ಹುಬ್ಬಳ್ಳಿ : ನಾಳೆ ಮತ್ತು 19ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (ಎಕೆಬಿಎಂಎಸ್) ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯುತ್ತಿದ್ದು ಸ್ವಚ್ಛ ವರ್ಚಸ್ಸಿನ ಎಸ್.ರಘುನಾಥ್ ಅವರಿಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಬೆಂಗಳೂರಿನ ಬ್ರಾಹ್ಮಣಸಮಾಜದ ಪ್ರಮುಖರಾದ ಸುದರ್ಶನ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಮೊದಲ ಹಂತದ ಚುನಾವಣೆ ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದ ಐದು ಮತಗಟ್ಟೆಗಳಾದ ಮೈಸೂರು, ಶಿವಮೊಗ್ಗ, ಹಾಸನ, ಹುಬ್ಬಳ್ಳಿ ಮತ್ತು ರಾಯಚೂರುಗಳಲ್ಲಿ ನಾಳೆ ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯದ ಬಹುತೇಕ ಮುಖ್ಯ ಉಪಪಂಗಡಗಳೆಲ್ಲ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್.ರಘುನಾಥ್ ಅವರಿಗೆ ಬೆಂಬಲ ನೀಡಲು ಒಮ್ಮತದಿಂದ ತೀರ್ಮಾನಿಸಿವೆ ಎಂದರು.
ಬ್ರಾಹ್ಮಣ ಸಮುದಾಯದ ಒಳಿತಿಗಾಗಿ ರೂ.100 ಕೋಟಿ ಕಾಪುಧನ ಸಹಿತ ಹಲವು ಯೋಜನೆಗಳನ್ನು ರೂಪಿಸಿರುವ
ರಘುನಾಥ್ ಅವರಿಗೆ ರಾಜ್ಯದ ಮೂಲೆ ಮೂಲೆಗಳಲ್ಲಿರುವ ಸುಮಾರು 44ರ ಉಪಪಂಗಡಗಳಲ್ಲಿನ ಬಹುತೇಕ ಉಪಪಂಗಡಗಳೂ ಈ ಬಾರಿ ಬೆಂಬಲ ಸೂಚಿಸಿವೆ ಎಂದರು.
ಗೋಷ್ಠಿಯಲ್ಲಿ ಅಶ್ವಥ್ ನಾರಾಯಣ, ಶ್ರೀಮತಿ ಕೋಕಿಲಾ, ಲಕ್ಷ್ಮಣರಾವ ಓಕ, ಲಕ್ಷ್ಮಣರಾವ ಕುಲಕರ್ಣಿ ಮುಂತಾದವರಿದ್ದರು.