ಹುಬ್ಬಳ್ಳಿ-ಧಾರವಾಡ ಸುದ್ದಿ
ಸಿದ್ದಾರೂಢ ಮಠದಲ್ಲಿ 1 ತಿಂಗಳು ಕೋಟಿ ಜಪಯಜ್ಞ

ಸಿದ್ದಾರೂಢ ಮಠದಲ್ಲಿ 1 ತಿಂಗಳು ಕೋಟಿ ಜಪಯಜ್ಞ

ಬಹುತೇಕ ಸಿದ್ಧತೆಗಳು ಪೂರ್ಣ- ಆ.16ರಂದು ಉದ್ಘಾಟನೆ

ಹುಬ್ಬಳ್ಳಿ: ಸಾಕ್ಷಾತ ಶಿವನ ಅವತಾರವೇ ಎಂದು ಕರೆಯಲ್ಪಡುವ ಶ್ರೀ ಸಿದ್ದಾರೂಢರ ಸನ್ನಿಧಾನದಲ್ಲಿ ಶ್ರೀ ಸಿದ್ದಾರೂಢಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ವತಿಯಿಂದ ಶ್ರಾವಣ ಮಾಸದಲ್ಲಿ ಮಳೆ ಬೆಳೆ ಸುಭಿಕ್ಷೆಗಾಗಿ ವಿಶ್ವಶಾಂತಿ, ಲೋಕಕಲ್ಯಾಣಕ್ಕಾಗಿ ಒಂದು ತಿಂಗಳ ಕೋಟಿ ಜಪಯಜ್ಞ ಹಮ್ಮಿಕೊಳ್ಳಲಾಗಿದ್ದು ದಿ. 16ರಂದು ಬುಧವಾರದಿಂದ ಆರಂಭಗೊಳ್ಳಲಿದೆ.


16-8-2023 ರಂದು ಆರಂಭಗೊಂಡು 15-9-2023 ರ ವರೆಗೆ ಈ ಕಾರ್ಯಕ್ರಮವನ್ನು ಮಠದ ಮುಖ್ಯ ಆಡಳಿತಾಧಿಕಾರಿಗಳಾದ ಪ್ರಧಾನ ಜಿಲ್ಲಾ ಮತ್ತು ಸತ್ಯ ನ್ಯಾಯಾಧೀಶರಾದ ಶ್ರೀಮತಿ ಕೆ.ಜಿ.ಶಾಂತಿ ನಾಡಿದ್ದು ಬೆಳಿಗ್ಗೆ 9.30ಕ್ಕೆ ಉದ್ಘಾಟಿಸಲಿದ್ದಾರೆ.

ಜಪಯಜ್ಞದಲ್ಲಿ ಪಾಲ್ಗೊಳ್ಳುವ ಒಂದು ಜೊತೆ ದಂಪತಿಗಳಿಗೆ ಅಥವಾ ಇಬ್ಬರಿಗೆ 701 ರೂ. ಗಳನ್ನು ನಿಗದಿಪಡಿಸಲಾಗಿದ್ದು, ಭಾಗವಹಿಸಿದವರಿಗೆ ಉಭಯ ಶ್ರೀಗಳ ಭಾವಚಿತ್ರ ಹೊಂದಿರುವ ಶಾಲು, ಒಂದು ಮೂರ್ತಿ, ಲುಂಗಿ ಆಶೀರ್ವಾದ ಕಾಯಿ, ರುದ್ರಾಕ್ಷಿ ಮಾಲೆ, ಸೀರೆ ಪೂರೈಸಲಾಗುವುದು. ಜಪಯಜ್ಞದಲ್ಲಿ ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಒಂದು ದಿವಸದ ಪ್ರಸಾದ ವ್ಯವಸ್ಥೆ ಮಾಡಬಯಸುವವರು 11,111 ರೂ.ಗಳನ್ನು ಪೂರೈಸಿದಲ್ಲಿ ಒಂದು ದಿನದ ಪ್ರಸಾದ ವಿತರಿಸಲಾಗುತ್ತದೆ.


ಈಗಾಗಲೇ ಮಠದಲ್ಲಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು ಈಗಾಗಲೇ 8000ಕ್ಕೂ ಹೆಚ್ಚು ಭಕ್ತರು ಹೆಸರು ನೋಂದಾಯಿಸಿದ್ದಾರೆ. 2015ರಲ್ಲಿಯೂ ಮಠದಲ್ಲಿ ಇದೇ ರೀತಿ ಜಪ ಯಜ್ಞ ಹಮ್ಮಿಕೊಳ್ಳಲಾಗಿತ್ತು.
ಚೇರಮನ್ ಬಸವರಾಜ ಕಲ್ಯಾಣ ಶೆಟ್ಟರ್, ವೈಸ್ ಚೇರಮನ್ ಉದಯ ಕುಮಾರ ನಾಯಕ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಜಪಯಜ್ಞ ಕಾರ್ಯಕ್ರಮದ ಅಧ್ಯಕ್ಷ ಶಾಮಾನಂದ ಪೂಜಾರಿ, ಧರ್ಮದರ್ಶಿಗಳಾದ ಬಾಳು ಮಗಜಿಕೊಂಡಿ ಸಹಿತ ಎಲ್ಲ ಟ್ರಸ್ಟಿಗಳು, ಮಠದ ಸಿಬ್ಬಂದಿ ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.

administrator

Related Articles

Leave a Reply

Your email address will not be published. Required fields are marked *