ಹುಬ್ಬಳ್ಳಿ-ಧಾರವಾಡ ಸುದ್ದಿ
ಆಕಾಶವಾಣಿ ಸಿಬ್ಬಂದಿ ಮನೆಯಲ್ಲೇ ಲಾಕ್!;  ವಸತಿಗೃಹಗಳಿಗೆ ಬೀಗ ಹಾಕಿದ ದುಷ್ಕರ್ಮಿಗಳು ;  ವಿಚಿತ್ರ ಘಟನೆಯಿಂದ ಬೆಚ್ಚಿ ಬಿದ್ದ ವಿದ್ಯಾಕಾಶಿ ಜನತೆ

ಆಕಾಶವಾಣಿ ಸಿಬ್ಬಂದಿ ಮನೆಯಲ್ಲೇ ಲಾಕ್!; ವಸತಿಗೃಹಗಳಿಗೆ ಬೀಗ ಹಾಕಿದ ದುಷ್ಕರ್ಮಿಗಳು ; ವಿಚಿತ್ರ ಘಟನೆಯಿಂದ ಬೆಚ್ಚಿ ಬಿದ್ದ ವಿದ್ಯಾಕಾಶಿ ಜನತೆ

ಧಾರವಾಡ: ಪೇಡೆನಗರಿಯ ಆಕಾಶವಾಣಿ ಸಿಬ್ಬಂದಿ ಇರುವ ವಸತಿ ಗೃಹಗಳಿಗೆ ಕೆಲ ದುಷ್ಕರ್ಮಿಗಳು ಬೀಗ ಹಾಕಿರುವ ಘಟನೆ ನಡೆದಿದೆ.
ಧಾರವಾಡ ಕೆಸಿಡಿ ಬಳಿ ಇರುವ ವಸತಿ ಗೃಹಗಳಲ್ಲಿ ಈ ಘಟನೆ ಸಂಭವಿ ಸಿದೆ. ಹೊರಗಡೆಯಿಂದ ದುಷ್ಕರ್ಮಿಗಳು ಬೀಗ ಹಾಕಿ ಹೋಗಿದ್ದು ಇದಕ್ಕೆ ಯಾವುದೇ ನಿಖರ ಕಾರಣ ತಿಳಿದುಬಂದಿಲ್ಲ.

ಈ ಪ್ರದೇಶದಲ್ಲಿ ಇರುವ 10ಕ್ಕೂ ಹೆಚ್ಚು ಮನೆಗಳಿಗೆ ಹೊರಗಡೆಯಿಂದ ಬೀಗ ಹಾಕಲಾಗಿದೆ. ಕೆಲಮಹಡಿಯ ಮನೆಗಳಿಗೆ ಮಾತ್ರ ಈ ರೀತಿಮಾಡಲಾಗಿದೆ. ಸಾಲದು ಎಂಬುದಕ್ಕೆ ಮೇಲ್ಮಹಡಿಗೆ ಹೋಗದಂತೆಯೂ ಮೆಟ್ಟಿಲಿನ ಬಾಗಿಲಿಗೂ ಬೀಗ ಹಾಕಲಾಗಿದೆ.
ಇದರಿಂದ ಆಕಾಶವಾಣಿ ಸಿಬ್ಬಂದಿ ಸೇರಿದಂತೆ ಇಲ್ಲಿ ವಾಸಿಸುತ್ತಿರುವವರೆ ಲ್ಲರೂ ಒಳಗಡೆಯೆ ಲಾಕ್ ಆಗಿದ್ದಾರೆ. ನಸುಕಿನ ಜಾವ 4 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿರೋ ಶಂಕೆ ಉಂಟಾಗಿದೆ. ಏಕೆಂದರೆ ಬೆಳಗ್ಗೆ 4ಕ್ಕೆ ಏಕಾಏಕಿ ವಿದ್ಯುತ್ ಕಡಿತ ಮಾಡಲಾಗಿತ್ತು. ಈ ಸಂದರ್ಭದಲ್ಲಿ ದುರ್ಷರ್ಮಿಗಳು ಹೀಗೆ ಮಾಡಿರಬಹುದು ಎಂದು ಊಹಿಸಲಾಗಿದೆ. ತದನಂತರ ಕೀಲಿ ಒಡೆಸಿ ನಿವಾಸಿಗಳು ಹೊರ ಬಂದಿದ್ದಾರೆ.


ಪೇಡೆನಗರಿಯಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಕಳ್ಳರ ಹಾವಳಿ ಹೆಚ್ಚಾಗಿದೆ. ಮನೆ ಕಳ್ಳತನ, ಬೈಕ್ ಕಳ್ಳತನ ನಡೆಯುತ್ತಲೇ ಇಂತಹ ಘಟನೆ ನಡೆದಿರುವುದು ಮೊದಲ ಸಲವಾಗಿದೆ. ಆಕಾಶವಾಣಿ ವಸತಿ ಸಮುಚ್ಛಯದಲ್ಲಿ ಒಟ್ಟು 46 ಮನೆಗಳಿವೆ. ಇಂದು ಬೆಳಿಗ್ಗೆ ವಸತಿ ಗೃಹದಲ್ಲಿನ ಕೆಲ ಮನೆಗಳ ಜನರು ಕೆಲಸಕ್ಕೆ, ವಾಕಿಂಗ್ ಗೆ ಅಂತಾ ಹೊರಗೆ ಬರಬೇಕು ಅಂದುಕೊಂಡು ಮನೆ ಬಾಗಿಲು ತೆರೆಯಲು ಯತ್ನಿಸಿದರೆ, ಬಾಗಿಲು ತೆರೆಯಲೇ ಇಲ್ಲ. ಪೇಪರ್, ಹಾಲು ಹಾಕುವ ಹುಡುಗರನ್ನು ಕರೆದು ಕೇಳಿದರೆ, ಹೊರಗಡೆಯಿಂದ ಕೀಲಿಯನ್ನು ಹಾಕಲಾಗಿದೆ ಅನ್ನೋ ಉತ್ತರ ಬಂತು. ಈ ಮಾಹಿತಿ ಕೇಳಿ ಇಡೀ ವಸತಿ ಗೃಹಗಳ ಜನರೇ ಬೆಚ್ಚಿಬಿದ್ದರು. ಏಕೆಂದರೆ ಇಲ್ಲಿನ ಸುಮಾರು ೮ ಮನೆಗಳಿಗೆ ಹೊರಗಡೆಯಿಂದ ಕೀಲಿ ಜಡಿಯಲಾಗಿತ್ತು. ಅಲ್ಲದೇ ಅವೆಲ್ಲ ಹೊಸ ಕೀಲಿಗಳೇ ಅನ್ನುವುದು ಮಹತ್ವದ್ದಾಗಿದೆ.
ಘಟನೆ ಮಾಹಿತಿ ಪಡೆದ ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮಾಹಿತಿಯನ್ನು ಕಲೆ ಹಾಕಿದ್ದು,ಇಷ್ಟು ಮನೆಗಳಿದ್ದರೂ ಇಲ್ಲಿ ಭದ್ರತಾ ವ್ಯವಸ್ಥೆಯನ್ನು ಮಾಡಿಕೊಂಡಿಲ್ಲ. ಅಲ್ಲದೇ ಸಿಸಿ ಟಿವಿ ಕ್ಯಾಮೆರಾ ಕೂಡ ಅಳವಡಿಸಿಲ್ಲವಾಗಿದ್ದು, ಘಟನೆ ಇಡೀ ವಿದ್ಯಾಕಾಶಿ ಯ ಜನರನ್ನು ಬೆಚ್ಚಿಬೀಳಿಸಿದೆ.
ಒಟ್ಟು 36 ವರ್ಷಗಳಲ್ಲಿ ಇಂಥ ಘಟನೆ ನಡೆದಿರಲೇ ಇಲ್ಲ.ಈಗ ಭಾರೀ ಆತಂಕವುಂಟಾಗಿದ್ದು, ಈಬಗ್ಗೆ ತನಿಖೆಯಾಗಲಿ ಎಂದು ನಿವಾಸಿ ಡಾ. ಚೇತನಕುಮಾರ ನಾಯಕ್, ರಜಿನಿ ಕುಲಕರ್ಣಿ ಮುಂತಾದವರು ಹೇಳಿದರು.

 

administrator

Related Articles

Leave a Reply

Your email address will not be published. Required fields are marked *