ಹುಬ್ಬಳ್ಳಿ: ಜಾತ್ಯಾತೀತ ಜನತಾದಳದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ನೂತರ ಅಧ್ಯಕ್ಷರಾಗಿ ಧಾರವಾಡದ ಗುರುರಾಜ ಹುಣಸಿಮರದ ನೇಮಕಗೊಂಡಿದ್ದಾರೆ.
ನಗರದಲ್ಲಿAದು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕ ಎನ್ ಎಚ್ ಕೋನರೆಡ್ಡಿ ಈ ವಿಷಯ ಅಧಿಕೃತವಾಗಿ ಪ್ರಕಟಿಸಿದರು.
ದಿ.೧೭ರಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಈ ಆಯ್ಕೆ ಮಾಡಲಾಗಿದೆ.ಇಬ್ಬರು ಕಾರ್ಯಾಧ್ಯಕ್ಷರಾಗಿ ಗಜಾನನ ಅಣ್ವೇಕರ್, ಸಾದೀಕ ಹಕಿಂ ನಿಯುಕ್ತಿಗೊಂಡಿದ್ದು ಐವರು ಉಪಾಧ್ಯಕ್ಷರಾಗಿ ವೆಂಕಟೇಶ ಸಗಬಾಲ, ಐ.ಎಂ.ನದಾಫ, ಗುರಯ್ಯ ವಿರಕ್ತಮಠ, ಸಿದ್ದು ತೇಜಿ, ಸುರೇಶ ಹಿರೇಮಠ ನೇಮಕಗೊಂಡಿದ್ದಾರೆAದರು.
ಖಜಾಂಚಿಯಾಗಿ ತುಳಸಿಕಾಂತ ಖೋಡೆ, ಪ್ರಧಾನ ಕಾರ್ಯದರ್ಶಿಗಳಾಗಿ ಸಂಜಯ ಅಳಗುಂಡಗಿ, ನವೀನ ಮಡಿವಾಳರ, ಇರ್ಷಾದ ಭದ್ರಾಪೂರ, ಶಾಂತವೀರ ಬೆಟಗೇರಿ, ದೇವರಾಜ ಕಂಬಳಿ ಸಹಿತ ಐವರನ್ನು ನೇಮಕ ಮಾಡಲಾಗಿದೆ ಎಂದರು.
ಪಕ್ಷ ಅವಳಿನಗರದಲ್ಲಿ ಅಸ್ಥಿತ್ವ ಹೊಂದಿದ್ದು ನೂತನ ಪದಾಧಿಕಾರಿಗಳ ನೇತ್ರತ್ವದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ತೋರಲಿದ್ದು, ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದರು.
ಹೊರಟ್ಟಿಯವರು ಸಂಘದ ಕಚೇರಿಗೆ ಹೋಗಿದ್ದು ತಾವೂ ಹೋಗುವಿರೋ ಎಂದು ಕೇಳಿದಾಗ ತಾವು ಸಂಘದ ಕಚೇರಿ ಮೆಟ್ಟಿಲು ಹತ್ತುವುದಿಲ್ಲ.ಬೇಕಾದರೆ ರಾಜಕೀಯ ನಿವೃತ್ತಿ ಪಡೆಯುವೆ ಎಂದರು.
ಮುಖAಡರಾದ ರಾಜು ಅಂಬೋರೆ, ಸಾಧಿಕ ಹಕೀಂ ಸಹಿತ ಇತರರು ಗೋಷ್ಠಿಯಲ್ಲಿದ್ದರು.
ಮಹಾನಗರ ಅಧ್ಯಕ್ಷ ಹುದ್ದೆಗೆ ಹುಣಸೀಮರದ ಹಾಗೂ ಗಜಾನನ ಅಣ್ವೇಕರ ನಡುವೆ ಪೈಪೋಟಿಯಿದ್ದು ಇಬ್ಬರಲ್ಲೊಬ್ಬರು ತೆನೆ ಭಾರ ಹೊರುವರೆಂಬುದನ್ನು ಸಂಜೆ ದರ್ಪಣ ದಿ. ೧೬ರ ಸಂಚಿಕೆಯಲ್ಲಿ ಪ್ರಕಟಿಸಿತ್ತು.