ಹುಬ್ಬಳ್ಳಿ-ಧಾರವಾಡ ಸುದ್ದಿ
ಡಾ.ಚೆಟ್ಟಿ ವಿದೇಶ ಪ್ರವಾಸ – ಗುಸು ಗುಸುವಿಗೆ ಗ್ರಾಸ;  ಮಾರ್ಗದರ್ಶನಕ್ಕೆ ಟೈಪಿಸ್ಟ, ಸ್ಟೆನೋಗಳ ನಿಯೋಜನೆ

ಡಾ.ಚೆಟ್ಟಿ ವಿದೇಶ ಪ್ರವಾಸ – ಗುಸು ಗುಸುವಿಗೆ ಗ್ರಾಸ; ಮಾರ್ಗದರ್ಶನಕ್ಕೆ ಟೈಪಿಸ್ಟ, ಸ್ಟೆನೋಗಳ ನಿಯೋಜನೆ

ಫಿನ್‌ಲ್ಯಾಂಡ್‌ಗೆ ಹೋಗಿ ಬಂದ ಬೆನ್ನಲೇ ಥೈಲ್ಯಾಂಡ್‌ಗೆ

ಧಾರವಾಡ: ಸದಾ ಒಂದಿಲ್ಲೊಂದು ವಿವಾದಗಳ ಸುಳಿಯಲ್ಲೇ ಸಿಲುಕಿರುವ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಬಿ.ಚೆಟ್ಟಿ ಅವರು ಇದೀಗ ದಿಢೀರ್ ವಿದೇಶಕ್ಕೆ ತೆರಳಿದ್ದು, ಚೆಟ್ಟಿಯವರ ನಡೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಡಾ. ಆಶಾಲತಾ

ಕಳೆದ ದಿ.17 ರಂದು ಡಾ.ಚೆಟ್ಟಿ ಹಾಗೂ ಹೊಸದೆಹಲಿಯ ಸಾಂಸ್ಥಿಕ ಅಭಿವೃದ್ಧಿ ಯೋಜನೆಯ ಸಹ ಸಂಯೋಜಕರು ಆದ ಸಂಖ್ಯಾಶಾಸ್ತ್ರ ಪ್ರಾಧ್ಯಾಪಕಿ ಡಾ.ಕೆ.ವಿ.ಆಶಾಲತಾ ಅವರು ಥೈಲ್ಯಾಂಡ್‌ಗೆ ತೆರಳಿದ್ದಾರೆ. ರಾಷ್ಟ್ರೀಯ ಕೃಷಿ ಉನ್ನತ ಶಿಕ್ಷಣ ಯೋಜನೆ(ಎನ್‌ಎಎಚ್‌ಇಪಿ) ಅಡಿ ವಿಶ್ವ ಬ್ಯಾಂಕ್ ಅನುದಾನಿತ- ನವದೆಹಲಿಯ ಐಸಿಎಆರ್, ಸಾಂಸ್ಥಿಕ ಅಭಿವೃದ್ಧಿ ಯೋಜನೆ(ಐಡಿಪಿ) ಯಡಿ “ವರ್ಧಿತ ಕಲಿಕಾ ಫಲಿತಾಂಶ ಮತ್ತು ಉದ್ಯಮಶೀಲತೆ ಅಭಿವೃದ್ಧಿಯ ಮೂಲಕ ಉನ್ನತ ಕೃಷಿ ಶಿಕ್ಷಣದ ಗುಣಮಟ್ಟ ಮತ್ತು ಪ್ರಸ್ತುತತೆಯನ್ನು ಹೆಚ್ಚಿಸುವ” ಶೀರ್ಷಿಕೆಯ ಎರಡು ವ?ಗಳ ಯೋಜನೆಯನ್ನು ವಿಶ್ವ ದರ್ಜೆಯ ವಿಶ್ವವಿದ್ಯಾನಿಲಯವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸ್ಪರ್ಧಾತ್ಮಕ ಕ್ರಮದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ 24.67 ಕೋ.ರೂ.ಗಳನ್ನು ಮಂಜೂರು ಮಾಡಿದೆ.

ಫಿನ್ ಲ್ಯಾಂಡ್ ನಲ್ಲಿ ಟೈಪಿಸ್ಟ್ ಯು.ಬಿ. ಮೇಸ್ತ್ರಿ ಮತ್ತು ಸ್ಟೆನೋಗ್ರಾಫರ್ ನಾಗರಾಜ ಎಂ.ವಿ.

ಈ ಯೋಜನೆಯ ಭಾಗವಾಗಿ 120 ವಿದ್ಯಾರ್ಥಿಗಳು ಮತ್ತು 50 ಅಧ್ಯಾಪಕರು ಸಾಗರೋತ್ತರ ಸಂಸ್ಥೆಗಳಲ್ಲಿ ತರಬೇತಿ ಪಡೆಯಲಿದ್ದಾರೆ. ಈ ವಿದ್ಯಾರ್ಥಿಗಳನ್ನು 3 ತಂಡಗಳಾಗಿ ವಿಭಾಗಿಸಿ, ಒಂದನೇ ತಂಡದ 45 ವಿದ್ಯಾರ್ಥಿಗಳನ್ನು ಫಿನ್‌ಲ್ಯಾಂಡ್‌ನ ಟೆಂಪರ್ ಯುನಿವರ್ಸಿಟಿಗೆ, ಎರಡನೇ ತಂಡವನ್ನು ದುಬೈ ವಿಶ್ವವಿದ್ಯಾಲಯಕ್ಕೆ ಮತ್ತು ಮೂರನೇ ತಂಡವನ್ನು ಥೈಲ್ಯಾಂಡ್‌ನ ಎಐಟಿ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿದೆ.

ಫಿನ್ ಲ್ಯಾಂಡ್ ನಲ್ಲಿ ಟೈಪಿಸ್ಟ್ ಯು.ಬಿ. ಮೇಸ್ತ್ರಿ ಮತ್ತು ಸ್ಟೆನೋಗ್ರಾಫರ್ ನಾಗರಾಜ ಎಂ.ವಿ.

ವಿಶ್ವವಿದ್ಯಾಲಯವು ತರಬೇತಿಗೆ ತೆರಳಿರುವ ವಿದ್ಯಾರ್ಥಿಗಳ ಮಾರ್ಗದರ್ಶನಕ್ಕಾಗಿ ಪ್ರಾಧ್ಯಾಪಕರನ್ನು ಕಳಿಸುವುದು ವಾಡಿಕೆ ಮತ್ತು ನಿಯಮಬದ್ಧ. ಆದರೆ, ಟೈಪಿಸ್ಟ್ ಯು.ಬಿ.ಮೇಸ್ತ್ರಿ ಮತ್ತು ಸ್ಟೆನೋಗ್ರಾಫರ್ (ಕುಲಪತಿಗಳ ಆಪ್ತ ಸಹಾಯಕ )ನಾಗರಾಜ ಎಂ.ವಿ. ಎಂಬಾತನನ್ನು ಕೂಡ ಫಿನಲ್ಯಾಂಡ್‌ಗ್ ಕಳಿಸಲಾಗಿದೆ. ಕೆಳಹಂತದ ನೌಕರರನ್ನು ವಿಶ್ವವಿದ್ಯಾಲಯದ ಡಿ ಗ್ರುಪ್ ನೌಕರರನ್ನು ಕಳಿಸಿರುವುದು ಆಶ್ಚರ್ಯ ಮೂಡಿಸಿದೆ.

ಇನ್ನೊಂದೆಡೆ ಟೈಪಿಸ್ಟ್ ಯು.ಬಿ.ಮೇಸ್ತ್ರಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ ಕೃಷಿ ವಿಶ್ವವಿದ್ಯಾಲಯದ ಇಬ್ಬರು ಗುತ್ತಿಗೆ ಆಧಾರದಲ್ಲಿ ಕೆಲಸ ಮಡುತ್ತಿದ್ದ ಇಬ್ಬರು ಯವತಿಯರ ಸಾವಿನ ಪ್ರಕರಣದಲ್ಲಿದ್ದನು. ಮೇಸ್ತ್ರಿಯನ್ನು ಈಗ ವಿದೇಶಕ್ಕೆ ಕಳಿಸಿದ್ದು ವಿಶ್ವ ವಿದ್ಯಾಲಯದಲ್ಲಿ ಹೇಳುವವರೆ ಕೇಳುವವರೆ ಇಲ್ಲವೆನ್ನುವಂತಾಗಿದೆ. ಕೃಷಿ ಸಚಿವರಿಗಂತೂ ಚೆಟ್ಟಿಯವರು ಹಿಂಡುವ ಎಮ್ಮೆಯಾಗಿದ್ದಾರೆಂಬ ಮಾತು ವಿ.ವಿ.ಗೋಡೆಗಳಿಂದಲೇ ಕೇಳಿ ಬರುತ್ತಿವೆ.

ಈಗಾಗಲೇ ವಿಶ್ವವಿದ್ಯಾಲಯದ ಖರ್ಚಿನಲ್ಲಿ ಕೆಲ ದಿನಗಳ ಹಿಂದೆ ಫಿನಲ್ಯಾಂಡ್‌ಗೆ ಹೋಗಿ ಬಂದಿದ್ದ ಡಾ.ಚೆಟ್ಟಿ ಈಗ ಥೈಲ್ಯಾಂಡ್‌ಗೆ ತೆರಳಿದ್ದಾರೆ.ಇನ್ನೊಂದೆಡೆ ನಾಲ್ಕನೇ ದರ್ಜೆಯ ನೌಕರರನ್ನು ಸಹ ವಿದೇಶಕ್ಕೆ ತೆರಳಲು ಅವಕಾಶ ಕಲ್ಪಿಸಿರುವುದರ ಹಿಂದೆ ಡಾ.ಚೆಟ್ಟಿಯವರ ಸ್ವಾರ್ಥ ಇದೆ ಎಂದು ಗೊತ್ತಾಗಿದೆ.

ಇತ್ತ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸಿರುವ ಹಂಗಾಮಿ ನೌಕರರನ್ನು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದಡಿ ನೇಮಕಮಾಡಬೇಕು ಹಾಗೂ ಹಿರಿಯ ಕಾರ್ಮಿಕರ ಸೇವಾ ಅರ್ಹತೆಯನ್ನು ಪರಶೀಲಿಸಿ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲು ಅನುಕೂಲವಾಗಲು ಕೃಷಿ ವಿಶ್ವವಿದ್ಯಾಲಯದಲ್ಲಿಯ ಲೇಬರ್ ಕಮಿಟಿ ಪುರ್ನರಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಕೃಷಿ ವಿಶ್ವವಿದ್ಯಾಲಯ ಆಡಳಿತ ಕಚೇರಿ ಎದುರು ಕೃಷಿ ವಿಶ್ವವಿದ್ಯಾಲಯ ಹಂಗಾಮಿ ನೌಕರರ ಸಂಘದ ವತಿಯಿಂದ ಧರಣಿ ನಡೆಸುತ್ತಿದ್ದರೂ ಇವರು ವಿಮಾನ ಹತ್ತಿರುವದರ ಬಗ್ಗೆ ರಂಜನೀಯ ಗುಸು ಗುಸು ವಿ.ವಿ. ಆವರಣ ತುಂಬಾ ದಟ್ಟವಾಗಿದೆ.

ಇದೇ ಜೂ.30 ರಂದು ಕುಲಪತಿ ಅವಧಿ ಪೂರೈಸಲಿರುವ ಡಾ.ಚೆಟ್ಟಿ, ಪ್ರತಿ ವರ್ಷ ಸೆಪ್ಟಂಬರ್‌ನಲ್ಲಿ ಏರ್ಪಡಿಸಲಾಗುತ್ತಿದ್ದ ಕೃಷಿ ಮೇಳವನ್ನು ಕೃಷಿ ವಿಶ್ವವಿದ್ಯಾಲಯದಲ್ಲಿ ಇದೇ ದಿ.27 ರಿಂದ 29 ವರೆಗೆ ಏರ್ಪಡಿಸಲು ಸಜ್ಜಾಗಿದ್ದರು. ಆದರೆ ಹವಾಮಾನ ಹಾಗೂ ಇತರ ಕಾರಣಗಳನ್ನು ಮುಂದಿಟ್ಟುಕೊಂಡು ಕೃಷಿ ಮೇಳವನ್ನು ಮುಂದೂಡಲ್ಪಟ್ಟಿದೆ.
ತಮ್ಮು ಕುಲಪತಿ ಅವಧಿಯುದ್ದಕ್ಕೂ ಅನೇಕ ಆರೋಪಗಳಿಗೆ ಗುರಿಯಾದ ಡಾ.ಚೆಟ್ಟಿ ಅವರು ಈಗ ವಿದೇಶ ಪ್ರವಾಸ ಕೈಕೊಂಡು ಮತ್ತೇ ಸುದ್ದಿಯಾಗಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *