ಹುಬ್ಬಳ್ಳಿ-ಧಾರವಾಡ ಸುದ್ದಿ

11 ತಿಂಗಳ ಕಂದಮ್ಮನ ದೃಷ್ಟಿ ಕಳೆದ ಸುಣ್ಣ!

ಕಣ್ಣಿನ ಕಾರ್ನಿಯಾ ಹಾನಿ: ಜಾಗೃತೆ ವಹಿಸಲು ಮನವಿ

ಹುಬ್ಬಳ್ಳಿ: ಹರಿದ ಸುಣ್ಣದ ಪುಡಿ ಮಗುವಿನ ಬಲಗಣ್ಣಿಗೆ ಹಾರಿ ಆ ಮಗು ಸಂಪೂರ್ಣ ದೃಷ್ಟಿಯನ್ನೇ ಕಳೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಎರಡು ದಿನಗಳ ಹಿಂದೆ ಕೇವಲ ಹನ್ನೊಂದು ತಿಂಗಳ ಹಸುಗೂಸು ಆಟವಾಡುತ್ತ ಕೈಗೆ ಸಿಕ್ಕ ಪ್ಲ್ಯಾಸ್ಟಿಕ್ ಪಾಕೇಟ್ ಹರಿದ ಸುಣ್ಣದ ಪುಡಿ (ಕ್ಯಾಲ್ಸಿಯಂ ಹೈಡ್ರಾಕ್ಸೈಡ್) ಮಗುವಿನ ಬಲಗಣ್ಣಿಗೆ ಹಾರಿ ಅದು ಅಸಹನೀಯವಾಗಿ ಉರಿದಿದೆ. ತದನಂತರ ಸ್ಥಳೀಯ ಪ್ರತಿಷ್ಠಿತ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಗೆ ತಪಾಸಣೆಗೆಂದು ಕರೆ ತಂದಾಗ ಮಗುವಿನ ಸಂಪೂರ್ಣ ದೃಷ್ಟಿ ಹಾನಿಯಾಗಿರುವುದು ಬೆಳಕಿಗೆ ಬಂದಿದೆ.
ಭವಿಷ್ಯದಲ್ಲಿ ದೃಷ್ಟಿ ಮರಳಿ ಬರುವ ಸಾಧ್ಯತೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ.ಶ್ರೀನಿವಾಸ ಜೋಶಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಕ್ಕಳ ಕೈಗೆ ಸುಣ್ಣ ಪಾಕೇಟ್‌ಗಳು ಸುಲಭವಾಗಿ ಸಿಗದಂತೆ ಇಡಬೇಕು. ಅಲ್ಲದೇ ಸುಣ್ಣ ತರಲು ಸಣ್ಣ ಮಕ್ಕಳನ್ನು ಕಳುಹಿಸಬಾರದೆಂದು ಮನವಿ ಮಾಡಿದರು.
ಪ್ರತಿ ವರ್ಷ ಇಂತಹ ಪ್ರಕರಣಗಳು ಪದೇ ಪದೇ ಜರುಗು ತ್ತಿದ್ದು, ಪ್ರಸ್ತುತ ವರ್ಷ ಸುಮಾರು 10 ಇಂತಹದ್ದೇ ಪ್ರಕರಣಗಳು ತಮ್ಮ ಸಂಸ್ಥೆಯಲ್ಲಿ ವರದಿಯಾಗಿದ್ದು, ಕಳೆದೆರಡು ವರ್ಷಗಳಲ್ಲಿ ಸುಮಾರು 52 ಪ್ರಕರಣಗಳು ದಾಖ ಲಾಗಿದ್ದು, ಚಿಕ್ಕ ಮಕ್ಕಳು ದೃಷ್ಟಿ ಕಳೆದು ಕೊಂಡಿದ್ದಾರೆ ಎಂದರು.


ಕಣ್ಣಿನ ಸ್ಪಷ್ಟತೆಗೆ ಕಾರ್ನಿಯಾ ಅತಿ ಮುಖ್ಯವಾಗಿದ್ದು ಕಣ್ಣಿಗೆ ಸುಣ್ಣದಿಂದ ಆದ ಹಾನಿಯು ತುಂಬಾ ವ್ಯಾಪಕವಾಗಿ ಕಾರ್ನಿಯಾ ಮೇಲ್ಪದರನ್ನು ಹಾಗೂ ಪೂರ್ಣ ಕಾರ್ನಿಯಾವನ್ನು ನಾಶಪಡಿಸಿ ದೃಷ್ಟಿಗೆ ಹಾನಿ ಉಂಟು ಮಾಡುತ್ತದೆ. ಇದರಿಂದ ಉಂಟಾದ ದೃಷ್ಟಿ ಹಾನಿ ಮರಳಿ ಬರುವುದು ತುಂಬಾ ಕಠಿಣ ಎಂದರು.
ಜನತೆಗೆ ಈ ಬಗ್ಗೆ ಸಾಕಷ್ಟು ಅರಿವು ಇಲ್ಲವಾಗಿದ್ದು ಸರಿಯಾದ ಸುಣ್ಣ ಮತ್ತಿತರ ಅಪಾಯಕಾರಿ ರಾಸಾಯನಿಕ ವಸ್ತುಗಳು ಸರಿಯಾಗಿ ಪ್ಯಾಕ್ ಮಾಡಲಾಗಿದೆಯೇ, ಇಲ್ಲವೋ ಎಂಬುದನ್ನು ಪರಿಶೀಲಿಸಬೇಕು. ಅಲ್ಲದೇ ಸರಿಯಾದ ರೀತಿಯಲ್ಲಿ ಡಬ್‌ಗಳಲ್ಲಿ ಪ್ಯಾಕ್ ಮಾಡಿ ಇಟ್ಟಲ್ಲಿ ಮಾತ್ರ ಇಂತಹ ಪ್ರಕರಣಗಳನ್ನು ತಡೆಗಟ್ಟ ಬಹುದು ಎಂದರು.
ಗೋಷ್ಠಿಯಲ್ಲಿ ಡಾ.ಸತ್ಯಮೂರ್ತಿ, ಡಾ.ರಾಜಶ್ರೀ ಮತ್ತಿತರರು ಈ ತರಹದ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.

administrator

Related Articles

Leave a Reply

Your email address will not be published. Required fields are marked *