ಹುಬ್ಬಳ್ಳಿ-ಧಾರವಾಡ ಸುದ್ದಿ

ಮಾದಕವಸ್ತು ವ್ಯಸನದ ವಿರುದ್ಧ ಎಲ್ಲರ ಹೋರಾಟ ಅಗತ್ಯ

ಜಾಗೃತಿ ನಡಿಗೆಯಲ್ಲಿ ಸುಮಾರು 5ಸಾವಿರಕ್ಕೂ ಹೆಚ್ಚು ಜನ

ನಾ ಡ್ರೈವರಾ…, ಟಗರು ಟಗರು… ಹಾಡಿಗೆ ನೃತ್ಯ ಮಾಡಿ ಖುಷಿಪಟ್ಟ ವಿದ್ಯಾರ್ಥಿಗಳಿಗೆ ಸಾಥ್ ನೀಡಿದ ಪೊಲೀಸ್ ಅಧಿಕಾರಿಗಳು

ವಿಡಿಯೊ ಇದೇ ಒಮ್ಮೆ ನೋಡಿ

ಧಾರವಾಡ: ಮಾದಕ ವ್ಯಾಸನವು ಮೂಲತಃ ಮೆದುಳಿನ ಕಾಯಿಲೆಯಾಗಿದೆ. ಮಾದಕ ವ್ಯಸನದ ಸಮಸ್ಯೆಗಳನ್ನು ಲಘುವಾಗಿ ಪರಿಗಣಿಸದೇ ಮಾದಕವಸ್ತು ವ್ಯಸನದ ವಿರುದ್ಧ ಎಲ್ಲರೂ ಹೋರಾಟ ಮಾಡುವುದು ಅತ್ಯಂತ ಅವಶ್ಯವಾಗಿದೆ. ಡ್ರಗ್ಸ್ ವಿರುದ್ಧದ ಸಮರವೇ ಈ ಜಾಥಾ ಎಂದು ಎಂದು ಉಪ ಪೊಲೀಸ್ ಆಯುಕ್ತ ರಾಜು ಎಂ. ಅವರು ಹೇಳಿದರು.

https://youtube.com/shorts/dMd-ZgNxnig?feature=share


ಅವರು ನಗರದ ಕೆಸಿಡಿ ಮೈದಾನದಲ್ಲಿ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತಾಲಯ ಮತ್ತು ಆರೋಹಣ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಮಾದಕವಸ್ತು ವ್ಯಸನದ ವಿರುದ್ಧದ ಜಾಗೃತಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.

ಸಣ್ಣ ವಯಸ್ಸಿನಲ್ಲಿ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಿ ಇಂದು ಅದರಿಂದ ಹೊರಬರದೆ ಜೀವನವನ್ನೇ ಹಾಳು ಮಾಡಿಕೊಂದಿರುವ ಎಷ್ಟೋ ಯುವಕರ ಉದಾಹರಣೆಗಳು ಕಣ್ಣ ಮುಂದೆ ಇವೆ. ಡ್ರಗ್ಸ್‌ಗಳು ವಿಶ್ವದ ಪ್ರತಿಯೊಂದು ದೇಶದ ಯುವಕರ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದ್ದು, ಅಭಿವೃದ್ಧಿ ವಿರೋಧಿ ಆಗಿದೆ ಎಂದು ತಿಳಿಸಿದರು.

https://youtube.com/shorts/dMd-ZgNxnig

ಪಾಲಿಕೆ ಆಯುಕ್ತ ಡಾ. ಗೋಪಾಲ ಕೃಷ್ಣ. ಬಿ., ಸಹಾಯಕ ಪೊಲೀಸ್ ಆಯುಕ್ತ ವಿಜಯ ಕುಮಾರ ಟಿ., ಸಿ.ಪಿ.ಐ ಶಂಕರಗೌಡ ಬಸವನಗೌಡ, ಡಿಸಿಪಿ ಗೋಪಾಲ ಬ್ಯಾಕೋಡ, ಪ್ರಭು ಗಂಗೇನಹಳ್ಳಿ, ಜೆ.ಎಂ.ಕಾಲಿಮಿರ್ಚಿ, ಮಲ್ಲನಗೌಡ ನಾಯ್ಕರ, ಸಂಗಮೇಶ ದಿಡಗಿನಾಳ ಮತ್ತು ಇತರ ಪೊಲೀಸ್ ಅಧಿಕಾರಿಗಳು, ಆರೋಹನ ಫೌಂಡೆಶನ್ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಜಾಥಾದಲ್ಲಿದ್ದರು.


ಜಾಥಾದಲ್ಲಿ ಸುಮಾರು ನಗರದ ಸುಮಾರು ಕಾಲೇಜಿನ 5ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜಾಥಾ ನಂತರ ಮೈದಾನದಲ್ಲಿ ವಿದ್ಯಾರ್ಥಿಗಳು ವಿವಿಧ ಹಾಡಿಗೆ ನೃತ್ಯ ಮಾಡಿ ಖುಷಿ ಪಟ್ಟರು. ಈ ಸಂದರ್ಭದಲ್ಲಿ ಮಕ್ಕಳ ನೃತ್ಯಕ್ಕೆ ಪೊಲೀಸ್ ಅಧಿಕಾರಿಗಳು ಕೂಡಾ ನೃತ್ಯ ಮಾಡಿ ಸಾಥ ನೀಡಿದರು.

ಧಾರವಾಡದ ಕೆಸಿಡಿ ಮೈದಾನದಲ್ಲಿ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತಾಲಯ ಮತ್ತು ಆರೋಹಣ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಮಾದಕವಸ್ತು ವ್ಯಸನದ ವಿರುದ್ಧದ ಜಾಗೃತಿ ನಡಿಗೆ ಕಾರ್ಯಕ್ರಮದಲ್ಲಿ ಧಾರವಾಡ ಉದ್ಯಮಿ ಅಶೋಕ ಈರಪ್ಪ ಅಮಿನಗಡ ಅವರು ಸುಮಾರು 2ಸಾವಿರ ಮಕ್ಕಳಿಗೆ ಉಚಿತವಾಗಿ ಲಿಂಬು ಶರಬತ್ ವಿತರಿಸಿದರು. ಅಕುಲ್ ಅಮಿನಗಡ, ಬಸವರಾಜ ಸುತಗಟ್ಟಿ, ಉದ್ಬವ ಕುಲಕರ್ಣಿ ಸೇರಿದಂತೆ ಇತರರು ಇವರಿಗೆ ಸಾಥ ನೀಡಿದರು.
administrator

Related Articles

Leave a Reply

Your email address will not be published. Required fields are marked *