ಹುಬ್ಬಳ್ಳಿ-ಧಾರವಾಡ ಸುದ್ದಿ

ಶೆಟ್ಟರಗೆ ಮುತಾಲಿಕ ಪ್ರತಿಭಟನೆ ಬಿಸಿ; ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆಗೆ ಮನವಿ

ಹುಬ್ಬಳ್ಳಿ: ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಶ್ರೀರಾಮ ಸೇನಾ ಕಾರ್ಯಕರ್ತರು ಅಧ್ಯಕ್ಷ ಪ್ರಮೋದ ಮುತಾಲಿಕ ನೇತೃತ್ವದಲ್ಲಿಂದು ಮಾಜಿ ಸಿಎಂ ಜಗದೀಶ ಶೆಟ್ಟರ ಅವರ ನಗರದ ನಿವಾಸ ಎದುರು ಪ್ರತಿಭಟನೆ ನಡೆಸಿದರು.


ನೂರಾರು ವರ್ಷಗಳಿಂದ ನಡೆದು ಬಂದ ಸಾರ್ವಜನಿಕ ಗಣೇಶೋತ್ಸವ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ನಿಷೇಧ ವಿಧಿಸಿದೆ. ಆದರೆ, ಎಲ್ಲ ಜೀವನ ಚಟುವಟಿಕೆ ಸಾಮಾನ್ಯ ಸ್ಥಿತಿಗೆ ಮರಳಿದ್ದರೂ ನಿರ್ಬಂಧ ವಿಧಿಸಿದ್ದ ರಿಂದ ಹಬ್ಬವನ್ಣೇ ಅವಲಂಬಿಸಿರುವ ಸಾವಿರಾರು ಕುಟುಂಬಕ್ಕೆ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಧಾರ್ಮಿಕ ಆಚರಣೆಗೆ ಚ್ಯುತಿ ಬರದಂತೆ ಕೋವಿಡ್ ನಿಯಮ ಉಲ್ಲಂಘನೆಯಾಗದಂತೆ ಶೀರ್ಘರ ನಿರ್ಬಂಧ ಮರಳಿ ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ, ಪ್ರಮುಖರಾದ ಅಣ್ಣಪ್ಪ ದಿವಟಗಿ, ಮಂಜು ಕಾಟಕರ, ರಾಜು ಗಾಡಗೋಳಿ ಸೇರಿದಂತೆ ಅನೇಕರಿದ್ದರು.

 

ಸಾರ್ವಜನಿಕ ಗಣೇಶ ಚತುರ್ಥಿಗೆ ಆಗ್ರಹಿಸಿ ಪ್ರತಿಭಟನೆ

ಧಾರವಾಡ: ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನಾ ಸಂಘಟನೆವತಿಯಿಂದ ಪ್ರತಿಭಟನೆ ನಡೆಸಲಾಯಿತು.


ಕಳೆದ ನೂರಾರು ವರ್ಷಗಳಿಂದ ನಡೆದು ಬಂದ ಸಾರ್ವಜನಿಕ ಗಣೇಶೋತ್ಸವವನ್ನು ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ನಿಷೇಧಿಸಿದೆ. ಆದರೆ ಎಲ್ಲ ಜನ ಜೀವನ, ಚಟುವಟಿಕೆ ಸಾಮಾನ್ಯ ಸ್ಥಿತಿಗೆ ಮರಳಿದ್ದರೂ ನಿರ್ಬಂಧ ವಿಧಿಸಿದ್ದು ಈ ಹಬ್ಬವನ್ನೇ ಅವಲಂಬಿಸಿರುವ ಸಾವಿರಾರು ಕುಟುಂಬಕ್ಕೆ ಹೊಟ್ಟೆ ಮೇಲೆ ಹೊಡೆದಂತಗುತ್ತದೆ. ಮೂರ್ತಿಕಾರರು ನಾಲ್ಕಾರು ತಿಂಗಳ ಮುಂಚಿತವಾಗಿ ಮೂರ್ತಿ ತಯಾರಿಸುತ್ತಾರೆ ಅವರ ಸ್ಥಿತಿಏನು ? ಶಾಮಿಯಾನ , ವಿದ್ಯುದ್ದೀವವಾದ್ಯವೃಂದ ಮುಂತಾದ ಅವಲಂಬಿತರಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗುತ್ತದೆ . ಕೋವಿಡ್ ನಿಯಮ ಪಾಲಿಸಿ ಹೇಗೆ ಮಾಲ್ ಚಿತ್ರಮಂದಿರ ಚುನಾವಣೆ , ರಾಜಕೀಯ ಸಮಾವೇಶ ಶಾಲಾ , ಕಾಲೇಜ್ ಮುಂ ನಡೆಯುತ್ತಿವೆಯೋ ಅದೇ ರೀತಿ ಗಣೇಶ ಉತ್ಸವ ಆಚರಿಸಲು ಅನುಮತಿ ನೀಡಬೇಕೆಂದು ಜಿಲ್ಲಾಧಿಕಾಗಳ ಮೂಲಕ ಸಲ್ಲಿಸಿದ ಮನವಿಯಲ್ಲಿ ಸರಕಾರವನ್ನು ಆಗ್ರಹಿಸಿದರು.
ಮುಖಂಡರಾದ ಗಂಗಾಧರ ಕುಲಕರ್ಣಿ, ಡಾ. ಈಶ್ವರಗೌಡ ಪಾಟೀಲ, ಮೈಲಾರಿ ಕುರುಬಗಟ್ಟಿ, ಪಾಂಡು ಎಮೋಜಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

 

 

administrator

Related Articles

Leave a Reply

Your email address will not be published. Required fields are marked *