ಹುಬ್ಬಳ್ಳಿ: ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿನ ಅನೇಕರು ಬಂಡಾಯದ ಬಾವುಟ ಹಾರಿಸಿದ್ದು, ಪಕ್ಷದ ಅಭ್ಯರ್ಥಿ ಗೆಲುವಿಗೆ ತೊಡರಾಗುವ ಸಾಧ್ಯತೆಗಳಿದ್ದು ಅಂತವರನ್ನು ಚುನಾವಣಾ ಕಣದಿಂದ ಹಿಂದಕ್ಕೆ ಸರಿಸುವ ಯತ್ನಕ್ಕೆ ಉಭಯ ಪಕ್ಷಗಳು ಮುಂದಾಗಿವೆ.
ಮಾಜಿ ಮೇಯರ್, ಉಪಮೇಯರ್,ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯ, ಪಕ್ಷದ ವಿವಿಧ ಘಟಕಗಳ ಮುಖಂಡರು, ಅವರ ಸಂಬAಧಿಗಳು ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಅಖಾಡಕ್ಕೆ ಇಳಿದಿದ್ದು.ಅನೇಕರಿಗೆ ವರವಾಗುವ ಸಾಧ್ಯತೆಗಳೂ ಇದ್ದು ಇದು ಎರಡು ಪಕ್ಷಗಳ ತಲೆನೋವಿಗೆ ಕಾರಣವಾಗಿದೆ.
ನಾಮಪತ್ರ ಹಿಂತೆಗೆದುಕೊಳ್ಳಲು ನಾಳೆ ಮಧ್ಯಾಹ್ನ 3ರವರೆಗೆ ಅವಕಾಶವಿದೆ.
ಸ್ವಾಭಿಮಾನಿ ನಡೆ, ಪಕ್ಷ ಬದಿಗಿಡಿ ಎನ್ನುವ ಮೂಲಕ ಈಗಾಗಲೇ ಪರಿಚಿತವಾಗಿರುವ ವಾರ್ಡನಲ್ಲಿ ಚಿಹ್ನೆ ದೊರೆಯದೇ ಇದ್ದರೂ ಪ್ರಚಾರ ನಡೆಸಿದ್ದಾರೆ.
ತಮ್ಮ ಹಿಂಬಾಲಕರನ್ನು ಗೆಲ್ಲಿಸಲೇಬೇಕೆಂದು ಪಣತೊಟ್ಟಿರುವ ಕೆಲ ಮುಖಂಡರು ಅನೇಕರ ಮೇಲೆ ತೀವ್ರ ಒತ್ತಡ ಹೇರುತ್ತಿದ್ದು, ಇನ್ನು ಕೆಲ ಬಂಡಾಯ ಅಭ್ಯರ್ಥಿಗಳು ಸ್ವಿಚ್ ಆಫ್ ಮಾಡಿದ್ದು, ನಾಳೆ 3ರ ನಂತರ ಆನ್ ಆಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಮಂಜು ನಡಟ್ಟಿ, ಸರಸ್ವತಿ ಭಂಗಿ, ಮಂಜುನಾಥ ಚೋಳಪ್ಪನವರ, ಸೂರಜ್ ಪುಡಕಲಕಟ್ಟಿ, ವಿಜಯಕುಮಾರ ಅಪ್ಪಾಜಿ, ಮಂಜುಳಾ ಅಕ್ಕೂರ, ಲಕ್ಷ್ಮಿ ಉಪ್ಪಾರ, ಯಶೋಧಾ ಗಂಡಗಾಳೇಕರ, ಸಂತೋಷ ಶೆಟ್ಟಿ, ಹೂವಪ್ಪ ದಾಯಗೋಡಿ, ಕಲ್ಪನಾ ರವಿ ನಾಯಕ, ಮಹಾಂತೇಶ ಗಿರಿಮಠ ಮುಂತಾದವರು ಬಿಜೆಪಿಗೆ ಮಗ್ಗುಲ ಮುಳ್ಳುಗಳಾಗಿದ್ದರೆ. ಸುಧಾ ಮಣಿಕುಂಟ್ಲ, ಗಣೇಟ ಟಗರಗುಂಟಿ, ಅಕ್ಷತಾ ಅಸುಂಡಿ, ಶಮೀರಖಾನ್, ಚಂದ್ರಿಕಾ ಮೇಸ್ತ್ರಿ, ಮುಂತಾದವರು ಕಾಂಗ್ರೆಸ್ಗೆ ತೊಡಕಾಗುವ ಲಕ್ಷಣಗಳಿವೆ.
ಬಹುಮತ ಪಡೆಯಲು ಒಂದೊ0ದು ಸ್ಥಾನವೂ ಮುಖ್ಯವಾಗಿದ್ದು,
ಅಭ್ಯರ್ಥಿಗಳ ಸಂಬ0ಧಿಗಳು, ಸ್ನೇಹಿತರ ಮೂಲಕವೂ ನಾಮಪತ್ರ ಹಿಂತೆಗೆದುಕೊಳ್ಳುವAತೆ ಅಲ್ಲದೇ ಸೂಕ್ತ ಸ್ಥಾನದ ಭರವಸೆ ನೀಡುತ್ತಿದ್ದು, ನಾಳೆ ಸಂಜೆ ವೇಳೆಗೆ ಸ್ಪಷ್ಟ ಚಿತ್ರಣ ಹೊರಬರಲಿದೆ.
ಆಪ್ ಅಭ್ಯರ್ಥಿಗಳಿಗೆ ಬೆದರಿಕೆ!
ಉಣಕಲ್ ಪ್ರದೇಶದಲ್ಲಿ 36 ಮತ್ತು 38ನೇ ವಾರ್ಡಗಳಲ್ಲಿ ಅವಿರೋಧ ಆಯ್ಕೆಗೆ ಸಾಮ, ಭೇದ, ದಂಡದ ಪ್ರಯೋಗ ಮುಂದುವರಿದಿದ್ದು, ಅಭ್ಯರ್ಥಿಗಳಿಗೆ ಮಾನಸಿಕ ಒತ್ತಡ ಹಾಕಿ ಬೆದರಿಸುವ ತಂತ್ರ ಮುಂದುವರಿದಿದೆ ಎನ್ನಲಾಗಿದೆ.
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಎಂ.ಬಿ. ಹಿರೇಮಠ(36) ಹಾಗೂ ಮಲ್ಲಪ್ಪ ತಡಸದ (38) ಇವರ ಮೇಲೆ ತೀವ್ರ ಒತ್ತಡ ಹೇರುವ ಯತ್ನ ಮುಂದುವರಿದಿದ್ದು, ಈ ಬಗೆಗೆ ಪಕ್ಷದ ಪ್ರಮುಖರು ಡಿಸಿ ಕಚೇರಿಯ ಬಾಗಿಲು ತಟ್ಟಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸ್ಥಳೀಯರಾದಲ್ಲಿ ಈ ತಂತ್ರಗಾರಿಕೆ ಮಾಡಿ ಹಿಂತೆಗೆಸುವ ಯತ್ನ ದಟ್ಟವಾದ ಹಿನ್ನೆಲೆಯಲ್ಲಿ ಬೇರೆ ಪ್ರದೇಶದವರನ್ನು ಕಣಕ್ಕಿಳಿಸಿದೆ.
’ತೋಳನಕೆರೆ’ಯಲ್ಲಿ ಕೊಚ್ಚಿ ಹೋದ ಬುರ್ಲಿ ಟಿಕೆಟ್!
ಹುಬ್ಬಳ್ಳಿ : ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯಲ್ಲಿ ಅತ್ಯಂತ ಪ್ರತಿಷ್ಠಿತ ಕ್ಷೇತ್ರ ಹಣೆ ಪಟ್ಟಿ ಹಚ್ಚಿಕೊಂಡಿದ್ದ 48ನೇ ವಾರ್ಡನಲ್ಲಿ ಮಾಜಿ ಕಾರ್ಪೋರೇಟರ್ ಅಲ್ಲದೇ ಮಾಜಿ ಸಿಎಂ ಜಗದೀಶ ಶೆಟ್ಟರ್ ಅತ್ಯಂತ ನಿಕಟವರ್ತಿ ಮಹೇಶ ಬುರ್ಲಿಗೆ ಟಿಕೆಟ್ ತಪ್ಪಿಸುವಲ್ಲಿ ಅವರ ವಿರೋಧಿ ಬಣ ಯಶಸ್ವಿಯಾಗಿದೆ.
ಅನೇಕ ಅಭಿವೃದ್ದಿ ಕಾರ್ಯ, ಟೆಂಡರ್ ಶ್ಯೂರ್ ರಸ್ತೆ ಸಹಿತ ಅನೇಕ ರಸ್ತೆಗಳನ್ನು ಮಾಡಿದ್ದರೂ ತೋಳನಕೆರೆ ಅಭಿವೃದ್ದಿ ವಿಷಯದಲ್ಲಿ ಬುರ್ಲಿ ಹೆಸರು ಪದೇ ಪದೇ ಕೇಳಿ ಬಂದು ಈಗ ಟಿಕೆಟ್ ಅದರಲ್ಲೇ ಕೊಚ್ಚಿ ಹೋದಂತಾಗಿದೆ.ಬಿಜೆಪಿಯ ಗಂಡು ಮೆಟ್ಟಿನ ವಾರ್ಡಗಳ ಪೈಕಿ ಒಂದಾದ ಈ ಪ್ರದೇಶದಲ್ಲಿ ಕಾರ್ಯಕರ್ತರೊಂದಿಗಿನ ಅವರ ವರ್ತನೆ ಮುಳುಗು ನೀರು ತಂದಿತು ಎನ್ನಲಾಗುತ್ತಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲೇ ಸ್ವತಃ ಶೆಟ್ಟರ್ಗೂ ಈ ಬಿಸಿ ತಟ್ಟಿತ್ತು.ಕೆಲವೆಡೆ ಅವರನ್ನು ದೂರವಿಟ್ಟೇ ಪ್ರಚಾರ ನಡೆಸಿದ್ದರು.
ಶೆಟ್ಟರ್ ಆಪ್ತ ವಲಯದಲ್ಲಿನ ಬಹುತೇಕರೆಲ್ಲಾ ಟಿಕೆಟ್ ಗಿಟ್ಟಿಸಿಕೊಂಡಿದ್ದು ಇವರಿಗೂ ನಿಶ್ಚಿತ ಎಂದೇ ಭಾವಿಸಲಾಗಿದ್ದರೂ,ಅಂತಿಮವಾಗಿ ಬುರ್ಲಿಗೆ ಟಿಕೆಟ್ ನಿರಾಕರಿಸಿ ವಾರ್ಡಿನ ಮಾಜಿ ಅಧ್ಯಕ್ಷ ರವಿರಾಜ ಕೊಡ್ಲಿಯವರಿಗೆ ನೀಡಲಾಗಿದೆ.ಅಲ್ಲದೇ ಇದೇ ವಾರ್ಡಿನಿಂದ ಪಕ್ಷೇತರಳಾಗಿ ವಾರ್ಡ ಉಪಾಧ್ಯಕ್ಷೆ ಸಂಗೀತಾ ಇಜಾರದ ಕಣಕ್ಕಿಳಿದಿರುವುದು ಎಲ್ಲರ ನಿದ್ದೆಗೆಡಿಸುವಂತೆ ಮಾಡಿದೆ.
ಮೊದಲಿಂದಲೂ ಟಿಕೆಟ್ ಆಕಾಂಕ್ಷಿಯಾಗಿದ್ದ ಇಜಾರದಗೆ ಕೆಲ ಬಡಾವಣೆಗಳ ನಾಗರಿಕರೇ ಆರ್ಥಿಕ ನೆರವನ್ನು ನೀಡಿ ಪ್ರಚಾರಕ್ಕೆ ತಾವೇ ಮುಂದಾಗಿರು ವುದು ಹೊಸ ಬೆಳವಣಿಗೆಯಾಗಿದೆ. ಕಾಂಗ್ರೆಸ್ನಿ0ದ ಇಲ್ಲಿ ಮಾಲತೇಶ ಗುಡೇನಕಟ್ಟಿ ಸ್ಪರ್ಧಿಯಾಗಿದ್ದಾರೆ.
ಬಂಡಾಯ ಶಮನ ವಿಶ್ವಾಸ
ಹುಬ್ಬಳ್ಳಿ: ಟಿಕೆಟ್ ಕೈತಪ್ಪಿ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದವರ ಮನವೊಲಿಸುವ ಯತ್ನ ನಡೆದಿದೆ.ಅದಕ್ಕೆ ಅನೇಕರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.
ಸಂಜೆ ದರ್ಪಣದೊಂದಿಗೆ ಮಾತನಾಡಿದ ಅವರು ಪಕ್ಷದ ಅನೇಕ ನಿಷ್ಟಾವಂತರು ನಾಮಪತ್ರ ಸಲ್ಲಿಸಿದ್ದು, ಅವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಅಧಿಕೃತ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಹೇಳುತ್ತೇವೆ.ಬಹುತೇಕ ಕಡೆ ಶಮನವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಧಾರವಾಡ ಗ್ರಾಮೀಣದ ಜವಾಬ್ದಾರಿ ಶಾಸಕ ಅಮೃತ ದೇಸಾಯಿ, ಸೆಂಟ್ರಲ್ ಜವಾಬ್ದಾರಿ ಪ್ರದೀಪ ಶೆಟ್ಟರ್, ಪಶ್ಚಿಮದ್ದನ್ನು ಶಾಸಕ ಅರವಿಂದ ಬೆಲ್ಲದ ಹಾಗೂ ಪೂರ್ವ ಕ್ಷೇತ್ರದಲ್ಲಿನ ಬಂಡಾಯದ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಉಸ್ತುವಾರಿ ಸಚಿವ ಶಂಕರ ಪಾಟೀಲ ಹಾಗೂ ತಾವು ಬಗೆಹರಿಸಲು ಯತ್ನ ನಡೆಸಿರುವುದಾಗಿ ಹೇಳಿದರು.
ಎಲ್ಲ ವಾರ್ಡ್ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು,ಎಲ್ಲ ನಾಮಪತ್ರಗಳು ಕ್ರಮಬದ್ದವಾಗಿದ್ದು ನಾಳೆ ಮಧ್ಯಾಹ್ನದೊಳಗೆ ಬಹುತೇಕ ಕಡೆ ಸಮಸ್ಯೆ ಬಗೆಹರಿಯಲಿದೆ ಎಂದರು.
ಈಗಾಗಲೇ ಆಯಾ ಬ್ಲಾಕ್ ಅಧ್ಯಕ್ಷರುಗಳಿಗೆ ಸ್ಥಳೀಯ ಪ್ರಮುಖ ಮುಖಂಡರನ್ನು ಇಟ್ಟುಕೊಂಡು ಪಕ್ಷೇತರರಾಗಿ ಸ್ಪರ್ಧೆಗಿಳಿದವರ ಜತೆ ಚರ್ಚಿಸಿ ಹಿಂದೆಗೆಸುವ0ತೆ ಸೂಚಿಸಲಾಗಿದೆ.ಅನೇಕರು ಈಗಾಗಲೇ ಈ ಪ್ರಯತ್ನದಲ್ಲಿದ್ದು ಅನೇಕ ಕಡೆ ಯಶಸ್ವಿಯಾಗುವ ವಿಶ್ವಾಸವಿದೆ.
ಅಲ್ತಾಫ್ಹುಸೇನ ಹಳ್ಳೂರ
ಮಹಾನಗರ ಅಧ್ಯಕ್ಷರು