ಹುಬ್ಬಳ್ಳಿ-ಧಾರವಾಡ ಸುದ್ದಿ
ವಿನಯ ಕುಲಕರ್ಣಿಗೆ ಜಾಮೀನು

ವಿನಯ ಕುಲಕರ್ಣಿಗೆ ಜಾಮೀನು

ಹೊಸದಿಲ್ಲಿ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಇಂದು ಷರತ್ತು ಬದ್ಧ ಜಾಮೀನು ನೀಡಿದೆ.


ಆದರೆ ಜಾಮೀನು ಅವಧಿಯಲ್ಲಿ ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಪ್ರವೇಶಿಸದಂತೆ ವಿನಯ್ ಕುಲಕರ್ಣಿಗೆ ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ಅಜಯ್ ರಸ್ತೋಗಿ ಅವರಿದ್ದ ಪೀಠ ಷರತ್ತು ವಿಧಿಸಿದೆ.
ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರವೇಶಿಸದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಷರತ್ತು ವಿಧಿಸಿದೆಯಲ್ಲದೇ ಸಾಕ್ಷಿಗಳಿಗೆ ಬೆದರಿಕೆ ಹಾಕಿದರೆ ವಿನಯ್ ಕುಲಕರ್ಣಿ ಜಾಮೀನು ರದ್ದುಪಡಿಸುವ ಎಚ್ಚರಿಕೆಯನ್ನು ಸುಪ್ರೀಂ ಕೋರ್ಟ್ ನೀಡಿದೆ. ಅಲ್ಲದೇ ವಾರದಲ್ಲಿ ಎರಡು ಬಾರಿ ಸಿಬಿಐ ಎಸಿಪಿ ಕಚೇರಿಯ ಮುಂದೆ ಹಾಜರಾಗಲು ಸೂಚಿಸಿದೆ.


ಪ್ರಕರಣ ಹೈಕೋರ್ಟ್ ಮುಂದೆ ವಿಚಾರಣೆಗೆ ಬಾಕಿ ಇದೆ ಎಂದು ಪರ ವಕೀಲ ನಟರಾಜ್ ಸುಪ್ರೀಂ ಕೋರ್ಟ್ ಗಮನ ಸೆಳೆದಾಗ ಹೈಕೋರ್ಟ್ ಎರಡು ತಿಂಗಳೊಳಗೆ ಪ್ರಕರಣದ ವಿಚಾರಣೆ ನಡೆಸಬೇಕು ಎಂದೂ ಸುಪ್ರೀಂ ಕೋರ್ಟ್ ಸೂಚಿಸಿದೆ.
ಕಳೆದ ಜುಲೈ ೨೭ರಂದು ಧಾರವಾಡದ ಉಪ ನೋಂದಣಾಧಿಕಾರಿ ಕಚೇರಿಗೆ ವಿನಯ್ ಕುಲಕರ್ಣಿ, ಬೆಳಗಾವಿ ಹಿಂಡಲಗಾ ಜೈಲಿನಿಂದ ಆಗಮಿಸಿದ್ದರು. ಪತ್ನಿ ಶಿವಲೀಲಾ ಅವರಿಗೆ ಜಿಪಿಎ ನೀಡಿದ್ದರು. ಜಿಪಿಎ ಪ್ರಕ್ರಿಯೆಯ ಬಳಿಕ ತಮ್ಮ ಹಾಗೂ ಪತ್ನಿಯ ಹೆಸರಿನಲ್ಲಿ ಜಂಟಿ ಖಾತೆಯನ್ನು ತೆರೆದರು. ಹಣಕಾಸು ವ್ಯವಹಾರ ಸೇರಿದಂತೆ ತೆರಿಗೆ ಸಂಬಂಧಿತ ಪ್ರಕ್ರಿಯೆಗಳನ್ನು ನಿರ್ವಹಿಸಲು ಈ ಜಂಟಿ ಖಾತೆಯನ್ನು ತೆರೆಯಲಾಗಿದೆ.
ನವೆಂಬರ್ ೫, ೨೦೨೦ರಂದು ವಿನಯ ಸಿಬಿಐನಿಂದ ಬಂಧನಕ್ಕೊಳಗಾಗಿದ್ದರು. ವಿನಯ ಕುಲಕರ್ಣಿಯವರಿಗೆ ಷರತ್ತು ಬದ್ದ ಜಾಮೀನು ದೊರೆತಿರುವುದಕ್ಕೆ ಉಭಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳಾದ ಅನಿಲಕುಮಾರ ಪಾಟೀಲ ಹಾಗೂ ಅಲ್ತಾಫ್ ಹಳ್ಳೂರ ಹರ್ಷ ವ್ಯಕ್ತಪಡಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *