ಹುಬ್ಬಳ್ಳಿ-ಧಾರವಾಡ ಸುದ್ದಿ
ಬರುವ ಎಲ್ಲ ಚುನಾವಣೆಗೆ ಆಪ್ ಸ್ಪರ್ಧೆ

ಬರುವ ಎಲ್ಲ ಚುನಾವಣೆಗೆ ಆಪ್ ಸ್ಪರ್ಧೆ

ಡಿ.ಎಫ್.ಪಾಟೀಲ ಆಪ್‌ಗೆ ಸೇರ್ಪಡೆ

ಧಾರವಾಡ: ಆಮ್ ಆದ್ಮಿ ಪಕ್ಷದ ವತಿಯಿಂದ ದಿಲ್ಲಿಯಿಂದ ಹಳ್ಳಿಯ ಕಡೆಗೆ ಕಾರ್ಯಕ್ರಮದ ಅಂಗವಾಗಿ ನಗರದ ಕಡಪಾ ಮೈದಾನದಲ್ಲಿ ರೈತರ ಸಮಾವೇಶ ಆಯೋಜಿಸಲಾಗಿತ್ತು.


ಸಮಾವೇಶದಲ್ಲಿ ಮಾತನಾಡಿದ ಪಕ್ಷದ ಬೆಳಗಾವಿ ಜಿಲ್ಲಾ ಅಧ್ಯಕ್ಷ ಹಾಗೂ ಉತ್ತರ ಕರ್ನಾಟಕ ಉಸ್ತುವಾರಿ ರಾಜೀವ ಟೋಪಣ್ಣವರ, ಶಿವಕಿರಣ ಅಗಡಿ, ಅನಂತಕುಮಾರ ಬುಗಡಿ, ಮಂಜುನಾಥ ಜಕ್ಕಣ್ಣವರ, ಪ್ರವೀಣ ನಡಕಟ್ಟಿನ್, ಬಿಜೆಪಿ, ಕಾಂಗ್ರೆಸ್ ಇನ್ನಿತರ ಪಕ್ಷಗಳ ವಂಶಪಾರಂಪರಿಕ ರಾಜಕಾರಣ, ದುರಾಡಳಿತ ಮತ್ತು ಜನವಿರೋಧಿ ನೀತಿಗಳಿಂದ ಜನರು ರೋಸಿ ಹೋಗಿ ದ್ದಾರೆ. ಈ ಮಧ್ಯೆ ಆಮ್ ಆದ್ಮಿ ಪಕ್ಷವು ಉದಯಿಸಿದ ಕೆಲವೇ ವರ್ಷಗಳಲ್ಲಿ ದೇಶದ ಗಮನ ಸೆಳೆದಿದೆ. ಅರವಿಂದ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಪ್ ಸರಕಾರದ ಜನಪರ ಕಾರ್ಯ ಕ್ರಮಗಳು ಜನರನ್ನು ಪಕ್ಷದತ್ತ ಆಕರ್ಷಿಸುತ್ತಿವೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ ಗಳಿಗೆ ಅವಕಾಶ ಕೊಡದೇ ಸ್ವಚ್ಛ ಮತ್ತು ಪಾರದರ್ಶಕ ಆಡಳಿತ ನೀಡುತ್ತಿದೆ. ಇದರಿಂದ ಪ್ರಭಾವಿತರಾದ ಪಕ್ಕದ ಪಂಜಾಬ ಜನರು ಇತ್ತೀಚೆಗೆ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಈ ಫಲಿತಾಂಶದಿಂದ ಅನೇಕ ಜನಸಾಮಾನ್ಯರು, ಪ್ರಾಮಾಣಿಕ ವ್ಯಕ್ತಿಗಳು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ನಡೆಯುವ ಎಲ್ಲ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಈ ದಿಸೆಯಲ್ಲಿ ಪಕ್ಷದ ಸಂಘಟನೆ ಚುರುಕಾಗಿ ನಡೆಯುತ್ತಿದೆ ಎಂದರು.


ಸಮಾವೇಶದಲ್ಲಿ ತಮ್ಮ ನೂರಾರು ಬೆಂಬಲಿಗರ ಜೊತೆ ಪಕ್ಷಕ್ಕೆ ಸೇರ್ಪಡೆ ಯಾದ ಉದ್ಯಮಿ, ಸಮಾಜ ಸೇವಕ ಡಿ.ಎಫ್.ಪಾಟೀಲ ಅವರನ್ನು ಮುಖಂಡರು ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು.
ಪಕ್ಷದ ಮುಖಂಡರಾದ ರಮೇಶ ಬದ್ನೂರ, ಶಶಿಕಾಂತ ಸುಳ್ಳದ, ಮಲ್ಲಪ್ಪ ತಡದ, ವಿಜಯ ಪಾಟೀಲ, ವಿದ್ಯಾ ನಾಡಗೇರ, ಮಲ್ಲಿಕಾರ್ಜುನ ಹಿರೇಮಠ, ವೆಂಕನಗೌಡ ಗೋವಿಂದಗೌಡ್ರ, ಯಲಗೊಂಡ ಬಿರಾದಾರ, ಇಜಾಜ ಶೇಖ,ಶಂಕರ ಹೆಗಡೆ, ರೇವಣಸಿದ್ದಪ್ಪ ಹುಬ್ಬಳ್ಳಿ, ಸಂತೋಷ ಮಾನೆ, ಶಾಮ ನರಗುಂದ ವೇದಿಕೆಯಲ್ಲಿದ್ದರು.

 

administrator

Related Articles

Leave a Reply

Your email address will not be published. Required fields are marked *