ಹುಬ್ಬಳ್ಳಿ-ಧಾರವಾಡ ಸುದ್ದಿ

ಯಾವುದೇ ಪ್ರಭಾವಕ್ಕೂ ಕಾರ್ಯಾಚರಣೆ ನಿಲ್ಲದು; ಲಕಮನಹಳ್ಳಿಯ ೫ ಅಕ್ರಮ ಲೇಔಟ ತೆರವು

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಲಕಮನಹಳ್ಳಿ ಗ್ರಾಮದಲ್ಲಿ ಸುಮಾರು ೧೩ ಎಕರೆಯಲ್ಲಿನ ೫ ಅನಧಿಕೃತ ಲೇಔಟಗಳನ್ನು ತೆರವುಗೊಳಿಸಲಾಯಿತು.
ಇದೆ ಸಂದರ್ಭದಲ್ಲಿ ಮಾತನಾಡಿದ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅನಧಿಕೃತ ಲೇಔಟಗಳಿಗೆ ಬಡ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಪಶು ಆಗುತಿದ್ದು, ಹೀಗಾಗಿ ಅದನ್ನು ತಡೆಯುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಡೆಸುತ್ತಿರುವ ಕಾರ್ಯಾಚರಣೆ ಯಾವುದೇ ಪ್ರಭಾವಕ್ಕೂ ಮಣಿಯುವುದಿಲ್ಲ, ನಿಲ್ಲಿಸುವುದಿಲ್ಲ ಖಡಕ್ ಎಚ್ಚರಿಕೆ ನೀಡಿದರು.
ಹುಡಾ ಸದಸ್ಯರಾದ ಚಂದ್ರಶೇಖರ ಗೋಕಾಕ, ಸುನೀಲ ಮೊರೆ, ಮೀನಾಕ್ಷಿ ಒಂಟಮುರಿ, ಆಯುಕ್ತ ಎನ್ ಹೆಚ್ ಕುಮ್ಮಣ್ಣನವರ, ನಗರ ಯೋಜಕ ಸದಸ್ಯರಾದ ವಿವೇಕ ಕಾರೇಕರ, ಕಾರ್ಯನಿರ್ವಾಹಕ ಅಧಿಕಾರಿ ಎಂ ರಾಜಶೇಖರ್, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಕೊಕ್ಕಳಕಿ, ಉಮೇಶ್ ಬೇವೂರ್, ಇಂಜಿನಿಯರಾದ ಬಸವರಾಜ ದೇವಗಿರಿ, ಮುಕುಂದ ಜೋಶಿ, ಬಡಿಗೇರ ಇದ್ದರು.

ಬಾಕ್ಸ
೨೯ಕ್ಕೆ ಮತ್ತೆ ಕಾರ್ಯಾಚರಣೆ :
ಜೂನ್ ೨೯ ರಂದು ಹೊಸಮನಿ ಮಹಮ್ಮದ ಉಮರಸಾಬ ಅವರ ಜಮೀನು ಸರ್ವೇ ನಂಬರ್ ೧೬೦/೨, ೦೨ಎಕರೆ ೩ಗುಂ, ನಜೀರ ಅಹ್ಮದ್ ಮಹ್ಮದಲಿ ಮುಲ್ಲಾ ಅವರ ಜಮೀನು ಸರ್ವೇ ನಂಬರ್ ೧೬೦/೩, ೩೦ಗುಂಟೆ, ಮೇನಕಾ ಆನಂದಕುಮಾರ ಎಚ್. ಅವರ ಜಮೀನು ಸರ್ವೇ ನಂಬರ್ ೧೬೫/ಕ/೨ಅ, ೬ ಎಕರೆಯಲ್ಲಿ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *