ಬೆ0ಗಳೂರು: ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದಲ್ಲಿ ಮಂತ್ರಿಭಾಗ್ಯ ದೊರೆತಿದೆ.
ಮಾಜಿ ಸಿಎಂ ಜಗದೀಶ ಶೆಟ್ಟರ ಸ್ವಾಭಿಮಾನದಿಂದ ಸಚಿವ ಸಂಪುಟದಿAದ ದೂರವುಳಿದ ಹಿನ್ನೆಲೆಯಲ್ಲಿ ಹಿರಿತನಕ್ಕೆ ಹಾಗೂ ಗ್ರಾಮೀಣಕ್ಕೆ ಸಚಿವಸ್ಥಾನ ದೊರೆಯಲೆಂಬ ಕೂಗಿಗೆ ಕೊನೆಗೂ ಹೈಕಮಾಂಡ್ ಮನ್ನಣೆ ಹಾಕಿದ್ದು ಬೆಳಗಿನ ಜಾವದ ವೇಳೆಗೆ ಅಂತಿಮಗೊAಡು ಅವಕಾಶ ನೀಡಲಾಗಿದೆ.
ಅನೇಕ ನೀರಾವರಿ ಯೋಜನೆಗಳನ್ನು ನವಲಗುಂದ ಕ್ಷೇತ್ರಕ್ಕೆ ತಂದ ಮುನೇನಕೊಪ್ಪ ಅವರು ಹಾಗೂ ದಿಢೀರ್ ಸಿಎಂ ರೇಸ್‌ಗೆ ಬಂದಿದ್ದ ಅರವಿಂದ ಬೆಲ್ಲದ ಮಧ್ಯೆ ಧಾರವಾಡ ಜಿಲ್ಲೆ ಪ್ರಾತಿನಿಧ್ಯಕ್ಕಾಗಿ ತೀವ್ರ ಪೈಪೋಟಿ ನಡೆದಿತ್ತು. ಮಾಜಿ ಸಿಎಂ ಜಗದೀಶ ಶೆಟ್ಟರ್ ಮತ್ತು ಕೇಂದ್ರ ಸಚಿವ ಜೋಶಿಯವರ ನಿಕಟವರ್ತಿಗಳಾಗಿದ್ದು ಅಲ್ಲದೇ ಜಿಲ್ಲೆಯ ಐವರು ಶಾಸಕರ ಪೈಕಿ ಬಹುತೇಕರ ಬೆಂಬಲ ಇವರಿಗಿರುವುದು ಪ್ಲಸ್ ಆಗಿ ಪರಿಣಮಿಸಿತು.ಕೆ.ಎನ್.ಗಡ್ಡಿ ನಂತರ ಮತ್ತೊಮ್ಮೆ ನವಲಗುಂದಕ್ಕೆ ಮಂತ್ರಿ ಭಾಗ್ಯ ದೊರೆತಂತಾಗಿದೆ.
ಬಂಡಾಯ ನೆಲದ ಭರವಸೆಯ ಬೆಳಕು ಮುನೇನಕೊಪ್ಪ
ನವಲಗುಂದ : ಅಭಿವೃದ್ಧಿ ಯೋಜನೆಗಳನ್ನು ಕ್ಷೇತ್ರಕ್ಕೆ ತರುವಲ್ಲಿ ಅಲ್ಲದೇ ಜನರ ಸಂಕಷ್ಟ-ಸಮಸ್ಯೆಗಳಿಗೆ ಸ್ಪಂದಿಸುವ ವಿಚಾರದಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲುವ ನವಲಗುಂದ ಕ್ಷೇತ್ರದ ಜನತೆಯ ಮನೆ ಮನಗಳಿಗೆ ಹತ್ತಿರುವಾಗಿರುವ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಬಸವರಾಜ ಬೊಮ್ಮಾಯಿ ಮಂತ್ರಿಮ0ಡಳಕ್ಕೆ ಇಂದು ಬಲಗಾಲಿಡುವ ಮೂಲಕ ಧಾರವಾಡ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.
೨೦೧೨ರಲ್ಲಿ ಜಗದೀಶ ಶೆಟ್ಟರ್‌ರವರ ಸಂಪುಟದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ ಅನುಭವವಿರುವ ಅವರು ಯಡಿಯೂರಪ್ಪ ಸರ್ಕಾರದಲ್ಲಿ ಹಣಕಾಸು ಮತ್ತು ನಗರ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿದ್ದರು.
೨೦೦೮ರಲ್ಲಿ ಮೊದಲ ಬಾರಿ ‘ಶಕ್ತಿ ಸೌಧ’ದ ಮೆಟ್ಟಿಲು ಹತ್ತಿದ್ದು, ಅವರ ಜನಪರ ನಿಲುವಿನಿಂದಾಗಿಯೇ. ಶಂಕರ ಪಾಟೀಲರು ನವಲಗುಂದದ ಮೊದಲ ಶಾಸಕ ವಿ.ಎಸ್ ಪಾಟೀಲರ ಮೊಮ್ಮಗ ಎಂಬ ಹಣೆಪಟ್ಟಿ ಹಚ್ಚಿಕೊಂಡಿದ್ದರೂ ಅವರು ಕ್ಷೇತ್ರದ ಹಿರಿಯರ ಮತ್ತು ಯುವಕರ ನಡುವಿನ ಕೊಂಡಿಯ0ತೆ ಕೆಲಸ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ನಂಜು0ಡಪ್ಪ ವರದಿಯಲ್ಲಿ ಹಿಂದುಳಿದ ತಾಲ್ಲೂಕೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಬಂಡಾಯದ ನೆಲವಾದ ನವಲಗುಂದ ವಿಧಾನಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆಂಬ ಗುರಿ ಇಟ್ಟುಕೊಂಡೇ ಹಂತ ಹಂತವಾಗಿ ಅಭಿವೃದ್ದಿ ಮಹಾಪೂರ ಹರಿಸಿದ್ದು ಸಣ್ಣ ಸಾಧನೆಯೇನಲ್ಲ.
ನೀರಿಗಾಗಿ ಸರ್ಕಾರವನ್ನೇ ಕೆಡಹಿದ ಇತಿಹಾಸವಿರುವ ನೆಲದಲ್ಲಿ ಜನ್ಮತಳೆದು ಹನಿ ಹನಿ ನೀರಿನ ಬೆಲೆ ಅರೆತಿರುವ,ಅನ್ನದಾತನ ಸಂಕಷ್ಟ ಎಳೆ ಎಳೆ ಅರಿತಿರುವ ಮುನೇನಕೊಪ್ಪ ಅವರು ಕಾಲುವೆ ಅಂಚಿನವರೆಗೂ ಕೊನೆ ಅಂಚಿನದವರಿಗೂ ಏತ ನೀರಾವರಿ ಮೂಲಕ ನೀರು ಹರಿಸಿದ ಆಧುನಿಕ ಭಗೀರಥ ಎಂದರೆ ತಪ್ಪಾಗಲಾರದು. ಮಲಪ್ರಭಾ ಜಲಾಶಯದಿಂದ ಹೊಲಕ್ಕೆ ನೀರು ಸಿಗದೇ ವಂಚಿತರಾದ ನವಲಗುಂದ ಮತಕ್ಷೇತ್ರದ ಅಮರಗೋಳ, ಬೆಳವಟಗಿ, ಅಳಗವಾಡಿ ಮತ್ತು ಹುಣಸಿಕಟ್ಟಿ ಗ್ರಾಮಗಳ ಕಟ್ಟ ಕಡೆಯ ರೈತರ ಕನಸಿಗೆ ರೆಕ್ಕೆ ಹಚ್ಚಿದ್ದಾರೆ.2008ರಲ್ಲಿ ಈ ಭಾಗದ ರೈತರ ಸಮಸ್ಯೆ ಮನಗಂಡು ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳದಲ್ಲಿ ಒಟ್ಟು 137 ಕಿಮೀವರೆಗೆ ವ್ಯರ್ಥವಾಗಿ ಹರಿಯುತ್ತಿದ್ದ, ನೀರಿಗೆ ಏತ ನೀರಾವರಿ ಅಳವಡಿಸಿ ಕಡೆಯಂಚಿನ (ಕಟ್ಟಕಡೆಯ) ರೈತರ ಜಮೀನುಗಳಿಗೆ ನೀರು ಹರಿಸಬೇಕೆಂಬ ಮಹತ್ವದ ಯೋಜನೆ ಮತ್ತೆ ಅವರೇ ದ್ವಿತೀಯ ಬಾರಿಗೆ ಶಾಸಕರಾದಾಗಲೇ ಕಳೆದ ಇದೀಗ ಸಾಕಾರಗೊಂಡಿದ್ದು ರೈತರು ನೆಮ್ಮಯ ನಿಟ್ಟುಸಿರು ಬಿಟ್ಟಿದ್ದಾರೆ.
ಅಮರಗೋಳದಲ್ಲಿ ಬೆಣ್ಣಿಹಳ್ಳಕ್ಕೆ ಮತ್ತು ಗೊಬ್ಬರಗುಂಪಿಯಲ್ಲಿ ತುಪ್ಪರಿಹಳ್ಳಕ್ಕೆ ಎರಡು ಬಹುದೊಡ್ಡ ಏತ ನೀರಾವರಿ ಯೋಜನೆಗೆ ೨೦೧೨ರಲ್ಲಿ ಆಗಿನ ಶಾಸಕ ಮತ್ತು ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿಯಾಗಿದ್ದ ಶಂಕರಪಾಟೀಲ ಅವರು ೪೮ ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದರು. ಆಗಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಾಮಗಾರಿ ಉದ್ಘಾಟಿಸಿದ್ದರು. ಅಂದಿನಿ0ದ ಏತನೀರಾವರಿ ಯೋಜನೆ ಕಾರಣಾಂತರಗಳಿ0ದ ವಿಳಂಭಗೊ0ಡು ಮತ್ತೆ ಬಿಜೆಪಿ ಸರ್ಕಾರದಲ್ಲಿಯೇ 6.22ಕೋಟಿ ರೂ., ಹೆಚ್ಚುವರಿ ಅನುದಾನ ಪಡೆಯುವ ಮೂಲಕ ಒಟ್ಟು 54 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. ಎರಡು ಏತ ನೀರಾವರಿಗಳನ್ನು ಕಳೆದ ಡಿಸೆಂಬರ್ 18ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಚಾಲನೆ ನೀಡಿರುವುದು ಮುನೇನಕೊಪ್ಪ ಅವರ ಅನ್ನದಾತರ ಬಗೆಗಿನ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ.
ಒಂದುವರೆ ದಶಕದ ಹಿಂದೆಯೇ ಮಹದಾಯಿಗಾಗಿ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೊಂದಿಗೆ ನರಗುಂದವರೆಗೆ ನಡೆದ ಪಾದಯಾತ್ರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರಲ್ಲದೇ ತದನಂತರ ಅನುಷ್ಠಾನಗೊಳಿಸಲು ವಿವಿಧ ರೈತ ಸಂಘಟಕರನ್ನು ಗೋವಾ ರಾಜ್ಯದವರೆಗೆ ಕರೆದೊಯ್ದದ್ದಲ್ಲದೇ ಅಲ್ಲಿನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ ಮಾತುಕತೆ ಮೂಲಕ ಯೋಜನೆ ಅನುಷ್ಠಾನಕ್ಕೆ ಸಹಕಾರ ನೀಡುವಂತೆ ಮನವೊಲಿಸುವ ಪ್ರಯತ್ನ ನಡೆಸಿದ್ದರು.