ಹುಬ್ಬಳ್ಳಿ-ಧಾರವಾಡ ಸುದ್ದಿ
ಮುತಾಲಿಕರ ’ಗುಂಡು’ ಹೇಳಿಕೆ ಪರಿಶೀಲನೆ: ಎಡಿಜಿಪಿ

ಮುತಾಲಿಕರ ’ಗುಂಡು’ ಹೇಳಿಕೆ ಪರಿಶೀಲನೆ: ಎಡಿಜಿಪಿ

ಹಳೇಹುಬ್ಬಳ್ಳಿ ಪ್ರಕರಣ ತನಿಖೆ ಪ್ರಗತಿಯಲ್ಲಿ

ಹುಬ್ಬಳ್ಳಿ: ಹಳೇಹುಬ್ಬಳ್ಳಿಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಉಚ್ಚ ನ್ಯಾಯಾಲಯದ ಆದೇಶದ ಮೇಲೆ ೧೧ ಪ್ರಕರಣಕ್ಕೆ ತಡೆಯಾಜ್ಞೆ ಬಂದಿದೆ. ಉಳಿದ ಪ್ರಕರಣ ತನಿಖೆಯ ಹಂತದಲ್ಲಿದೆ. ಕಾನೂನು ಮತ್ತು ಸುವ್ಯವಸ್ಥೆ ಭದ್ರ ಪಡಿಸಲು ಮತ್ತೊಮ್ಮೆ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ವಿಭಾಗದ ಎಡಿಜಿಪಿ ಆಲೋಕಕುಮಾರ್ ಹೇಳಿದರು.


ನಗರದಲ್ಲಿಂದು ಉಪನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ದಿ.೭ರಂದು ವಿಚಾರಣೆ ಇದ್ದು ಅಲ್ಲದೇ ಮುಂದಿನ ಕ್ರಮಗಳನ್ನು ಪೊಲೀಸ್ ಆಯುಕ್ತರು ಕೈಗೊಳ್ಳುತ್ತಾರೆ ಎಂದರು.
ಪ್ರಮೋದ್ ಮುತಾಲಿಕ್ ಹೇಳಿಕೆ ಹಾಗೂ ಧ್ವನಿವರ್ಧಕಗಳ ಕುರಿತಾದ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಧ್ವನಿವರ್ಧಕಗಳ ಬಗ್ಗೆ, ಪೊಲೀಸ್ ಇಲಾಖೆಯಿಂದ ಏನು ಕ್ರಮಗಳನ್ನು ಕೈಗೊಳ್ಳಬೇಕು ಅದನ್ನು ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.


ಮುತಾಲಿಕ್‌ರ ಸುಪ್ರೀಂ ಆದೇಶ ಪಾಲಿಸದವರ ಮೇಲೆ ಗುಂಡು ಹಾರಿಸುವ ಹೇಳಿಕೆ ಬಗ್ಗೆ ಪರಿಶೀಲನೆ ನಡೆಸಿ ಯಾವುದಾದರ ಬಗ್ಗೆ ಹೀಗೆ ಮಾತನಾಡಿದ್ದಾರೆ ಎಂದು ಕೂಲಂಕಷವಾಗಿ ಪರಿಶೀಲನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ಆಯುಕ್ತ ಲಾಭೂರಾಮ್, ಡಿಸಿಪಿ ಗೋಪಾಲ ಬ್ಯಾಕೋಡ,ಎಸಿಪಿ ವಿನೋದ ಮುಕ್ತೆದಾರ,ಇನ್ಸಪೆಕ್ಟರ್ ರವಿಚಂದ್ರ ಡಿ.ಬಿ.ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.
ಕೇಶ್ವಾಪೂರ ಠಾಣೆಗೆ ಎಡಿಜಿಪಿ: ಬಳಿಕ ಕೇಶ್ವಾಪೂರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಕೇಶ್ವಾಪೂರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಗದೀಶ್ ಹಂಚಿನಾಳ ನೇತೃತ್ವದಲ್ಲಿ ಗೌರವ ವಂದನೆ ಸಲ್ಲಿಸಲಾಯಿತು.

 

administrator

Related Articles

Leave a Reply

Your email address will not be published. Required fields are marked *