ಹುಬ್ಬಳ್ಳಿ: ಹುಬ್ಬಳ್ಳಿ ಮಹಾನಗರ ಪಾಲಿಕೆ ಚುನಾವಣಾ ದಿನಾಂಕ ಪ್ರಕಟಗೊಂಡಿದ್ದು, ಸಪ್ಟೆಂಬರ್ 3ಕ್ಕೆ ಮತದಾನ ನಡೆಯಲಿದೆ.
ಈಗಾಗಲೇ ದಿ. 4ರಂದು ಹೈಕೋರ್ಟ ಚುನಾವಣಾ ಆಯೋಗಕ್ಕೆ ಸ್ಪಷ್ಟ ನಿರ್ಧಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಆ.13ಕ್ಕೆ ಮುಂದೂಡಿದ್ದು, ಚುನಾವಣಾ ವೇಳಾಪಟ್ಟಿಯ ವಿವರದೊಂದಿಗೆ ಕೋರ್ಟಗೆ ಮಾಹಿತಿ ನೀಡಬೇಕಾದ ಅನಿವಾರ್ಯತೆ ಇರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಇಂದು ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದೆ.
ಈ ತಿಂಗಳು ದಿ.16ರಿಂದ ನೀತಿ ಸಂಹಿತೆ ಜಾರಿಯಾಗಲಿದ್ದು, ದಿ.23ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು ದಿ.24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.ದಿ.26 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ.
ಸಪ್ಟೆಂಬರ್ 3 ಶುಕ್ರವಾರ ಮತದಾನ ನಡೆಯಲಿದ್ದು, ಅವಶ್ಯ ಬಿದ್ದಲ್ಲಿ ದಿ. 5ರಂದು ಮರುಮತದಾನಕ್ಕೆ ಅವಕಾಶ ನೀಡಲಾಗಿದ್ದು, ಸಪ್ಟಂಬರ್ 6ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು ಅಂದೇ ನೀತಿ ಸಂಹಿತೆ ಕೊನೆಗೊಳ್ಳಲಿದೆ.
ಅವಧಿ ಸಂಸ್ಥೆಗಳ ಪೂರ್ಣಗೊಂಡಿರುವ ರಾಜ್ಯದ ಕೆಲ ನಗರ ಸ್ಥಳೀಯ “ಚುನಾವಣೆಗೆ ಸಂಸ್ಥೆಗಳಿಗೆ ನಿಗದಿತ ಕಾಲಮಿತಿಯೊಳಗೆ ಚುನಾವಣೆ ಸಂಬAಧಿಸಿದ ನಡೆಸಲು ಸರ್ಕಾರ, ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ಎ.ಎನ್. ಓಕ್ ನೇತೃತ್ವದ ವಿಭಾಗಿಯ ಪೀಠವೇ ನಿರ್ದೇಶನ ನೀಡಿರುವುದರಿಂದ ಮುಂದೂಡುವ ಸಾಧ್ಯತೆಗಳಿಲ್ಲ ಎಂದೇ ಹೇಳಲಾಗಿತ್ತಲ್ಲದೇ ಸಂಜೆ ದರ್ಪಣ ಕಳೆದ ದಿ.5ರಂದೆ 13ರೊಳಗೆ ಚುನಾವಣಾ ದಿನಾಂಕ ಪ್ರಕಟಗೊಳ್ಳಲಿದೆ ಎಂದು ಪ್ರಕಟಿಸಿತ್ತು. ಇದು ಈಗ ಅಕ್ಷರಶಃ ನಿಜವಾಗಿದೆ.
ಈಗಾಗಲೇ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಪಾಲಿಕೆ ಸಾರ್ವತ್ರಿಕ ಚುನಾವಣೆಗೆ ಸಂಬ0ಧಿಸಿದ ಮತಗಟ್ಟೆಗಳಿಗೆ ವಿವಿಧ ಮತದಾನ ಸಾಮಗ್ರಿಗಳ ಪೂರೈಕೆಗೆ ಇ-ಟೆಂಡರ್ ಕರೆದು ದಿ. 13ರೊಳಗೆ ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಸಲ್ಲಿಸಲು ಸಹ ಹೇಳಲಾಗಿದೆ.