ಕೇಶ್ವಾಪುರ ಪೊಲೀಸರ ಕಾರ್ಯಾಚರಣೆ
7.50 ಲಕ್ಷ ರೂ ಮೌಲ್ಯದ ಚಿನ್ನಾಭರಣ ಜಪ್ತಿ
ಹುಬ್ಬಳ್ಳಿ: ಹಗಲಿನಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಮೂವರು ಅಂತರಾಜ್ಯ ಆರೋಪಿಗಳನ್ನು ಹೆಡೆಮುರಿ ಕಟ್ಟಿ ತರುವಲ್ಲಿ ಕೇಶ್ವಾಪುರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.ರಾಜಸ್ಥಾನ ಮೂಲದ ಅಲೆಮಾರಿ ಬಾಗರಿಯಾ ಜನಾಂಗದ ಮೂವರು ಆರೋಪಿಗಳೇ ಬಂಧಿಸಲ್ಪಟ್ಟವರಾಗಿದ್ದಾರೆ.
ಸಿಬ್ಬಂದಿಯೊಂದಿಗೆ ರಾಜಸ್ಥಾನದ ಅಜ್ಮೀರ ಮತ್ತು ಬಿಲ್ಲವಾಡ ಜಿಲ್ಲೆಗಳಿಗೆ ತೆರಳಿದ ಕೇಶ್ವಾಪುರ ಠಾಣಾ ಇನ್‌ಸ್ಪೆಕ್ಟರ್ ಜಗದೀಶ ಹಂಚಿನಾಳ ತಂಡ ಬಂಧಿತರಿಂದ 7.50ಲಕ್ಷ ರೂ. ಮೌಲ್ಯದ 171ಗ್ರಾಂ. ಕಳುವು ಮಾಡಿದ ಚಿನ್ನಾಭರಣ ಜಪ್ತಿ ಮಾಡಿದೆ.
ಲೈಟ, ಬಲೂನ ವ್ಯಾಪಾರ ಮಾಡಲು ರೈಲ್ವೆ ಮೂಲಕ ಹುಬ್ಬಳ್ಳಿಗೆ ಬಂದು ಕೇಶ್ವಾಪುರದ ಆದರ್ಶ ಲೇ ಔಟ್, ಗೋಕುಲ ರೋಡ ಠಾಣೆಯ ಏರ್ ಪೋರ್ಟ್ ಹತ್ತಿರದ ಅಶೋಕ ವನ ಮತ್ತು ಬೆಳಗಾಂವದ ತಿಲಕವಾಡಿಯಲ್ಲಿ ಹಗಲು ವೇಳೆ ಕೀಲಿ ಹಾಕಿದ ಮನೆಗಳ ಕೀಲಿ ಮುರಿದು ಬೆಳ್ಳಿ ಹಾಗೂ ಬಂಗಾರದ ಆಭರಣ ಕಳ್ಳತನ ಮಾಡಿರುವ ಬಗ್ಗೆ ಬಂಧಿತರೆ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ..
ಪೊಲೀಸ್ ಆಯುಕ್ತ ಲಾಬೂರಾಮ, ಡಿಸಿಪಿಗಳಾದ ಸಾಹೀಲ್ ಬಾಗ್ಲಾ, ಗೋಪಾಲ ಬ್ಯಾಕೋಡ್, ಎಸಿಪಿ ವಿನೋದ ಮುಕ್ತೆದಾರ ಮಾರ್ಗದರ್ಶನದಲ್ಲಿ ಕೇಶ್ವಾಪುರ ಠಾಣಾ ಇನ್‌ಸ್ಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದಲ್ಲಿ ಪಿಎಸ್‌ಐಗಳಾದ ಬಾಬಾ. ಎಂ., ಆರ್.ಎನ್.ಗುಡದರಿ, ಸಿಬ್ಬಂದಿಗಳಾದ ಎಂ.ಡಿ.ಕಾಲವಾಡ, ಎಚ್.ಎಂ.ಗುಳೇಶ, ವಿಠಲ ಮಾದರ, ಆನಂದ ಪೂಜಾರ, ಎಸ್.ಎಸ್.ಕರೆಯಂಕಣ್ಣವರ, ಚಂದ್ರು ಲಮಾಣಿ, ಎಫ್.ಎಸ್. ರಾಗಿ, ವೆಂಕಟೇಶ ಜಾಡರ, ಎಚ್.ಆರ್.ರಾಮಾಪೂರ, ಮಲ್ಲಿಕಾರ್ಜುನ ಚಿಕ್ಕಮಠ ಅವರುಗಳು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
ಅಂತಾರಾಜ್ಯ ಆರೋಪಿಗಳನ್ನು ಚಾಣಾಕ್ಷತನದಿಂದ ಬಂಧಿಸಿದ ತಂಡಕ್ಕೆ ಆಯುಕ್ತರು ಬಹುಮಾನ ಘೋಷಿಸಿದ್ದಾರೆ.