ಧಾರವಾಡ: ಜಾತ್ಯಾತೀತ ಭಾರತದ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಹುಬ್ಬಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಅಭ್ಯರ್ಥಿ ದೀಪಕ ಚಿಂಚೊರೆ ಮನವಿ ಮಾಡಿದರು.
ರವಿವಾರ ನಗರದ ಜ್ಯುಬಿಲಿ ಸರ್ಕಲ್ ಬಳಿಯ ಸೇಂಟ್ ಜೋಸೆಫ್ ಚರ್ಚ್ ಬಳಿ ಕ್ರೈಸ್ತ ಬಾಂಧವರನ್ನು ಭೇಟಿ ಮಾಡಿ ಮತಯಾಚಿಸಿದ ನಂತರ ಮಾತನಾಡಿದರು.
ದೇಶದಲ್ಲೀಗ ಧರ್ಮ, ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ ಅಧಿಕಾರಕೇರುವ ಹುನ್ನಾರ ನಡೆಯುತ್ತಿದೆ. ಇದರಿಂದ ಜಾತ್ಯಾತೀತ ರಾಷ್ಟ್ರವಾಗಿರುವ ಭಾರತದಲ್ಲಿ ಶಾಂತಿ ಕದಡುವ ಕೆಲಸವನ್ನು ಕೋಮುವಾದಿ ಶಕ್ತಿಗಳು ಮಾಡುತ್ತಿವೆ. ದೇಶ ಮತ್ತು ಧರ್ಮ ಒಡೆಯುವ ಶಕ್ತಿಗಳನ್ನು ದೂರವಿಡುವ ಕೆಲಸವನ್ನು ಮಾಡುವ ಮೂಲಕ ಜಾತ್ಯಾತೀತ ಭಾರತದ ಗೌರವ ಉಳಿಸಿಕೊಳ್ಳುವ ಕಾರ್ಯವನ್ನು ಪ್ರತಿಯೊಬ್ಬರೂ ನಿಭಾಯಿಸಬೇಕಿದೆ.
ಈ ಸನ್ನಿವೇಶದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಮತ್ತು ಜಾತ್ಯಾತೀತ ವ್ಯಕ್ತಿಯಾಗಿರುವ ತಮಗೆ ಮತ ನೀಡಿ ಆಶೀರ್ವದಿಸುವ ಮೂಲಕ ಕೋಮುವಾದಿಗಳಿಗೆ ಸೂಕ್ತ ಉತ್ತರ ಕೊಡಬೇಕು ಎಂದು ಚಿಂಚೋರೆ ಮನವಿ ಮಾಡಿದರು.
ಮುಖಂಡರಾದ ಯಾಸೀನ್ ಹಾವೇರಪೇಟ, ರಾಜು ಅಂಬೋರೆ, ಆನಂದ ಸಿಂಗನಾಥ್, ಜಯಂತ ಸಾಗರ, ರವಿ ಮಾಳಿಗೇರ ಇತರರು ಪ್ರಚಾರದಲ್ಲಿದ್ದರು.