ಹುಬ್ಬಳ್ಳಿ-ಧಾರವಾಡ ಸುದ್ದಿ

ಮಕ್ಕಳಿಗೆ ಸಂಸ್ಕೃತಿಯ ಪರಿಚಯ ಅಗತ್ಯ

ಧಾರವಾಡ: ಹಬ್ಬದ ಆಚರಣೆಯ ಮಹತ್ವ, ಸಂದೇಶಗಳ ಪರಿಚಯ ಇಂದಿನ ಮಕ್ಕಳಿಗೆ ಅತಿ ಅವಶ್ಯ ಎಂದು ಜೆ.ಎಸ್.ಎಸ್ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸಿ.ಬಿ.ಎಸ್.ಇ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಶ್ವಿ
ಪೂಜಾ ರವಿಕುಮಾರ ತುರಮರಿ ಅವರ ಮಗಳು ಜಶ್ವಿ

ಹಬ್ಬ ಹರಿದಿನಗಳು ನಮ್ಮ ಸಂಸ್ಕೃತಿ ಪರಂಪರೆಯ ಪರಿಚಯ ಮಾಡಿಕೊಡುವ ಸಂದರ್ಭ. ಪ್ರತಿ ಹಬ್ಬದಿಂದ ನಾವು ಒಂದು ಒಳ್ಳೆಯ ಸಂದೇಶ ಪಡೆಯುತ್ತೇವೆ. ಆದ್ದರಿಂದ ಹಬ್ಬಗಳ ಸಂದೇಶಗಳ ಪರಿಚಯ ಮಕ್ಕಳಿಗೆ ಬೇಕು ಎಂದರು.

ಇವಾಂಶ
ಶ್ವೇತಾ ವಿಶ್ವನಾಥ ಸುಂಕದ ಅವರ ಮಗ ಇವಾಂಶ

ಕೋರೋನಾದಂತಹ ಮಹಾಮಾರಿಯಿಂದ ಮಕ್ಕಳು ಶಾಲೆಯಿಂದ ದೂರ ಉಳಿದಿರುವುದು ಅತ್ಯಂತ ವಿಷಾದನೀಯ. ಆದರೆ ಅನಿವಾರ್ಯ. ಆಟವಾಡಿ ಪಾಠ ಕಲಿಯುವ ಮಕ್ಕಳಿಗೆ ಗೃಹ ಬಂಧನವಾಗಿತ್ತು. ಇದೀಗ ಶಾಲೆ ಪ್ರಾರಂಭವಾಗಿರುವದರಿಂದ ಅತ್ಯಂತ ಸಂಭ್ರಮದಿಂದ ಮಕ್ಕಳು ಶಾಲೆಗೆ ಆಗಮಿಸುತ್ತಿದ್ದಾರೆ. ಹಲವಾರು ಸುರಕ್ಷತಾ ಕ್ರಮಗಳೊಂದಿಗೆ ಶಾಲೆ ಪ್ರಾರಂಭಿಸಲಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಮನೋಲ್ಲಾಸ, ಓದಿಗೆ ಪ್ರೇರಣೆ ನೀಡುತ್ತವೆ ಎಂದು ಅಭಿಪ್ರಾಯ ಪಟ್ಟರು.

ಪಾರ್ಥ
ಹುಬ್ಬಳ್ಳಿಯ ವಿದ್ಯಾನಗರ ನಿವಾಸಿ ಮೇಘಾ ಶಿವಯೋಗೇಶ್ವರಯ್ಯ ಹಿರೇಮಠ ಅವರ ಪುತ್ರ ಪಾರ್ಥ ಕೃಷ್ಣನ ವೇಷದಲ್ಲಿ ಕಾಣಿಸಿಕೊಂಡಿದ್ದು ಹೀಗೆ.

ಕೃಷ್ಣ, ರಾಧೆ ವೇಷ ಧರಿಸಿ ಹಲವಾರು ಮಕ್ಕಳು ಕೃಷ್ಣನ ಪಲ್ಲಕ್ಕಿಯ ಮೆರವಣಿಗೆಯಲ್ಲಿ ಭಾಗವಹಿಸಿ ಸಂಭ್ರಮ ಪಟ್ಟರು. ಈ ಸಂದರ್ಭದಲ್ಲಿ ಪ್ರಾಚಾರ್ಯೆ ಸಾಧನಾ. ಎಸ್., ಮಹಾವೀರ ಉಪಾದ್ಯೆ, ರಜನಿ ದಾಸ ಇನ್ನಿತರರು ಉಪಸ್ಥಿತರಿದ್ದರು.

ತನ್ವಿಕ ಅಷ್ಟಗಿ, ಧಾರವಾಡ
ವಂಶಿಕಾ ಶೆಟ್ಟಿ, ಧಾರವಾಡ
ಆರವ ಭರಬರೆ, ಧಾರವಾಡ
ಪವಣಿ ಪಾಲೇಕರ
administrator

Related Articles

Leave a Reply

Your email address will not be published. Required fields are marked *