ಹುಬ್ಬಳ್ಳಿ-ಧಾರವಾಡ ಸುದ್ದಿ
ಹು-ಧಾ ಪಾಲಿಕೆ ಚುನಾವಣೆ; ನಾಳೆ ಮತದಾನ;                  ಕತ್ತಲ ರಾತ್ರಿ ಕರಾಮತ್ತು – ಹತ್ತು ಹಲವು ಕಸರತ್ತು

ಹು-ಧಾ ಪಾಲಿಕೆ ಚುನಾವಣೆ; ನಾಳೆ ಮತದಾನ; ಕತ್ತಲ ರಾತ್ರಿ ಕರಾಮತ್ತು – ಹತ್ತು ಹಲವು ಕಸರತ್ತು

ಹುಬ್ಬಳ್ಳಿ: ಚುನಾಯಿತ ಪ್ರತಿನಿಧಿಗಳಿಲ್ಲದೇ ಸುಮಾರು 30 ತಿಂಗಳ ನಂತರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರ ಆಯ್ಕೆಗೆ ನಾಳೆ ಮತದಾನ ನಡೆಯಲಿದ್ದು ಮಂಗಳವಾರ ಸಂಜೆಯೇ ಬಹಿರಂಗ ಪ್ರಚಾರ ಮುಕ್ತಾಯಗೊಂಡಿದ್ದು ಮತದಾರರ ಸೆಳೆಯುವ ಅಂತಿಮ ಹಂತದ ಕಸರತ್ತು ನಡೆಯುತ್ತಿದ್ದು ನಾಳೆ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಹಕ್ಕು ಚಲಾವಣೆಗೆ ಅವಕಾಶ ಕಲ್ಪಿಸಲಾಗಿದೆ.


ಮಹಾನಗರದ 82 ವಾರ್ಡಗಳ ಪೈಕಿ ಕೆಲ ವಾರ್ಡಗಳಲ್ಲಿ ಮಾತ್ರ ನೇರ ಹಣಾಹಣಿಯಿದ್ದು ಸುಮಾರು 420 ಅಭ್ಯರ್ಥಿಗಳು ಕಣದಲ್ಲಿದ್ದು ನಾಳೆ ಇವರೆಲ್ಲರ ಹಣೆಬರಹ ನಿರ್ಧಾರವಾಗಲಿದೆ.ಅವಳಿನಗರದ ವಿವಿಧ ವಾರ್ಡನಲ್ಲಿನ ಆಯ್ಚ ಪ್ರದೇಶಗಳಲ್ಲಿ ಬಿಜೆಪಿ ,ಕಾಂಗ್ರೆಸ್, ಆಪ್,ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು, ಪ್ರಮುಖ ಮುಖಂಡರು, ಪ್ರತ್ಯೇಕವಾಗಿ ಮನೆ ಮನೆಗೆ ತೆರಳಿ ಸೆಳೆಯುವ ಕೊನೆಯ ಯತ್ನ ನಡೆಸುವ ಮೂಲ ಮತದಾರರ ಮನಗೆಲ್ಲಲು ಹರಸಾಹಸ ನಡೆಸಿದ್ದಾರೆ.
ಪ್ರತಿ ಚುನಾವಣಾ ಸಂದರ್ಭದಲ್ಲೂ ರಾಜಕೀಯ ಪಕ್ಷಗಳಿಗೆ ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣಾ ಹಿಂದಿನ ರಾತ್ರಿ ಸಾಮಾನ್ಯವಾಗಿ ಕತ್ತಲ ರಾತ್ರಿಯಾಗಿ ಪರಿಣಮಿಸುತ್ತಿತ್ತು. ಆದರೆ ಈ ಬಾರಿ ಎರಡು ದಿನಗಳ ಅವಕಾಶ ಸಿಕ್ಕಿದೆ. ಈ ಮಹತ್ವದ ಕತ್ತಲ ರಾತ್ರಿಗಳಲ್ಲೆ ನಿರ್ಣಾಯಕ ಬದಲಾವಣೆಗಳು ಆದ ಉದಾಹರಣೆಗಳಿವೆ.
ಪ್ರಮುಖ ರಾಜಕೀಯ ಪಕ್ಷಗಳು ಅಲ್ಲದೇ ಅವರಿಗೆ ಮಗ್ಗುಲ ಮುಳ್ಳಾಗಿರುವ ಅನೇಕ ಘಟಾನುಘಟಿ ಪಕ್ಷೇತರರು ಈ ನಿರ್ಣಾಯಕ ಕಾಲದಲ್ಲೇ ತಮ್ಮ ನಿಜವಾದ ಚುನಾವಣಾ ಪಟ್ಟು ಪ್ರದರ್ಶಿಸಲಿದ್ದಾರೆ.
ಈ ಬಾರಿ ತಮ್ಮ ಪಕ್ಷಕ್ಕೆ ಬಹುಮತ ಎಂದು ರಾಷ್ಟಿçÃಯ ಪಕ್ಷಗಳು ಹೇಳುತ್ತಿವೆಯಾದರೂ ವಾಸ್ತವ ಬೇರೆಯೇ ಇದ್ದು ಅಂಡರ್ ಕರೆಂಟ್ ಯಾರಿಗೆ ವರವಾಗಲಿದೆ ಎಂಬುದಕ್ಕೆ ದಿ.6ರಂದೇ ಉತ್ತರ ದೊರೆಯಬೇಕಿದೆ.
ಬುಧವಾರ ಬೆಳಗ್ಗೆಯಿಂದಲೇ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸ್ಥಳೀಯ ನಾಯಕರು ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ತೆರೆಮರೆಯಲ್ಲಿ ಹತ್ತು ಹಲವು ಕಸರತ್ತು ನಡೆಸುತ್ತಿದ್ದು ಕಾಂಚಾಣದ ಕರಾಮತ್ತೆ ಮುಖ್ಯವಾಗಿದೆ.
ನಿನ್ನೆಯಿಂದ ಇದುವರೆಗೆ ಮಾಯವಾಗಿದ್ದ ಮಂದಹಾಸ ನಿನ್ನೆಯಿಂದ ಬಹುತೇಕ ಎಲ್ಲ ಪಕ್ಷದ ಹಾಗೂ ಪಕ್ಷೇತರರ ಬೆಂಬಲಿಗರಲ್ಲಿ ಕಾಣಿಸಿಕೊಂಡಿದ್ದು ಬೂತ್‌ವಾರು, ಜಾತಿವಾರು, ಅಲ್ಲದೇ ಇತರೇ ಲೆಕ್ಕಾಚಾರದಲ್ಲಿ ಮನೆ ಮನೆಗೆ ಪ್ರಚಾರ ನೆಪದಲ್ಲಿ ತೆರಳುವಲ್ಲಿ ಅನೇಕರು ಕಾರ್ಯೋನ್ಮುಖರಾಗಿದ್ದಾರೆ. ಸ್ಥಳೀಯ ಮುಖಂಡರು ಪ್ರಾಥಮಿಕ ಸಮೀಕ್ಷೆ ನಡೆಸಿ ವಿಶ್ಲೇಸಿಸಿ ಹಿರಿಯ ನಾಯಕರಿಗೆ ವರದಿ ಸಲ್ಲಿಸಿದ್ದು ಅದರನ್ವಯ ಹಣ ಹಂಚಿಕೆಯಾಗುತ್ತಿದ್ದು ಆಡಳಿತಾರೂಡ ಪಕ್ಷದಲ್ಲಂತೂ ಈ ಸಂಭ್ರಮ ಇನ್ನಷ್ಟು ಹೆಚ್ಚಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಮದ್ಯ ಪೂರೈಕೆಗಾಗಿ ಈಗಾಗಲೇ ಸಂಗ್ರಹ ಮಾಡಿದವರು ಅದನ್ನು ತಲುಪಿಸಿದ್ದು ಕೊರೊನಾ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ ಪಾರ್ಟಿಗಳಿಗೆ ಅವಕಾಶ ಕಡಿಮೆಯಾದರೂ ಹೊರವಲಯದ ಫಾರ್ಮ ಹೌಸಗಳಲ್ಲಿ ನಡೆದಿದೆ ಎನ್ನಲಾಗುತ್ತಿದೆ.

ಮಸ್ಟರಿಂಗ್ ಕೇಂದ್ರಕ್ಕೆ ಡಿಸಿ ಭೇಟಿ

ಹುಬ್ಬಳ್ಳಿ : ಸೆಪ್ಟೆಂಬರ್ 3 ರಂದು ನಡೆಯಲಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ಹಿನ್ನೆಲೆ ಗುರುವಾರ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಧಾರವಾಡದಲ್ಲಿನ ಬಾಸೆಲ್ ಮಿಷನ್ ಶಾಲೆಯ ಹಾಗೂ ಲ್ಯಾಮಿಂಗ್ಟನ್ ಶಾಲೆಯ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.


ನಾಳೆ 82 ವಾರ್ಡಗಳಿಗೆ ಮತದಾನ ನಡೆಯಲಿದ್ದು, ಧಾರವಾಡದ ಬಾಶೆಲ್ ಮಿಶನ್ ಶಾಲೆಯಲ್ಲಿ 25 ವಾರ್ಡಗಳಲ್ಲಿ ಮಸ್ಟರಿಂಗ್ ಇದೆ. ಒಟ್ಟು 842 ಮತಗಟ್ಡೆಗಳನ್ನ ಗುರುತಿಸಲಾಗಿದ್ದು, ಹೈಪರ್ ಸೆನ್ ಸಿಟಿವ್ 108 ಮತಗಟ್ಟೆಗಳಿವೆ. 175 ಕ್ಕೂ ಹೆಚ್ಚು ಸರಕಾರಿ ಬಸ್ ಗಳನ್ನು ಬಿಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದರು.
ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ, ಚುನಾವಣೆಗೆ ಸಕಲ ಸಿದ್ಧತೆ ಕೈಗೊಂಡಿರೋ ಹು-ಧಾ ಮಹಾನಗರ ಪಾಲಿಕೆ, ಹಾಗೂ ಜಿಲ್ಲಾಡಳಿತ ನಗರದ ಲ್ಯಾಮಿಂಗ್ಟನ್ ಶಾಲಾ ಆವರಣದಲ್ಲಿ ಮಸ್ಟರಿಂಗ್ ಕಾರ್ಯ ನಡೆದಿದೆ.
ಹುಬ್ಬಳ್ಳಿ ಧಾರವಾಡದಾದ್ಯಂತ 842 ಮತಗಟ್ಟೆಗಳ ಸ್ಥಾಪನೆ ಮಾಡಿದ್ದು, ಪ್ರತಿಯೊಂದು ಮತಗಟ್ಟೆಗೆ ಚುನಾವಣಾ ಕರ್ತವ್ಯಕ್ಕೆ 8 ಜನರಂತೆ 8 ಸಾವಿರಕ್ಕೂ ಅಧಿಕ ಸಿಬ್ಬಂಧಿ ನಿಯೋಜನೆ ಮಾಡಿದ್ದಾರೆ. ಪೊಲೀಸ್ ಬಿಗಿ ಬಂದೋಬಸ್ತ್ ಮೂಲಕ ಮಸ್ಟರಿಂಗ್ ಕಾರ್ಯಕ್ಕೆ ಸಿದ್ಧತೆ ನಡೆದಿದ್ದು, ಚುನಾವಣಾ ಅಧಿಕಾರಿಗಳು ಮತಗಟ್ಟೆಗಳಿಗೆ ಮತಯಂತ್ರಗಳನ್ನ ಕೊಂಡೊಯ್ಯುತ್ತಿದ್ದಾರೆ.
ಕೊರೊನಾ ಸೋಂಕಿತ ಮತದಾರರಿಗೆ ಕೋವಿಡ್ ಮುಂಜಾಗ್ರತಾ ಕ್ರಮ ವಹಿಸಿ ಮತದಾನ ಮಾಡಲು ಸಂಜೆ 5ರಿಂದ 6ರೊಳಗೆ ಅವಕಾಶ ಕಲ್ಪಿಸಲು ರಾಜ್ಯ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

administrator

Related Articles

Leave a Reply

Your email address will not be published. Required fields are marked *