ಏ.2ರಂದು ಧಾರವಾಡ ಭಕ್ತರ ಸಭೆಯಲ್ಲಿ ಅಂತಿಮ ತೀರ್ಮಾನ : ದಿಂಗಾಲೇಶ್ವರ ಶ್ರೀ ಹೇಳಿಕೆ
ಬಿಜೆಪಿಯವರಿಗೆ ಜೋಶಿ ಅನಿವಾರ್ಯವಾದರೆ ನಮಗೆ ಇಲ್ಲಿನ ನೊಂದ ಜನರು ಅನಿವಾರ್ಯ
ಶಾಸಕರನ್ನಾಗಿ ಮಾಡಿದ್ದು ಮತದಾರರು, ಅವಕಾಶ ನೀಡಿದ್ದು ಪಕ್ಷ
ಹುಬ್ಬಳ್ಳಿ : ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಂದ ಕೇವಲ ಲಿಂಗಾಯತ ಸಮಾಜ ನೊಂದಿಲ್ಲಾ ಎಲ್ಲಾ ಸಮಾಜದವರು ಅವರಿಂದ ನೊಂದಿದ್ದಾರೆ. ಅವರ ಬದಲಾವಣೆಗೆ ಕೊಟ್ಟ ಸಮಯ ಮುಗಿದಿದ್ದು, ನಮ್ಮ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಜೋಶಿಯವರನ್ನು ಸೋಲಿಸುವುದು ಅನಿವಾರ್ಯ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಇಂದು ಹೇಳಿದ್ದಾರೆ.
ನಗರದಲ್ಲಿಂದು ಮಹತ್ವದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದಿ. 31ರೊಳಗೆ ಬಿಜೆಪಿ ಅಭ್ಯರ್ಥಿಯನ್ನ ಬದಲಾವಣೆ ಮಾಡಬೇಕು ಎಂದು ತಾವು ಹೇಳಿಕೆ ಕೊಟ್ಟ ಮೇಲೆ ಬಹುಸಂಖ್ಯಾತ ನಾಯಕರು ದೂರವಾಣಿ ಕರೆ ಮಾಡಿ, ಪ್ರತ್ಯಕ್ಷ ಹಾಗೂ ಪರೋಕ್ಷ ಹೆದರಿಸುವ ಕೆಲಸ ಕೂಡ ಮಾಡಿದ್ದಾರೆ. ಪ್ರಾಣತೆಗೆಯಯತ್ತಾರೆ,ಬೆದರಿಕೆ ಹಾಕುತ್ತಾರೆ ಅಂತ ಹೇಳಿದ್ದಾರೆ.ಆದರೆ ಜೋಶೀಯವರ ವಿಚಾರದಲ್ಲಿ ಮುಂದೆ ಇಟ್ಟ ಹೆಜ್ಜೆ ಹಿಂದೆ ತೆಗೆದುಕೊಳ್ಳುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಒತ್ತಡಕ್ಕೆ ಮಣಿಯಬಹುದೇ ಎಂಬ ದುಗುಡ ಭಕ್ತ ಸಮುದಾಯದಲ್ಲಿದೆ. ನಾವು ಇಟ್ಟ ಹೆಜ್ಜೆ ಹಿಂದೆ ಸರಿಯುವುದಿಲ್ಲ . ಯಾವುದೇ ಆಮೀಷಗಳಿಗೆ ಒಳಗಾಗುವುದಿಲ್ಲ. ಚುನಾವಣೆ ಮುಗಿಯುವವರೆಗೂ ಅವರ ವಿರುದ್ದ ಸಮರ ಸಾರುವೆ ಅಲ್ಲದೇ ನೊಂದರವರ ಧ್ವನಿಯಾಗಿ ನಾವು ಕೆಲಸ ಮಾಡುವುದಾಗಿ ಹೇಳಿದರು. ಜೋಶಿಯವರು ಸೋಲಲೇ ಬೇಕು. ನಮ್ಮ ಹೈಕಮಾಂಡ ಧಾರವಾಡದ ಕ್ಷೇತ್ರದ ಮತದಾರರು ಸೋಲಿಸುತ್ತೇನೆ ಎಂದು ಹುಚ್ಚುತನ ಮಾತನಾಡುವುದಿಲ್ಲ ಅದನ್ನ ಮತದಾರರ ಮೇಲೆ ಬಿಡುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.
ಮಠಾಧಿಪತಿಗಳು ಸ್ವತಂತ್ರರಲ್ಲ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುಂಚೆ ಭಕ್ತರ ಜೊತೆ ಚರ್ಚೆ ಮಾಡುತ್ತೇವೆ. ಏ.೨ರಂದು ಧಾರವಾಡದಲ್ಲಿ ಬೆಳಿಗ್ಗೆ ಭಕ್ತರ ಸಭೆ ಕರೆದಿದ್ದು, ಅಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರಲ್ಲದೇ ನಾವು ಯಾವುದೇ ಪಕ್ಷದ ಪರ ವಿರೋಧಿಗಳು ಅಲ್ಲ. ಅಂದು ಮಠದ ಭಕ್ತರೆಲ್ಲರೂ ಧಾರವಾಡಕ್ಕೆ ಬರುವಂತೆ ಕರೆ ನೀಡಿದರು.
ಇದು ನನ್ನ ವೈಯಕ್ತಿಕ ತಿರ್ಮಾನ. ಇದು ರಾಜ್ಯದ ಯಾವುದೇ ಮಠದವರಿಗೆ ಸಂಬಂದಿಸಿದ್ದಲ್ಲ. ಜೋಶಿಯವರಿಗೆ ಹತ್ತು ವರ್ಷ ಅವರಿಗೆ ನಾವು ಸಮಯ ಕೊಟ್ಟಿದ್ದೇವೆ. ಚುನಾವಣೆ ಬಂದಾಗ ಕ್ಷಮೆ ಕೇಳ್ತಾರೆ. ಮುಗಿದಮೇಲೆ ನಿಮ್ಮನ್ನ ನೋಡ್ಕೋತೇನಿ ಅಂತಾರೆಅದಕ್ಕೆ ಅವರಿಗೆ ಅವಕಾಶ ಕೊಡುವ ಪ್ರಮೇಯ ಬರುವುದಿಲ್ಲ ಎಂದು ಹೇಳಿದರು.
ಯತ್ನಾಳ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದಾಗ ಕೆಸರಿಗೆ ಕಲ್ಲು ಹೊಡೆದು ಮುಖಕ್ಕೆ ಸಿಡಿಸಿಕೊಳ್ಳೊದಿಲ್ಲ ಕೇಂದ್ರ ಸಚಿವರು ನಮ್ಮ ಶಕ್ತಿಯನ್ನ ದಮನ ಮಾಡುವ ಕಾರ್ಯ ಮಾಡುತ್ತಿದ್ದಾರೆ
ಶಾಸಕರನ್ನಾಗಿ ಮಾಡಿದ್ದು ಮತದಾರರು, ಅವಕಾಶ ನೀಡಿದ್ದು ಪಕ್ಷ
ಲಿಂಗಾಯತ ಶಾಸಕರು ಜೋಶಿ ಅವರು ನಮ್ಮನ್ನ ಕೈಹಿಡಿದು ಕರೆದುಕೊಂಡು ಬಂದು ಶಾಸಕರನ್ನಾಗಿ ಮಾಡಿದ್ದಾರೆ ಎನ್ನುತ್ತಿದ್ದಾರೆ. ಅವರು ಶಾಸಕರು ಆಗಲು ಜೋಶಿ ಕಾರಣರಲ್ಲ ಮತದಾರರು. ಅವರನ್ನ ಅವಕಾಶ ಹಾಗೂ ಕೈಹಿಡಿದುಕೊಂಡು ಬಂದಿರುವುದು ಪಕ್ಷ ಹೊರತು ಜೋಶಿಯವರಲ್ಲ ಎಂದು ದಿಂಗಾಲೇಶ್ವರ ಸ್ವಾಮೀಜಿ ಸ್ಪಷ್ಟ ಪಡಿಸಿದರಲ್ಲದೇ ಬಿಜೆಪಿಯವರಿಗೆ ಜೋಶಿ ಅವರು ಅನಿವಾರ್ಯವಾದರೆ ನಮಗೆ ಇಲ್ಲಿನ ನೊಂದ ಜನರು ಅನಿವಾರ್ಯ ಎಂದರು.
ನಮ್ಮ ಮಠಕ್ಕೆ ರಾಜ್ಯಸಭಾ ನಾಯಕರು ಬಂದಿದ್ದರು.ಅವರು ಬಂದಾಗ ನಾನು ಒಂದೇ ಮಾತನ್ನ ಕೇಳಿದ್ದೇ ಯಾವ ವಿಷಯಕ್ಕೆ ಬಂದಿದ್ರಿ ಎಂದು.ಅವರು ಜೋಶಿಯವರ ಸಲುವಾಗಿ ಕ್ಷಮೆ ಮಾಡಿ ಎಂದು ಕೇಳಿಕೊಂಡರು. ನಾನು ಅದಕ್ಕೆ ಅವರಿಗೆ ನನ್ನ ನಿರ್ಧಾರವನ್ನ ಸ್ಪಷ್ಟ ಮಾತುಗಳಲ್ಲಿ ತಿಳಿಸಿರುವೆ .ಇನ್ನು ಮಾತುಕತೆಗೆ ಬರಲಾರರು ಎಂದರು.
ಅನೇಕ ಸ್ವಾಮೀಜೀಗಳಿಗೆ ಜೋಶಿಯವರು ಒತ್ತಡಕ್ಕೆ ಸಿಲುಕಿಸಿ ಹೇಳಿಕೆ ಕೊಡಿಸುತ್ತಿದ್ದಾರೆ. ಧಾರವಾಡ ಮುರುಘಾಮಠದ ಸ್ವಾಮೀಜಿಗಳ ವಿಚಾರದಲ್ಲಿ ಇದು ನಡೆದಿದೆ.
ಅವರ ಮೇಲೆ ದಾಳಿ ಮಾಡಿ ಹೆದರಿಸುವ ಕೆಲಸ ಮಾಡಿದ್ದಾರೆ. ಮಠಾಧಿಪತಿಗಳನ್ನು ಹೆದರಿಸುವ ಮಟ್ಟಿಗೆ ಅವರು ಬಂದಿದ್ದಾರೆ. ಜೋಶಿಯವರನ್ನ ಮಟ್ಟಹಾಕಲು ಮತದಾರರು ಮುಂದಾಗಬೇಕು. ನಮ್ಮ ವಿರುದ್ದ ಎಲ್ಲಾ ಶಸ್ತ್ರ ವಿದ್ಯೆಗಳನ್ನ ಪ್ರಯೋಗ ಮಾಡುತ್ತಿದ್ದಾರೆ. ನಾವು ಅವುಗಳನ್ನ ಎದುರಿಸಲು ಸಿದ್ಧ ಎಂದರು.