ಹುಬ್ಬಳ್ಳಿ: ಪಿಕೆಎಸ್ ಫೌಂಡೇಶನ್ ಹಾಗೂ ಕೆ.ಎಸ್ ಪಟ್ವಾ ಫೌಂಡೇಷನ್ ಸಹಯೋಗದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ೮೦೦ಕ್ಕೂ ಅಧಿಕ ಜನರು ಏಕಕಾಲದಲ್ಲಿ ರಕ್ತದಾನ ಮಾಡುವ ಮೂಲಕ ದಾಖಲೆ ಬರೆದಿ ದ್ದಾರೆ.
ಇಲ್ಲಿನ ಭವಾನಿನಗರದ ರಾಘವೇಂದ್ರಸ್ವಾಮಿ ಮಠದ ಸುಜಿಯೀಂದ್ರ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ದಾಖಲೆ ಪ್ರಮಾಣ ದಲ್ಲಿ ಯುವಕ, ಯುವತಿಯರು ರಕ್ತದಾನ ಮಾಡುವ ಮೂಲಕ ಸಾರ್ಥಕತೆ ಮೆರೆದರು.
ಇದುವರೆಗೆ ಧಾರವಾಡ ಜಿಲ್ಲೆಯಲ್ಲಿ ಒಂದೇ ಶಿಬಿರದ ಮೂಲಕ ಇಷ್ಟೊಂದು ಜನ ರಕ್ತದಾನ ಮಾಡಿರಲಿಲ್ಲ. ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಸಿಬ್ಬಂದಿ ರಕ್ತದಾನಿಗಳಿಗೆ ಸೂಕ್ತ ತಪಾಸಣೆ ನಡೆಸಿ, ರಕ್ತ ಸಂಗ್ರಹಿಸಿದರು.
ರಕ್ತದಾನ ಮಾಡಿ ಜೀವ ಉಳಿಸಿ, ಪ್ರತಿವರ್ಷ ರಸ್ತೆ ಅಪಘಾತ, ರಕ್ತ ಹೀನತೆ, ಹೆರಿಗೆ ಸಂದರ್ಭದಲ್ಲಿ ಮಹಿಳೆಯರಿಗೆ ರಕ್ತಸ್ರಾವ ಉಂಟಾಗಿ ಅಪಾರ ಪ್ರಮಾಣದ ಸಾವು-ನೋವುಗಳು ಸಂಭವಿಸುತ್ತಿವೆ. ಒಂದು ಬಾಟಲಿ ರಕ್ತ ಮೂರು ಜನರ ಜೀವ ಉಳಿಸಲಿದೆ. ತುರ್ತು ಸಂದರ್ಭದಲ್ಲಿ ರಕ್ತದ ಲಭ್ಯತೆ ಇದ್ದರೆ ಜೀವಗಳನ್ನು ಉಳಿಸಬಹುದು. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ರಕ್ತದಾನ ಶಿಬಿರಕ್ಕೆ ಪಿಕೆಎಸ್ ಫೌಂಡೇಷನ್ ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡುತ್ತಿದೆ
ರಕ್ತದಾನ ಮಾಡಿ ಜೀವ ಉಳಿಸಿ ಎಂಬ ಘೋಷಣೆಯೊಂದಿಗೆ ಸಾಮಾಜಿಕ ಕಳಕಳಿಯಿಂದ ಮುತುವರ್ಜಿ ವಹಿಸಿ ಪಿ.ಕೆ.ಎಸ್. ಫೌಂಡೇಷನ್‌ನ ಪ್ರಶಾಂತ ಹಾಗೂ ಪ್ರಸಾದ್ ಶೆಟ್ಟಿ ಸಹೋದರರು ಮತ್ತು ಕೆ.ಎಚ್.ಪಟ್ವಾ ಫೌಂಡೇಷನ್ ನ ವಿನೋದ್ ಪಟ್ವಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ರಕ್ತದಾನ ಶಿಬಿರ ಯಶಸ್ವಿಯಾಗಲು ಕಾರಣಿಬೂತರಾಗಿದ್ದಾರೆ.