ಹುಬ್ಬಳ್ಳಿ-ಧಾರವಾಡ ಸುದ್ದಿ
ಕಾರು ಪಾರ್ಕಿಂಗ್‌ಗಾಗಿ ಹಲ್ಲೆ: ಚೀಟರ್ ಮೋನ್ಯಾ ಬಂಧನ

ಕಾರು ಪಾರ್ಕಿಂಗ್‌ಗಾಗಿ ಹಲ್ಲೆ: ಚೀಟರ್ ಮೋನ್ಯಾ ಬಂಧನ

ಧಾರವಾಡ : ಹೊಯ್ಸಳನಗರದ ಮನೆಯೊಂದರ ಕಂಪೌಂಡ್‌ನಲ್ಲಿ ಕಾರು ನಿಲ್ಲಿಸಿದ್ದನ್ನು ಕೇಳಲು ಮನೆಯ ಮಾಲೀಕರು ಮತ್ತು ಬಾಡಿಗೆದಾರರ ಮೇಲೆ ಹಲ್ಲೆ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ಮೋಹನ ವಾಳ್ವೇಕರ ಅಲಿಯಾಸ ಚೀಟರ್ ಮೋನ್ಯಾ ಹಾಗೂ ಆತನ ಕುಟುಂಬದ ಸದಸ್ಯರನ್ನು ಉಪನಗರ ಪೊಲೀಸರು ಬಂಧಿಸಿದ್ದಾರೆಂದು ತಿಳಿದುಬಂದಿದೆ.


ಕಳೆದ ದಿ. 19ರಂದು ದೂರು ದಾಖಲಾದ ನಂತರ ನಂತರ ಪೇಡೆನಗರಿ ಬಿಟ್ಟಿದ್ದ ವಾಳ್ವೇಕರ ಹಾಗೂ ಕುಟುಂಬದ ಸದಸ್ಯರಾದ ಯುವರಾಜ, ದೇವರಾಜ ಹಾಗೂ ಮಮತಾ ವಾಳ್ವೇಕರ ಇಂದು ಬೆಳಿಗ್ಗೆ ಗೋಕಾಕದಲ್ಲಿ ವಶಕ್ಕೆ ಪಡೆದಿದ್ದು ಧಾರವಾಡಕ್ಕೆ ಕರೆತರುತ್ತಿದ್ದಾರೆನ್ನಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಗೋಕಾಕಗೆ ತೆರಳಿದ್ದರು.ಹಲ್ಲೆ ಘಟನೆಯಲ್ಲಿ ಬಾಡಿಗೆದಾರ ವಿದ್ಯಾರ್ಥಿ ಹೃಷಕೇಶ ತಾಂಗಡೆ, ಮನೆಯ ಮಾಲೀಕ ರೋಹನ ಕಲಗಾರಗೆ ಗಾಯಗಳಾಗಿದ್ದು ತೀವ್ರ ರಕ್ತಸ್ರಾವವಾಗಿತ್ತು.

 

 

administrator

Related Articles

Leave a Reply

Your email address will not be published. Required fields are marked *