ್ಡುಗಳ ಪೈಕಿ ಬಹುತೇಕ ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, 14 ರಲ್ಲಿ ಬೆಜೆಪಿ, 5 ಕಾಂಗ್ರೆಸ್, 3 ಪಕ್ಷೇತರರು ಜಯ ಗಳಿಸಿದ್ದಾರೆ.
ನಂ. 18 ರಲ್ಲಿ ಬಿಜೆಪಿಯ ಶೀವು ಹಿರೇಮಠ, ಗೆಲವು. 13 ರಲ್ಲಿ ಬಿಜೆಪಿ ಸುರೇಶ ಬೆದರೆ ಗೆಲುವು. ವಾರ್ಡ್ 79ರಲ್ಲಿ ಕಾಂಗ್ರೆಸ್ ನ ಪಾಮಿದಾ ಬಾಬಾಜಾನ ಕಾರಡಗಿ ಗೆಲುವು. ವಾರ್ಡ್ 26 ರಲ್ಲಿ ಬೆಜೆಪಿಯ ನೀಲವ್ವ ಅರವಾಳದ ಗೆಲುವು. 27 ರಲ್ಲಿ ಬಿಜೆಪಿಯ ಸುನೀತಾ ಮಾಳವಾದಕರ್, 28 ರಲ್ಲಿ ಬಿಜೆಪಿಯ ಚಂದ್ರಶೇಖರ ಮನಗುಂಡಿ ಗೆಲುವು. ವಾರ್ಡ್ ನಂ 49 ನಲ್ಲಿ ಬಿಜೆಪಿಯ ವೀಣಾ ಚೇತನ ಬರದ್ವಾಡ ಗೆಲುವು. 73 ನೆ ವಾರ್ಡಿನಲ್ಲಿ ಬಿಜೆಪಿ ಶೀಲಾ ಕಾಟಕರ್ ಗೆಲುವು ಸಾಧಿಸಿದ್ದಾರೆ.

ಜೆಡಿಎಸ್ ಕಳಾಹೀನ

ಹುಬ್ಬಳ್ಳಿ: ಕಳೆದ ಅವಧಿಯವರೆಗೂ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯಲ್ಲಿ ಎರಡಂಕಿಯವರೆಗೆ ಸ್ಥಾನ ಪಡೆದು ನಿರ್ಣಾಯಕವಾಗುತ್ತಿದ್ದ ಜಾತ್ಯತೀತ ಜನತಾದಳ ಈ ಬಾರಿ ಕೇವಲ ಒಂದು ಸ್ಥಾನ ಪಡೆದು ಕಳಾಹೀನವಾಗಿದೆ.
25ನೇ ವಾರ್ಡಿನಲ್ಲಿ ಮಾತ್ರ ಲಕ್ಷಿö್ಮ ಮಾರುತಿ ಹಿಂಡಸಗೇರಿ ಗೆಲುವು ಸಾಧಿಸಿ ಖಾತೆ ಆರಂಭಿಸಿದ್ದಾರೆ.
ಸುಮಾರು 40ಕ್ಕೂ ಹೆಚ್ಚು ವಾರ್ಡಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ ಸಹ ಗೆಲುವು ಮಾತ್ರ ಪಡೆಯುವಲ್ಲಿ ವಿಫಲವಾಗಿದೆ. ಕಳೆದ ಬಾರಿ ಗೆಲುವು ಸಾಧಿಸಿದ್ದ 13ನೇ ವಾರ್ಡಿನಲ್ಲಿ ಸ್ಪರ್ಧಿಸಿದ್ದ ರಾಜು ಅಂಬೋರೆ ಸುರೇಶ ಬೇದರೆ ವಿರುದ್ದ ಸೋಲು ಉಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಒಂದೆರಡು ಗೆಲುವು ಸಾಧಿಸುವ ಇದ್ದವಾದರೂ ಅಂತಿಮವಾಗಿ ಯಶ ಸಾಧಿಸಿಲ್ಲ.

ಖಾತೆ ತೆಗೆದ ಗಾಳಿಪಟ–3 ಸ್ಥಾನ ಗೆಲುವು

ಹುಬ್ಬಳ್ಳಿ : ಪೂರ್ವ ಕ್ಷೇತ್ರದಲ್ಲಿ 12 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿದು ಕಾಂಗ್ರೆಸ್ ವೋಟ್ ಬ್ಯಾಂಕ್‌ನ್ನು ಛಿದ್ರ ಮಾಡುವ ಎಐಎಂಐಎA ಆಸೆ ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಪೂರ್ತಿಯಾಗಿ ಈಡೇರಿಲ್ಲವಾದರೂ 3 ಸ್ಥಾನ ಗೆದ್ದು ಖಾತೆ ತೆರೆದಿದೆ.
ನಾಲ್ವರು ಹಿಂದುಗಳು ಸೇರಿದಂತೆ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಅವರನ್ನೇ ಟಾರ್ಗೆಟ್ ಮಾಡಿ ಕಣಕ್ಕಿಳಿದಿದ್ದರೂ ಖಾತೆ ತೆರೆದಿದೆ.
ಅಸಾವುದ್ದೀನ ಓವೈಸಿ ಬಹಿರಂಗ ಪ್ರಚಾರ ಕೊನೆಗೊಳ್ಳುವ ಒಂದು ದಿನ ಮೊದಲು ಬಂದು ಹುಬ್ಬಳ್ಳಿಯಲ್ಲಿ ಕ್ರೇಜ್ ಸೃಷ್ಟಿಸಿದರೂ ಹೇಳಿಕೊಳ್ಳುವ ಯಶಸ್ಸು ಪಡೆಯದೇ ಹೋದರು ನಿರ್ಣಾಯಕ 71 ಮತ್ತು 75,77ರಲ್ಲಿ ಗಾಳಿ ಪಟ ಹಾರಿದೆ.
ನಜೀರ ಹೊನ್ಯಾಳ ಮಾಜಿ ಪಾಲಿಕೆ ಸದಸ್ಯ ಗಣೇಶ ಟಗರಗುಂಟಿ, ಮಹಾನಗರ ಕಾಂಗ್ರೆಸ್ ಅಧ್ಯಕ್ಷರ ಪುತ್ರ ಮೊಹ್ಮದ ಅಹ್ಮದ ಕಿತ್ತೂರ, ಹಾಗೂ ಜೆಡಿಎಸ್‌ನ ಜಪ್ರುಲ್ಲಾಗೆ ಹಿಂದೆ ಹಾಕಿ ಮುನ್ನುಗ್ಗಿದ್ದಾರೆ.
ಇನ್ನೊಂದೆಡೆ 75ನೇ ವಾರ್ಡನಲ್ಲಿ ಪಾಲಿಕೆ ಹಿರಿಯ ಸದಸ್ಯ ಅಲ್ತಾಫ್ ಕಿತ್ತೂರ ಅವರ ಪತ್ನಿ ಸಹಿರಾಬಾನು ಪರಾಭವಗೊಂಡಿದ್ದು ಅವರ ತಮ್ಮ ಮುನ್ನಾ ಕಿತ್ತೂರ ಪತ್ನಿ ವಹೀದಾ ಬಾನು ಬಾವುಟ ಹಾರಿಸಿದ್ದಾರೆ..ಕಾಂಗ್ರೆಸ್ ವೋಟ್ ಬ್ಯಾಂಕ್ ಛಿದ್ರವಾಗುವುದೆಂಬ ಮಾತು ಕೇಳಿ ಬಂದಿತ್ತಾದರೂ ಗಾಳಿ ಪಟ ಹಾರಾಟ ನಡೆಸಿದರೂ ಅಬ್ಬಯ್ಯ ತಂತ್ರಗಾರಿಕೆ ಫಲ ನೀಡಿದೆ 77ರಲ್ಲೂ ಬತುಲ್ ಕಿಲ್ಲೇದಾರ ಸೋಲುಂಡಿದ್ದು ಶ್ರೀಮತಿ ನಾಲತ್ತವಾಡ ಗೆಲುವು ಸಾಧಿಸಿದ್ದಾರೆ.

ಆರು ಪಕ್ಷೇತರರ ಪ್ರಾಬಲ್ಯ

ಹುಬ್ಬಳ್ಳಿ: ಮಹಾನಗರಪಾಲಿಕೆ ಚುನಾವಣೆ ಅಗಸ್ಟನಲ್ಲಿ ಘೋಷಣೆಯಾಗುವದೆಂದ ಕಳೆದ ಎರಡು ತಿಂಗಳಿನಿAದ ಹೇಳುತ್ತಲೇ ಬಂದ ಸಂಜೆ ದರ್ಪಣದ ಹೇಳಿಕೆ ಸುಳ್ಳಾಗದೆ ಮೊನ್ನೆ ದಿ.3ರಂದು ಚುನಾವಣೆ ನಡೆದು ಇಂದು ಮತ ಎಣಿಕೆ ನಡೆಯುವ ಮೂಲಕ 30 ತಿಂಗಳು ಚುನಾಯಿತ ಪ್ರತಿನಿಧಿಗಳಿಲ್ಲದೇ ಬಣಗುಟ್ಟುತ್ತಿದ್ದ ಪಾಲಿಕೆಗೆ ಈಗ ಹೊಸ ಕಳೆ ಬಂದಿದೆ.ಅಲ್ಲದೇ ಅನೇಕ ಹೊಸಬರು ಆಯ್ಕೆಯಾಗುವ ಮೂಲಕ ಪಾಲಿಕೆ ಅಂಗಳಕ್ಕೆ ಬಲಗಾಲಿಟ್ಟಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಮಗ್ಗುಲ ಮುಳ್ಳಾಗಿದ್ದ ಐವರು ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.
48ರಲ್ಲಿ ಕಿಶನ್ ಬೆಳಗಾವಿ, 29ರಲ್ಲಿ ಮುಂಜುನಾಥ ಬುರ್ಲಿ, 52ರಲ್ಲಿ ಚೇತನ ಹಿರೇಕರೆರೂರ, 82ರಲ್ಲಿ ಅಕ್ಷತಾ ಮೋಹನ ಅಸುಂಡಿ, 56ರಲ್ಲಿ ಚಂದ್ರಿಕಾ ಮೇಸ್ತಿç ಹಾಗೂ 69ರಲ್ಲಿ ಶಶಿ ಬಿಜವಾಡ ಪತ್ನಿ ದುರ್ಗಮ್ಮ ಬಿಜವಾಡ ಗೆಲುವು ಸಾಧಿಸಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಇರುವ 67 ವಾರ್ಡಗಳಲ್ಲಿ ಕೇವಲ ಇಬ್ಬರೇ ಪಕ್ಷೇತರರು ಆಯ್ಕೆಯಾಗಿದ್ದರು. ಮಲ್ಲಿಕಾರ್ಜುನ ಹೊರಕೇರಿ ಹಾಗೂ ಮಕ್ತುಂ ಯರಗಟ್ಟಿ ಇಬ್ಬರೂ ಅಟೋ ರಿಕ್ಷಾ ಚಿಹ್ನೆಯ ಮೇಲೆ ಗೆಲುವು ಸಾಧಿಸಿದ್ದರು.
ಈ ಬಾರಿ ಅಭ್ಯರ್ಥಿಗಳು ಗೆಲುವು ಸಾಧಿಸಿ ಹೊಸ ಲೆಕ್ಕಾಚಾರಳಿಗೆ ನಾಂಧಿ ಹಾಡಿದ್ದಾರೆ. ಗೆದ್ದವರೆಲ್ಲರೂ ಬಹುತೇಕ ಅಟೋ ರಿಕ್ಷಾ ಚಿಹ್ನೆ ಹೊಂದಿದವರಾಗಿದ್ದಾರೆ.

 

ಸೆ0ಟ್ರಲ್‌ನಲ್ಲಿ ಕಮಲಕ್ಕೆ ಆತ್ಮಾವಲೋಕನ ಕಾಲ

ಹುಬ್ಬಳ್ಳಿ : ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾದ ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲಿ ಈ ಬಾರಿ ಸಾಧನೆ ಪುನರಾವರ್ತಿಸಲು ಕಮಲ ಪಡೆ ಯಶಸ್ವಿಯಾಗಿದ್ದರೂ ಕೆಲ ವಾರ್ಡಗಳಲ್ಲಿ ಸೋಲು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕಳೆದ ಬಾರಿಯ ಕಾಂಗ್ರೆಸ್‌ನ ವಿಧಾನ ಸಭೆಯ ಅಭ್ಯರ್ಥಿಯಾಗಿದ್ದ ಡಾ.ಮಹೇಶ ನಾಲವಾಡ, ಹಾಗೂ ಜೆಡಿಎಸ್ ಅಭ್ಯರ್ಥಿ ರಾಜಣ್ಣ ಕೊರವಿ ಸಹಿತ ಸಾಮೂಹಿಕವಾಗಿ ತನ್ನಡೆಗೆ ಸೆಳೆದುಕೊಂಡಿದ್ದರೂ ಈ ಬಾರಿ ಬಿಜೆಪಿ ಹೇಳಿಕೊಳ್ಳುವ ಫಲಿತಾಂಶ ಪಡೆಯಲು ವಿಫಲವಾಗಿದೆ.ಅಲ್ಲದೇ ಕೇಸರಿ ಪಾಳೆಯಕ್ಕೆ ಇದು ಎಚ್ಚರಿಕೆಯ ಘಂಟೆಯಾಗಿ ಪರಿಣಮಿಸಿದೆ.
ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಅವರು ಪಕ್ಷದ ಎಲ್ಲ ಹಿರಿಯ ಧುರೀಣರ ಜತೆ ಸಮಾಲೋಚನೆ ನಡೆಸಿ ಮಾಡಿದ ಕಸರತ್ತು ಮೊದಲ ಬಾರಿಗೆ ಯಶ ನೀಡಿದೆ. ಸಂಘಟಿತವಾಗಿ ಕಾರ್ಯ ಮಾಡಿದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿದ್ದಾರೆ.ಸೆಂಟ್ರಲ್ ಕ್ಷೇತ್ರದಲ್ಲಿ ಅನೇಕ ವಾರ್ಡಗಳಲ್ಲಿ ಬಿಜೆಪಿಯ ಟಿಕೆಟ್ ಹಂಚಿಕೆಯ ಲಾಭ ಅಲ್ಲದೇ ಕೆಲವರು ಬಂಡಾಯವಾಗಿ ಸ್ಪರ್ಧಿಸಿದುದು ಸ್ವಲ್ಪ ಮಟ್ಟಿಗೆ ಕೈಗೆ ವರವಾಗಿ ಪರಿಣಮಿಸುತ್ತದೇ ಎಂಬ ಮಾತು ಇತ್ತಾದರೂ ಬಂಡುಕೋರರು ವಿಫಲವಾಗಿದ್ದು ರೂಪಾ ಶೆಟ್ಟಿ (47) ಹಾಗೂ ಸರಸ್ವತಿ ಧೋಂಗಡಿ ( 54) ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಾಲಿಗೆ ಪಕ್ಷವನ್ನು ಮತ್ತೆ ಈ ಕ್ಷೇತ್ರದಲ್ಲಿ ಪುನಃ ಚೇತರಿಕೆ ಮಾಡಬಹುದು ಎಂಬ ಸಕಾರಾತ್ಮಕ ಸಂದೇಶ ತಂದುಕೊಟ್ಟಿದೆ.
ಹಿರಿಯ ಸದಸ್ಯ ಮಾಜಿ ಮೇಯರ್ ಡಾ.ಪಾಂಡುರAಗ ಪಾಟೀಲ, ಮಾಜಿ ಸಿಎಂ ನಿವಾಸಕ್ಕೆ ಹೊಂದಿಕೊAಡಿರುವ ವಾರ್ಡ ನಂ 45ರಲ್ಲಿ ಮಣಿಕಂಠ ಶ್ಯಾಗೋಟಿ, ಎಸ್ ಸಿ ಮೋರ್ಚಾದ ಮಹೇಂದ್ರ ಕೌತಾಳ, ಮುಂತಾದವರು ಪರಾಭವಗೊಂಡಿರುವುದು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ.
ಕಳೆದ ಬಾರಿ 19 ವಾರ್ಡಗಳಲ್ಲಿ ಬಿಜೆಪಿ 11, ಕಾಂಗ್ರೆಸ್ 7 ಹಾಗೂ 1 ಜೆಡಿಎಸ್ ಗೆದ್ದಿತ್ತು.

ಪೂರ್ವದಲ್ಲಿ ಕಾಂಗ್ರೆಸ್ ಮೇಲ್ನೋಟದ ಮೇಲುಗೈ

ಹುಬ್ಬಳ್ಳಿ : ಅವಳಿನಗರದ ಕಾಂಗ್ರೆಸ್ ಪ್ರಾಬಲ್ಯದ ಅಲ್ಲದೇ ಪ್ರಸಾದ ಅಬ್ಬಯ್ಯರಂತಹ ಜನಾನುರಾಗಿ ಶಾಸಕರ ಪೂರ್ವ ಕ್ಷೇತ್ರದಲ್ಲಿ ಅತ್ಯಧಿಕ ಸ್ಥಾನಗಳ ಗೆಲುವು ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದ್ದರೂ ಓವೈಶಿ ಪಕ್ಷದ ಹೊಡೆತ ಸ್ವಲ್ಪ ಮಟ್ಟಿಗೆ ಬಿದ್ದಿದೆ.


ಸುಮಾರಿ 11 ವಾರ್ಡಗಳಲ್ಲಿ ಎಐಎಂಐಎ0, ಅಲ್ಲದೇ ಬಿಜೆಪಿಯ ನೇರ ಸೆಡ್ಡು, ಅಲ್ಲದೇ ಗಣೇಶ ಟಗರಗುಂಟಿಯAತಹ ಪ್ರಭಲರ ಬಂಡಾಯದ ಮಧ್ಯೆಯೂ 23 ಸ್ಥಾನಗಳಲ್ಲಿ 11 ಗೆದ್ದು ಮತ್ತೆ ತನ್ನ ಪ್ರಾಬಲ್ಯ ಮೆರೆದಿದೆ.
ಟಿಕೆಟ್ ಹಂಚಿಕೆಯನ್ನು ಮೊದಲೇ ಮಾಡಿ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದ ಪ್ರಸಾದ ಅಬ್ಬಯ್ಯಗೆ ಕೆಲ ಎಂಐಎA ಮುಖಂಡರು ಓವೈಸಿ ಕರೆಸಿ ಶಾಸಕರನ್ನು ವೆಂಟಿಲೇಟರ್‌ನಲ್ಲಿ ಇಡಿಸುವುದಾಗಿ ಹೇಳಿದ್ದನ್ನು ಸವಾಲಾಗೇ ಸ್ವೀಕರಿಸಿ ಎಲ್ಲ ಸಮುದಾಯದವರನ್ನು ಒಟ್ಟಿಗೆ ಕರೆದೊಯ್ದು ತಾವು ಜನರೊಂದಿಗಿರುವ ಶಾಸಕ ಎಂಬುದನ್ನು ತೋರಿಸಿ ಹಿಡಿತ ಸಾಧಿಸಿದ್ದಾರೆ.

64ರಲ್ಲಿ ಭರವಸೆ ಮೂಡಿಸಿದ್ದ ಸುರೇಖಾ ಕುಲಕರ್ಣಿ ಪರಾಭವಗೊಂಡಿದ್ದು ಕಮರಿಪೇಟೆಯಲ್ಲಿ ಮೊದಲ ಬಾರಿ ಕೈ ಜಯಬೇರಿ ಬಾರಿಸಿದೆ. ಕಳೆದ ಬಾರಿ ಸೋಲುಂಡ ನಂತರ ಕಾಲಿಗೆ ಚಕ್ರ ಕಟ್ಟಿಕೊಂಡೆ ಕಾರ್ಯ ಮಾಡಿದ್ದ ಪ್ರಕಾಶ ಬುರಬರೆ ಸುನೀತಾ ಬುರಬುರೆ ಗೆಲುವಿನ ಸಿಹಿ ಉಂಡಿದ್ದಾರೆ.69 ಹಾಗೂ 82 ರಲ್ಲಿ ಪಕ್ಷೇತರರ ಗೆಲುವು ಸಾಧಿಸಿದ್ದಾರೆ. 66ರಲ್ಲಿ ಬಿಜೆಪಿಯ ಪ್ರೀತಿ ಖೋಡೆ ಗೆಲುವು ಸಾಧಿಸಿದ್ದಾರೆ.
ಕಳೆದ ಬಾರಿ 20 ಕ್ಷೇತ್ರಗಳಲ್ಲಿ ಬಿಜೆಪಿ 8, ಕಾಂಗ್ರೆಸ್ 7, 3 ಜೆಡಿಎಸ್, ಒಂದು ಪಕ್ಷೇತರ ಹಾಗೂ 1 ಕೆಜೆಪಿ ಪಾಲಾಗಿತ್ತು.

 

administrator

Related Articles

Leave a Reply

Your email address will not be published. Required fields are marked *