ಧಾರವಾಡ: ಯೋಗಮಯಂ ಯೋಗ ಸಾಧನ ಕೇಂದ್ರದಲ್ಲಿ 7ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಹಾಗೂ ರೋಟರಿ ಕ್ಲಬ್ ಆಫ್ 7 ಹಿಲ್ಸ್, ಧಾರವಾಡ ಇವರ ಸಹಯೋಗದೊಂದಿಗೆ ಆಚರಿಸಲಾಯಿತು.
ಕೊರೊನಾ ಮಾರ್ಗಸೂಚಿಯಂತೆ ಸದಸ್ಯರಿಗೆ ಆನ್‍ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಯಿತು. ಸುಮಾರು 280ಕ್ಕೂ ಹೆಚ್ಚು ಸದಸ್ಯರು ಕಾರ್ಯಕ್ರಮ ವೀಕ್ಷಿಸಿದರು.
ಮೊದಲು ಲಕ್ಷ್ಮಣ ಅವರ ಮಾರ್ಗದರ್ಶನದಲ್ಲಿ ಯೋಗ್ಯಾಭ್ಯಾಸ ಹಾಗೂ ಪ್ರಾಣಾಯಾಮ ಮಾಡಿಸಲಾಯಿತು. ನಂತರ ಅವರು ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಯೋಗ ಎಷ್ಟು ಅವಶ್ಯ ಎಂಬುದನ್ನು ತಿಳಿಸಿದರು.
ಮುಖ್ಯ ಅತಿಥಿಯಾದ ಆರ್‍ಎಸ್‍ಎಸ್ ಪ್ರಾಂತ್ಯ ಪ್ರಚಾರಕ ನರೇಂದ್ರ ಮಾತ ನಾಡಿ, ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ನಮ್ಮ ಪ್ರಾಚೀನರು ಕಂಡು ಹಿಡಿದ ಯೋಗ ಇಂದು ವಿಶ್ವದ ಎಲ್ಲಾ ಕಡೆ ಪ್ರಸಿದ್ಧಿ ಯಾಗಿದೆ ಎಂದರು.
ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಅಧ್ಯಕ್ಷ ಆನಂದ ನಾಯಕ್, ರೋಟರಿ ಮಾಜಿ ಸಹಾಯಕ ಗವರ್ನರ್ ಗೌರಿ ಹಿರೇಮಠ ವೇದಿಕೆಯಲ್ಲಿದ್ದರು. ಪರಿಮಳ ಶೆಟ್ಟಿ ಪ್ರಾರ್ಥಿಸಿದರು. ಸರಯೂ ಮಿಶ್ರಾ ನಿರೂಪಿಸಿದರು. ಯೋಗ ಮಯಂ ಹಾಗೂ ರೋಟರಿ ಕ್ಲಬ್‍ಗಳ ಪದಾಧಿಕಾರಿಗಳು ಇದ್ದರು.