ಹುಬ್ಬಳ್ಳಿ-ಧಾರವಾಡ ಸುದ್ದಿ
ಇಂದಿನ ಜನಾಂಗಕ್ಕೆ ’ಸಜನಾ’ ಆದರ್ಶ;    ’ಆನ್ ಓಪನ್ ಬ್ಯಾಗ್ ಆಪ್ ಆಲ್ಮ್ಸ್’ ಬಿಡುಗಡೆ

ಇಂದಿನ ಜನಾಂಗಕ್ಕೆ ’ಸಜನಾ’ ಆದರ್ಶ; ’ಆನ್ ಓಪನ್ ಬ್ಯಾಗ್ ಆಪ್ ಆಲ್ಮ್ಸ್’ ಬಿಡುಗಡೆ

ಹುಬ್ಬಳ್ಳಿ: ಡಾ. ಎಸ್.ಜೆ ನಾಗಲೋಟಿಮಠ ಅವರ ನಡೆ, ನುಡಿ ಮತ್ತು ಪ್ರಮಾಣಿಕತೆ ಇಂದಿನ ಜನಾಂಗಕ್ಕೆ ಆದರ್ಶವಾಗಬೇಕಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ವಸ್ತುಸಂಗ್ರಹಾಲಯವಾಗಿ ಉಳಿದಿದ್ದಾರೆ ಎಂದು ವಿಶ್ರಾಂತ ಜಿಲ್ಲಾ ಶಾಸ್ತ್ರಜ್ಞ ಡಾ. ಜಿ.ಆರ್. ತಮಗೊಂಡ ಹೇಳಿದರು.


ಡಾ.ಎಸ್.ಜೆ.ನಾಗಲೋಟಿಮಠ ಅಂತರರಾಷ್ಟ್ರೀಯ ಪ್ರತಿಷ್ಠಾನ ಬೆಳಗಾವಿ, ಷಡಕ್ಷರಿಸ್ವಾಮಿ ದಿಗ್ಗಾಂವಕರ ಟ್ರಸ್ಟ್ ಕಲಬುರಗಿ ಮತ್ತು ಜನಾಂದೋಲನ ಟ್ರಸ್ಟ್‌ನ ಸಹಯೋಗದಲ್ಲಿ ಸಜನಾ ಅವರ ’ಬಿಚ್ಚಿದ ಜೋಳಿಗೆ’ಯ ಇಂಗ್ಲೀಷ್ ಆವೃತ್ತಿ ( ಆನ್ ಓಪನ್ ಬ್ಯಾಗ್ ಆಪ್ ಆಲ್ಮ್ಸ್) ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಅವರು ಒಬ್ಬ ಸಾಹಿತ್ಯ ಕ್ಷೇತ್ರದಲ್ಲಿ ಬೆಳಗುವ ಜ್ಯೋತಿಯಾಗಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿದ್ದ ಅವರು ಮುಂದೆ ಒಂದು ದಿನ ಆ ಮಗು ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಸಾಧನೆ ಸ್ಮರಿಸಬೇಕಾಗಿದೆ ಎಂದರು.
ಸಮಾಜದಲ್ಲಿ ಅವರು ಬದುಕಿದ ರೀತಿ ಇಂದಿಗೂ ಯಾರು ಮೀರಿಸುವವರಿಲ್ಲ. ಅವರೊಂದಿಗೆ ಸೇವೆ ಸಲ್ಲಿಸಿದ ಹಲವಾರು ಶ್ರೇಷ್ಠ ಅನುಭವವನ್ನು ಕಥೆಯ ರೂಪದಲ್ಲಿ ತಿಳಿಸಿದರು.


ಪುಸ್ತಕದ ಕುರಿತು ಪತ್ರಕರ್ತ ಹರ್ಷವರ್ಧನ ಶೀಲವಂತ ಮಾತನಾಡಿ, ಇತ್ತೀಚಿನ ಬರಹಗಾರು ವಾಸ್ತವವನ್ನು ಬರೆಯುವುದು ವಿರಳ ಆದರೆ ಎಸ್.ಜೆ ನಾಗಲೋಟಿಮಠ ಅವರು ಬದುಕಿದಂತೆ ಬರೆದವರು ಅವರ ಬಿಚ್ಚಿದ ಜೋಳಿಗೆ ಪುಸ್ತುಕ ಅವರ ಅನುಭವದ ಸಾರವನ್ನು ತಿಳಿಸಿದ್ದಾರೆ ಎಂದರು.
ನಾಗಲೋಟಿಮಠ ಅವರು ಪುಸ್ತಕ ಬಿತ್ತಿ ಬೆಳೆದಿದ್ದೇವೆ. ಅದನ್ನು ಮುಂದಿನ ಪಿಳಿಗೆಯವರಿಗೆ ಮುಟ್ಟಿಸುವ ಕೆಲಸ ನಾವು ಮಾಡಬೇಕು. ಜನ್ಮದಿನ ಅಥವಾ ರ್‍ಯಾಂಕ್ ಪಡೆದಾಗ ಇಂತಹ ಪುಸ್ತಕವನ್ನು ಉಡುಗರೆಯಾಗಿ ನೀಡಬೇಕು ಎಂದು ಹೇಳಿದರು.
ಮೌಲ್ಯ ಮತ್ತು ಆದರ್ಶ ನಾಲಿಗೆಯಾಗಬೇಕು. ಚೆನ್ನಾಗಿ ಮಾತನಾಡುವವರನ್ನು ನಮಗೆ ಮಾದರಿಯಾಗಬಾರದು ನಡೆದಂತೆ ಮಾತನಾಡುವವರು ಮಾದರಿಯಾಗಬೇಕು ಅಂತಹ ವ್ಯಕ್ತಿತ್ವ ನಾಗಲೋಟಿಮಠರಾಗಿದ್ದರು ಎಂದರು.
ಸಜನಾ ಅವರು ಬರೆದ ’ಆನ್ ಓಪನ್ ಬ್ಯಾಗ್ ಆಪ್ ಆಲ್ಮ್ಸ್’ ಎಂಬ ಸಜನ ಅವರ ಪುಸ್ತಕದಲ್ಲಿ ಭಾವ ಸಾಂದ್ರವಾಗಿ, ಶಬ್ದ ಸಂಗೀತವಾಗಿ ಓದಿಸಿಕೊಂಡು ಹೋಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶುಶ್ರೂತಾ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ದೇವರಾಜ ರಾಯಚೂರ ಮಾತನಾಡಿದರು.
ಶಾಂತಾ ನಾಗಲೋಟಿಮಠ, ಪ್ರಕಾಶಕ ಎಸ್.ಎಸ್.ಹಿರೇಮಠ ಮತ್ತು ಡಾ.ಜಿ.ನಾಗೇಶಪ್ಪ, ಮಹಾನಂದಾ ದಿಗ್ಗಾಂವಕರ, ಉಮೇಶ ನಾಗಲೋಟಿಮಠ, ಬಸವರಾಜ ಕೆಂದೋಳಿ, ಶುಸ್ಮಾ ಹಿರೇಮಠ, ಶಿವಶಂಕರ ಹಿರೇಮಠ, ಪಿಐ ಎನ್.ಸಿ.ಕಾಡದೇವರ ಸೇರಿದಂತೆ ಇತರರು ಇದ್ದರು.
ಡಾ.ಭಾಗ್ಯಜ್ಯೋತಿ ಕೋಟಿಮಠ ಕಾರ್ಯಕ್ರಮ ನಿರೂಪಿಸಿದರು.

administrator

Related Articles

Leave a Reply

Your email address will not be published. Required fields are marked *