ಹುಬ್ಬಳ್ಳಿ-ಧಾರವಾಡ ಸುದ್ದಿ
ಹುಬ್ಬಳ್ಳಿ-ಕನ್ಯಾಕುಮಾರಿ ಸೈಕಲ್ ಯಾತ್ರೆಗೆ ಚಾಲನೆ

ಹುಬ್ಬಳ್ಳಿ-ಕನ್ಯಾಕುಮಾರಿ ಸೈಕಲ್ ಯಾತ್ರೆಗೆ ಚಾಲನೆ

ಹುಬ್ಬಳ್ಳಿ: 10 ದಿನಗಳಲ್ಲಿ ಹುಬ್ಬಳ್ಳಿಯಿಂದ ಕನ್ಯಾಕುಮಾರಿಗೆ 1111ಕಿಮೀ. ಕ್ರಮಿಸುವ ಸೈಕಲ್ ಯಾತ್ರೆಗೆ ಶನಿವಾರ ನಗರದ ಚೆನ್ನಮ್ಮ ಸರ್ಕಲ್‌ನಲ್ಲಿ ರೊ. ನಿಕಟಪೂರ್ವ ಡಿಸ್ಟ್ರಿಕ್ಟ್ ಗರ್ವನರ್ ಬಾಸಿಲ್ ಡಿಸೋಜಾ ಚಾಲನೆ ನೀಡಿದರು.


ಹುಬ್ಬಳ್ಳಿಯ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್‌ನ ರೊ.ಕೌಸ್ತುಭ್ ಸಂಶೀಕರ್, ರೊ.ಗುಜ್ಲಾರ್ ಅಹಮದ್ ಮತ್ತು ಧಾರವಾಡ ರೋಟರಿ ಸೆಂಟ್ರಲ್‌ನ ರೊ.ಪ್ರಸನ್ನ ಜೋಶಿ, ರೊ| ಗಿರೀಶ ಹಂಪಿಹೋಳಿ ಸೈಕಲ್ ಮೂಲಕ ಕನ್ಯಾಕುಮಾರಿಗೆ ಪ್ರಯಾಣ ಬೆಳೆಸಿದರು.
ನೀರಿನ ಮಿತವ್ಯಯ ಬಳಕೆ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ, ಮಕ್ಕಳ ಆರೋಗ್ಯ, ರಕ್ಷಣೆಗೆ ಕಾಳಜಿ, ಶಿಕ್ಷಣದ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಯಾತ್ರೆಯ ಉದ್ಧೇಶವಾಗಿದೆ.
ರೋಟರಿ ಹುಬ್ಬಳ್ಳಿ ಮಿಡ್‌ಟೌನ್ ಅಧ್ಯಕ್ಷ ರೊ.ಸುಶೀಲ್ ಕುಮಾರ ಲಡ್ಡಾ, ಕಾರ್ಯದರ್ಶಿ ರೊ.ಸಂಜಯ್ ವಾಸು ಕುನ್ನತ್, ರೊ.ನರಸಿಂಹ ಮೂರ್ತಿ, ರೊ.ವಾಸುಕಿ, ರೊ.ಸುಧೀರ ಹಾರವಾಡ, ರೊ.ಇಮಾನ್ಯುಲ್ ಮತ್ತು ರೊ. ತುಳಸಿದಾಸ್ ಪಟೇಲ್, ರೊ.ಸುಮೇರ್ ಓಸ್ವಾಲ್ ಮತ್ತು ಸ್ಯಾನಿ ಇಂಡಿಯಾ, ಸ್ವಸ್ತಿಕಾ ಇಕ್ವಿಪ್‌ಮೆಂಟ್ಸ್‌ನ ಪಾರ್ಟನರ್‌ರಾದ ಗಿರೀಶ ಕುಲಕರ್ಣಿ ಮತ್ತು ಎಎಸ್‌ಎಮ್ ಫಿರೋಜ್ ಹಾಗೂ ಹುಬ್ಬಳ್ಳಿ ಬೈಸಿಕಲ್ ಅಧ್ಯಕ್ಷರಾದ ಗುರುಮೂರ್ತಿ, ಕಾರ್ಯದರ್ಶಿ ಶಿವಾನಂದ, ಸೈಕ್ಲಿಸ್ಟ್‌ಗಳಾದ ಅನೀಸ್ ಖೋಜೆ, ರವಿ ಮೂಲಿಮನಿ, ರೀತು ಸರಾಫ್ ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *