ಧಾರವಾಡ: ಪ್ರತಿಷ್ಠಿತ ಇಲ್ಲಿನ ಹೈಕೋರ್ಟ್ ವಕೀಲರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಗೆ ಕಳೆದ ದಿ.17ರಂದು ಚುನಾವಣೆ ಜರುಗಿತು.

ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ, ಮಹಿಳಾ ಪ್ರತಿನಿಧಿ ಮತ್ತು 5 ಕಾರ್ಯಕಾರಿ ಸಮಿತಿಗೆ ಚುನಾವಣೆ ಜರುಗಿತು.
ಸಂಘದ ನೂತನ ಅಧ್ಯಕ್ಷರಾಗಿ ಎಸ್.ಪಿ.ಹುಡೇದಗಡ್ಡಿ, ಉಪಾಧ್ಯಕ್ಷರಾಗಿ ಹರೀಶ ಮೈಗೂರ, ಪ್ರಧಾನ ಕಾರ್ಯದರ್ಶಿಯಾಗಿ ಸಾಧಿಕ ಗೂಡವಾಲಾ, ಜಂಟಿ ಕಾರ್ಯದರ್ಶಿಯಾಗಿ ಹಳ್ಳಿ ರಾಜಶೇಖರ, ಖಜಾಂಚಿಯಾಗಿ ಎ.ಎಂ.ಮಾಲಿಪಾಟೀಲ, ಮಹಿಳಾ ಪ್ರತಿನಿಧಿ ನಿರ್ಮಲಾ ಬಾನಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ದೀಪಿಕಾ ಹೊಳೆಯಣ್ಣವರ, ಕೆ.ಎಸ್.ಕೋರಿಶೆಟ್ಟರ್, ಎಲ್.ಎಂ.ಕುರಹಟ್ಟಿ, ಎಸ್.ಎಸ್.ಮಲಶೆಟ್ಟಿ ಮತ್ತು ವೀರೇಶ ಗಡ್ಡದ ಆಯ್ಕೆಯಾಗಿದ್ದಾರೆ.

ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಮಹಿಳಾ ಪ್ರತಿನಿಧಿ ಸ್ಥಾನಗಳೀಗೆ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಇದೇ ವೇಳೆ ಜಂಟಿ ಕಾರ್ಯದರ್ಶಿ, ಖಜಾಂಚಿ, ಮತ್ತು ೫ ಕಾರ್ಯಕಾರಿ ಸಮಿತಿ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಹಿರಿಯ ನ್ಯಾಯವಾದಿಗಳಾದ ಮೃತ್ಯುಂಜಯ ಬಾಂಗಿ ಮತ್ತು ಎಸ್.ಕೆ.ಕಾಯಕಮಠ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.