ಹುಬ್ಬಳ್ಳಿ-ಧಾರವಾಡ ಸುದ್ದಿ

ವೈಚಾರಿಕ ಕ್ರಾಂತಿ ಬೆಳೆಸಿದ ಬಾಬಾಗೌಡ

ಧಾರವಾಡ: ನಾಡಿನಾದ್ಯಂತ ರೈತ ಚಳವಳಿಯನ್ನು ಕಟ್ಟಿ ವೈಚಾರಿಕ ಕ್ರಾಂತಿ ಬೆಳೆಸಿದವರು ಬಾಬಾಗೌಡ ಪಾಟೀಲರು ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನಮನಗೌಡ ಬೆಳಗುರ್ಕಿ ಅಭಿಪ್ರಾಯಪಟ್ಟರು.
ಸಮೀಪದ ನರೇಂದ್ರ ಕ್ರಾಸ್‌ನಲ್ಲಿ ಅಖಂಡ ಕರ್ನಾಟಕ ರೈತ ಸಂಘ ಮತ್ತು ಶ್ರೀ ಬಾಬಾಗೌಡ ಪಾಟೀಲರ ಅಭಿಮಾನಿ ಬಳಗದವತಿಯಿಂದ ಆಯೋಜಿಸಿದ್ದ ಬಾಬಾಗೌಡ ಪಾಟೀಲರ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಡಿನುದ್ದಗಲಕ್ಕೂ ಸಂಚರಿಸಿ ಚಳವಳಿ ಕಟ್ಟಿದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಯುಕ್ತಿ ಆಗಿದ್ದರೆ, ಬಾಬಾಗೌಡರು ಶಕ್ತಿಯಾಗಿದ್ದರು ಎಂದರು.
ರೈತ ಮುಖಂಡ ಮಲ್ಲಿಕಾರ್ಜುನ ವಾಲಿ ಮಾತನಾಡಿ, ಬಾಬಾಗೌಡರ ಆಲೋಚನೆಗಳ ಮೂಲಕ ಸದ್ಯದ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವ ಅಗತ್ಯವಿದೆ ಎಂದರು.
ಹಿರಿಯ ನ್ಯಾಯವಾದಿ ಪಿ.ಎಚ್.ನೀರಲಕೇರಿ ಮಾತನಾಡಿ, ರೈತಪರ ಹೋರಾಟದಲ್ಲಿ ನಾಲ್ಕು ದಶಕಗಳಿಗೂ ಅಧಿಕ ಕಾಲ ಮುಂಚೂಣಿಯಲ್ಲಿದ್ದವರು ಬಾಬಾಗೌಡರು. ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಹಮ್ಮಿಕೊಳ್ಳುವ ಉದ್ದೇಶವಿದೆ ಎಂದರು. ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸಾನಿಧ್ಯವಹಿಸಿದ್ದರು.
ಅಖಂಡ ಕರ್ನಾಟಕ ರೈತ ಸಂಘದ ಉಪಾಧ್ಯಕ್ಷ ಸಿದ್ಧನಗೌಡ ಪಾಟೀಲ, ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ,ಮುಖಂಡರಾದ ಗುರುರಾಜ ಹುಣಸಿಮರದ, ದಯಾನಂದ ಪಾಟೀಲ, ಕೇಶವ ಯಾದವ, ಈಶ್ವರಚಂದ್ರ ಹೊಸಮನಿ, ಬಿ.ಸಿ.ಪಾಟೀಲ, ಶಾಂತಾ ಅಶೋಕ, ಅಪ್ಪೇಶ ದಳವಾಯಿ, ಸುಧೀರಕುಮಾರ, ದಯಾನಂದ ಪಾಟೀಲ, ಮಲ್ಲನಗೌಡ ಪಾಟೀಲ, ನಿಜನಗೌಡ ಪಾಟೀಲ ಮತ್ತಿತರರು ಬಾಬಾಗೌಡರ ಕುರಿತು ಮಾತನಾಡಿದರು. ಗಜಾನಂದ ಸೊಗಲಣ್ಣವರ ಕವನ ವಚನ ಮಾಡಿದರು.
ಮಹಾಂತೇಶ ರಾವುತ, ಈಶಪ್ರಭು ಪಾಟೀಲ, ಸುರೇಶಬಾಬು ತಳವಾರ, ವಿಠ್ಠಲ ಪಾಗದ, ಪ್ರೊ.ಗಲಗಲಿ, ಶ್ರೀಶೈಲಗೌಡ ಕಮತರ, ಉಳವಪ್ಪ ಒಡೆಯರ, ಬೀಮಣ್ಣ ಕಾಸಾಯಿ ಸೇರಿದಂತೆ ಅನೇಕ ರೈತ ಮುಖಂಡರು, ಅಭಿಮಾನಿಗಳು ಇದ್ದರು. ಶಿವಾನಂದ ಹೊಳೆಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದು ಕಂಬಾರ ನಿರೂಪಿಸಿ, ವಂದಿಸಿದರು.

administrator

Related Articles

Leave a Reply

Your email address will not be published. Required fields are marked *