ಹುಬ್ಬಳ್ಳಿ : ಒಂದೆಡೆ ಬಿಜೆಪಿಯಲ್ಲಿ ಯಡಿಯೂರಪ್ಪ ಯುಗಾಂತ್ಯಗೊ0ಡು ಮುಂದೇನು ಎಂಬ ಪ್ರಶ್ನೆ ಮೂಡಿರುವಾಗಲೇ ಕಾಂಗ್ರೆಸ್ ಪಕ್ಷ ಸಂಘಟನೆಗೆ ಒತ್ತು ನೀಡಲು ಮುಂದಾಗಿದು ದಿ.29, 30 ಹುಬ್ಬಳ್ಳಿಯಲ್ಲಿ ಹಾಗೂ ೩೧ರಂದು ಮೈಸೂರಿನಲ್ಲಿ ಆಯಾ ಭಾಗದ ಜಿಲ್ಲೆಗಳ ಕಾಂಗ್ರೆಸ್ ಪ್ರಮುಖರ ಸಭೆಗೆ ಮುಂದಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ ಅಲ್ಲದೇ ರಾಜ್ಯ ಉಸ್ತುವಾರಿ ರಣದೀಪ ಸುರ್ಜೆವಾಲಾ ಸಹ ಪಾಲ್ಗೊಳ್ಳಲಿದ್ದು ಹುಬ್ಬಳ್ಳಿ ಧಾರವಾಡದಲ್ಲಿ ಈಗಾಗಲೇ ಮಹಾನಗರಪಾಲಿಕೆ ಚುನಾವಣಾ ಕಾವು ಆರಂಭಗೊ0ಡಿದ್ದು, ಈ ಸಭೆಯಿಂದ ಕಾರ್ಯಕರ್ತರಲ್ಲಿ, ಪ್ರಮುಖರಲ್ಲಿ ಹೊಸ ಹುಮ್ಮಸ್ಸು ತುಂಬಲು ಸಹಕಾರಿಯಾಗಬಹುದು ಎನ್ನಲಾಗಿದೆ.
ಗೋಕುಲ ರಸ್ತೆಯ ನೂತನ ಕ್ಯೂಬೆಕ್ಸ್ ಹೊಟೆಲ್‌ನಲ್ಲಿ ಎರಡು ದಿನಗಳ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಸಭೆಗಳು ನಡೆಯುತ್ತಿದ್ದು ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ ಒಂದು ದಿನ ಮುಂಚಿತವಾಗಿಯೇ ಆಗಮಿಸಲಿದ್ದು ಎಲ್ಲ ಸಿದ್ದತೆಗಳನ್ನು ಪರಿಶೀಲಿಸಲಿದ್ದಾರೆ.
29ರಂದು ಸಂಜೆ 6 ರಿಂದ ಹಾವೇರಿ ಮತ್ತು ವಿಜಯಪುರ,ದಿ.30ರಿಂದು ಬೆಳಿಗ್ಗೆ 9.30ರಿಂದ ಸಂಜೆ 7ರವರೆಗೆ, ಹುಬ್ಬಳ್ಳಿ,ಧಾರವಾಡ, ಬಾಗಲಕೋಟ,ಬೆಳಗಾವಿ, ಗದಗ ಜಿಲ್ಲೆಗಳ ಕಳೆದ ಲೋಕಸಭಾ,ವಿಧಾನಸಭಾ ಅಭ್ಯರ್ಥಿಗಳು, ಶಾಸಕರು,ಪರಿಷತ್ ಸದಸ್ಯರು, ಮಾಜಿ ಸಚಿವರು, ಸಂಸದರು, ಎಲ್ಲ ಮುಂಚೂಣಿ ಘಟಕದ ಪ್ರಮುಖರು, ಹಿರಿಯ ಮುಖಂಡರೊ0ದಿಗೆ ಪಕ್ಷವನ್ನು ಮತ್ತಷ್ಟು ಬಲಗೊಳಿಸುವ ಕುರಿತು ಚರ್ಚೆ ನಡೆಸುವರು.
31ರಂದು ಮೈಸೂರು ವಿಭಾಗದ ಪ್ರಮುಖರ ಜತೆ ಸಭೆ ನಡೆಸಲಿದ್ದಾರೆ.ಯಡಿಯೂರಪ್ಪ ರಾಜೀನಾಮೆಯ ನಂತರ ಬಿಜೆಪಿಯಲ್ಲಿನ ಪರಿಸ್ಥಿತಿ ಮುಂಬರುವ ದಿನಗಳಲ್ಲಿ ಬಿಗಡಾಯಿಸುವ ಸ್ಥಿತಿ ಇದ್ದು ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಗೊಳಿಸುವ ಅಲ್ಲದೇ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಸರ್ವ ಸಿದ್ಧತೆ ನಡೆಸಿದೆ.