ಹುಬ್ಬಳ್ಳಿ-ಧಾರವಾಡ ಸುದ್ದಿ

ಚನ್ನಮ್ಮ ಮೈದಾನ ಗಣೇಶನಿಗೆ ಅದ್ಧೂರಿ ವಿದಾಯ

ಹುಬ್ಬಳ್ಳಿ: ನಗರದ ರಾಣಿ ಚನ್ನಮ್ಮ ( ಈದಗಾ) ಮೈದಾನದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಆರಂಭವಾಗಿದೆ. ವಿಜಯಪುರದ ಶಾಸಕ ಬಸವಗೌಡ ಪಾಟೀಲ ಯತ್ನಾಳ ಹಾಗೂ ಶಾಸಕ ಅರವಿಂದ ಬೆಲ್ಲದ ಗಣೇಶ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ವಿಸರ್ಜನಾ ಮೆರವಣಿಗೆ ಚಾಲನೆ ನೀಡಿದರು.


ಇದಕ್ಕೂ ಮೊದಲು ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ರಾಣಿ ಚನ್ನಮ್ಮ ಮೈದಾನ ಗಜಾನನೋತ್ಸವ ಮಹಾಮಂಡಳಿ ಅಧ್ಯಕ್ಷ ಸಂಜಯ ಬಡಸ್ಕರ, ಸುಭಾಸಸಿಂಗ ಜಮಾದಾರ,ಸಂತೋಷ ಚವ್ಹಾಣ ಸಹಿತ ಪ್ರಮುಖ ಕಾರ್ಯಕರ್ತರು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು.


ಪಂಚವಾದ್ಯ, ಡೋಲು, ಜಾಂಝ್, ಡಿಜೆ ಮೇಳಗಳು ಮೆರವಣಿಗೆ ಮೆರಗು ನೀಡಿವೆ. ಗಣೇಶ ಮಹಾರಾಜ, ಜೈ ಶ್ರೀರಾಮ, ಜೈ ಜೈ ಶ್ರೀರಾಮ, ಹನುಮಾನ ಮಹಾರಾಜಕೀ ಜೈ ಎಂಬ ಘೋಷಣೆ ಮುಗಿಲು ಮುಟ್ಟಿದವು. ಕಿತ್ತೂರ ರಾಣಿ ಚನ್ನಮ್ಮ ವೃತ್ತ, ರಾಣಿ ಚನ್ನಮ್ಮ ಮೈದಾನ ಭಗವಧ್ವಜ, ಕೇಸರಿ ಬಾವುಟಗಳು ಸಂಪೂರ್ಣ ಕೇಸರಿಮಯವಾಗಿದೆ. ವಿಸರ್ಜನೆ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದ್ದು ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನೂ ನಿಯೋಜಿಸಲಾಗಿದೆ.


ಬಿಜೆಪಿ, ಆರ್‌ಎಸ್‌ಎಸ್, ಹಿಂದೂ ಜಾಗರಣ ವೇದಿಕೆ, ಶ್ರೀರಾಮ ಸೇನೆ, ವಿಹೆಚ್‌ಪಿ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಭಕ್ತರು ಪಾಲ್ಗೊಂಡಿದ್ದಾರೆ. ನಗರದ ಪ್ರದೇಶ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ವಿವಿಧ ಜಿಲ್ಲೆಯ ನೂರಾರ ಜನರು ಭಾಗವಹಿಸಿದ್ದಾರೆ. ಮೈದಾನದಿಂದ ಹೊರ ಬಂದ ಗಣೇಶ ಮೂರ್ತಿಯ ಮೆರವಣಿಗೆ ಇಂದಿರಾಗಾಜಿನ ಮನೆಯ ವಿಸರ್ಜನೆ ಬಾವಿಗೆ ತೆರಳಲು ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ತೆಗೆದುಕೊಳ್ಳಲಿದೆ.


ಸುಮಾರು 35 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಈದಗಾ ಮೈದಾನ ಗಣಪತಿಯ ದರ್ಶನವನ್ನು ಪಡೆದಿದ್ದಾರೆ. ಸಂಚಾರ ಅಸ್ತವ್ಯಸ್ತ : ಗಣೇಶ ವಿಸರ್ಜನೆ ಮೆರವಣಿಗೆಯ ಹಿನ್ನೆಲೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತಲ್ಲದೇ ಬಸ್‌ಗಳು ಹೊಸೂರಿನ ಬಸ್ ನಿಲ್ದಾಣ ಬಳಿಯೇ ಪ್ರಯಾಣಿಕರನ್ನು ಇಳಿಸಿದವು. ದ್ವಿಚಕ್ರ ವಾಹನ ಸವಾರರು ಎಲ್ಲೆಂದರಲ್ಲಿ ಸುತ್ತಾಡಿದರೆ ಕಾರು ಮತ್ತಿತರ ವಾಹನಗಳ ಚಾಲಕರು ತೀವ್ರ ಪರದಾಡಿದರು.

administrator

Related Articles

Leave a Reply

Your email address will not be published. Required fields are marked *