ಧಾರವಾಡ: ಪ್ರಸ್ತುತ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಂದಾಯ ಅಧಿಕಾರಿಯಾಗಿ ಕಾರ್ಯನಿರ್ವಸುತ್ತಿದ್ದ ಸಂತೋಷ ಆನಿಶೆಟ್ಟರ್ ಮನೆಯಲ್ಲಿ ದಾಳಿ ವೇಳೆ ಕೋಟ್ಯಾಂತರ ರೂಪಾಯಿ ಮೌಲ್ಯ ಆಸ್ತಿ ಪತ್ತೆಯಾಗಿದೆ.
ನಗರದ ಮಿಚಿಗನ್ ಲೇ ಔಟ್ ನಿವಾಸಿ ಸಂತೋಷ ಆನಿಶೆಟ್ಟರ್ ವಿರುದ್ಧ ಲೋಕಾಯುಕ್ತರು ಆದಾಯ ಮೀರಿ ಆಸ್ತಿ ಗಳಿಕೆ ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
ಮೂರು ದಿನಗಳ ಹಿಂದೆಯಷ್ಟೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಒಟ್ಟು ಏಳು ಸ್ಥಳದಲ್ಲಿ ದಾಳಿ ಮಾಡಿರುವ ವೇಳೆ ಅಕ್ರಮ ಸಂಪತ್ತು ಹೊಂದಿರುವುದು ಬಯಲಾಗಿದೆ. ಒಟ್ಟು 4 ಕೋಟಿ, 27 ಲಕ್ಷದ, 27909 ರೂ ಮೌಲ್ಯದ ಸ್ಥಿರ ಮತ್ತು ಚರಾಸ್ತಿಯಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮನಸೂರಿನ ಸಣ್ಣ ಸೋಮಾಪೂರ ಹದ್ದಿನಲ್ಲಿ ಖಾಲಿ ನಿವೇಶನ( 13.50 ಲ.ರೂ.ಮೌಲ್ಯ,) ಬೆಳಗಾವಿ ರಸ್ತೆಯಲ್ಲಿನ ವೆಂಕಟಾಪೂರ ಗ್ರಾಮದ ಹೊರವಲಯದ ಜಮೀನು (60 ಲಕ್ಷ ಮೌಲ್ಯ,), ಧಾರವಾಡ ಮಿಚಿಗಿನ್ ಲೇಔಟ್ ನಲ್ಲಿ ಎರಡು ಅಂತಸ್ತಿನ ಮನೆ (70 ಲಕ್ಷ ಮೌಲ್ಯ) ದೊಡ್ಡ ನಾಯಕನದಲ್ಲಿರುವ ಕೊಪ್ಪದಲ್ಲಿ ಸಹೋದರನ ಹೆಸರಿನಲ್ಲಿ (65 ಲಕ್ಷ ರೂಪಾಯಿ ಮೌಲ್ಯ) ಮೂರಂತಸ್ತಿನ ಮನೆ, ಜಯನಗರದಲ್ಲಿ ಮೂರಂತಸ್ತಿನ ಮನೆ (74.72.350 ರೂ.ಮೌಲ್ಯ )
ಒಂದು ಹೊಂಡಾ ಟಸ್ಕಾನ್ ಕಾರು 34 ಲ.ರೂ. ಹೋಂಡಾ ಬ್ರಿವೋ ಕಾರು 6 ಲಕ್ಷ, ಬೈಕ್ 60,000,69.5 ಗ್ರಾಂ ಬಂಗಾರದ ಆಭರಣಗಳು(3,69,000. ಮೌಲ್ಯ)
200 ಗ್ರಾಂ ಬಂಗಾರದ ಆಭರಣಗಳು 10, ಲಕ್ಷ 820 ಗ್ರಾಂ ಬೆಳ್ಳಿ, ಬ್ಯಾಂಕ್ ಖಾತೆಯಲ್ಲಿ 6,98600 ನಗದು 59,000 ಹೀಗೆ ಬರೊಬ್ಬರಿ ಒಟ್ಟು 4,27,96950 ರೂಪಾಯಿಯಷ್ಡು ಚರಾಸ್ತಿ, ಸ್ಥಿರಾಸ್ತಿ ಪತ್ತೆ ಯಾಗಿದೆ ಎಂದು ವಿವರಿಸಿದ್ದಾರೆ.
ಪೇದೆ ಮಾನಕರ್ ಬಳಿಯೂ ಕೋಟ್ಯಾಂತರ ಆಸ್ತಿ
ಧಾರವಾಡ; ಇಲ್ಲಿನ ಶಹರ ಪೊಲೀಸ್ ಠಾಣೆಯ ಪೇದೆ ಶಿವಾನಂದ ಮಾನಕರ ಮನೆಯ ಮೇಲೆ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿದ್ದು ಬರೋಬ್ಬರಿ1 ಕೋಟಿ 59 ಲಕ್ಷದ ಮೌಲ್ಯದ ಆಸ್ತಿ. ಮಾನಕರಗೆ ಸೇರಿದ ಎರಡು ಸ್ಥಳಗಳಲ್ಲಿ ರೇಡ್ ನಡೆದಿತ್ತು.
ಆದಾಯ ಮೀರಿ ಒಂದು ಕೋಟಿ ಹಣ ಮಾಡಿದ್ದ ಪೋಲಿಸ್ ಶಿವಾನಂದ ಮಾನಕರ ಮೇಲೆ ಲೋಕಾಯುಕ್ತರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿ ದ್ದಾರೆ.
ಧಾರವಾಡದ ಸತ್ತೂರಿನಲ್ಲಿ ಒಂದು ಮನೆ 20 ಲಕ್ಷ, ಸತ್ತೂರಿನಲ್ಲಿನ ಮನೆ 30 ಲಕ್ಷ, 8 ಸೈಟ್ ಬೆಲೆ58,29,000 ರೂ.,22,80,000 ಬೆಲೆಯ ಎರಡು ಕಾರು,
17,71,400 ರೂ.ಮೌಲ್ಯದ 416 ಗ್ರಾಂ ಬಂಗಾರದ ಆಭರಣ, 11.400 ಲ.ರೂ ಮೌಲ್ಯದ 460 ಗ್ರಾಂ ಬೆಳ್ಳಿ ,7.66.490 ನಗದು ಪತ್ತೆಯಾಗಿದೆ.
ಮಾನಕರನದ್ದು ಒಟ್ಟು ಚರಾಸ್ತಿ, ಸ್ಥಿರಾಸ್ತಿ ಸೇರಿ1.59.58.260 ರೂ ಮೌಲ್ಯ ಎಂದು ವಿವರಿಸಿದ್ದಾರೆ.
ದಾಳಿ ವೇಳೆ ಆರಂಭಿಕ ಹಂತದಲ್ಲಿ ಅಕ್ರಮ ಸಂಪಾದನೆಯ ಆಸ್ತಿ ಎಂದು ಗೊತ್ತಾಗಿದೆ. ಆದರೆ, ಸಂಪೂರ್ಣ ತನಿಖೆಯ ನಂತರ ಗಳಿಕೆಯ ನಿಖರತೆ ಸ್ಪಷ್ಟವಾಗಲಿದೆ.