ಮಹಿಳಾ ಮೋರ್ಚಾಗೆ ಸೀಮಾ, ಎಸ್‌ಸಿ ಮೋರ್ಚಾಗೆ ಹನುಮಂತ, ಎಸ್‌ಟಿ ಮೋರ್ಚಾಗೆ ಅಶೋಕ, ಹಿಂದುಳಿದ ವರ್ಗ(ಒಬಿಸಿ) ಮೋರ್ಚಾಗೆ ಪ್ರವೀಣ, ರೈತ ಮೋರ್ಚಾಗೆ ಈಶ್ವರಗೌಡ ಅಧ್ಯಕ್ಷರು
ಹುಬ್ಬಳ್ಳಿ: ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲೆಯ ವಿವಿಧ ಜಿಲ್ಲಾ ಮೋರ್ಚಾಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಗೊಳಿಸಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಆದೇಶ ಹೊರಡಿಸಿದ್ದಾರೆ.

ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರೀತಮ್ ಅರಕೇರಿ, ಪ್ರಧಾನ ಕಾರ್ಯದರ್ಶಿಗಳಾಗಿ ಮಂಜುನಾಥ ಹೆಬಸೂರ, ಶಕ್ತಿ ಹಿರೇಮಠ, ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಸೀಮಾ ಲದ್ವಾ, ಪ್ರಧಾನ ಕಾರ್ಯದರ್ಶಿಯಾಗಿ ಮಾಲತಿ ಹುಲಿಕಟ್ಟಿ, ಪೂಜಾ ರಾಯ್ಕರ್, ಎಸ್‌ಸಿ ಮೋರ್ಚಾ ಅಧ್ಯಕ್ಷರಾಗಿ ಹನುಮಂತ ಹರಿವಾಣ, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ಬಿಜವಾಡ, ಸುಭಾಷ ಅಂಕಲಕೋಟಿ ನೇಮಕಗೊಂಡಿದ್ದಾರೆ.

ಎಸ್‌ಟಿ ಮೋರ್ಚಾ ಅಧ್ಯಕ್ಷರಾಗಿ ಅಶೋಕ ವಾಲ್ಮೀಕಿ, ಪ್ರಧಾನ ಕಾರ್ಯದರ್ಶಿಯಾಗಿ ಹನುಮಂತ ಗೌಡರ, ಮಾರುತಿ ಚಾಕಲಬ್ಬಿ, ಹಿಂದುಳಿದ ವರ್ಗ(ಒಬಿಸಿ) ಮೋರ್ಚಾ ಅಧ್ಯಕ್ಷರಾಗಿ ಪ್ರವೀಣ ಹುರಳಿ, ಪ್ರಧಾನ ಕಾರ್ಯದರ್ಶಿಯಾಗಿ ಡಾ.ರವೀಂದ್ರ ಯಲ್ಕಾನ, ಶ್ರೀನಿವಾಸ ಕೋಟ್ಯಾನ, ರೈತ ಮೋರ್ಚಾ ಅಧ್ಯಕ್ಷರಾಗಿ ಈಶ್ವರಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಜಾಬಿನ್, ಮಂಜುನಾಥ ನೀರಲಕಟ್ಟಿ ಅವರು ನೇಮಕಗೊಂಡಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ತಮ್ಮ ಸಂಭ್ರಮ ಹಂಚಿಕೊಂಡಿರುವ ಪ್ರೀತಮ್ ಅರಕೇರಿ ಅವರು, ತಾವು ಕಾರ್ಯಕರ್ತನಾಗಿ ಪಕ್ಷದ ಕಾರ್ಯಗಳನ್ನು, ಸಂಘಟನೆಯನ್ನು ಮಾಡಿಕೊಂಡು ಬಂದಿರುವೆ ನನ್ನ ಕಾರ್ಯಕ್ಕೆ ಮೆಚ್ಚಿ, ನನ್ನ ಮೇಲೆ ನಂಬಿಕೆ ಇಟ್ಟು ಪಕ್ಷದ ಹಿರಿಯರು ನನಗೆ ಗುರುತರ ಜವಾಬ್ದಾರಿಯನ್ನು ವಹಿಸಿದ್ದಾರೆ. ಇನ್ನು ಮುಂದೆಯೂ ಪ್ರಾಮಾಣಿಕವಾಗಿ, ಜನಸೇವೆಯ ಪರಿಕಲ್ಪನೆಯೊಂದಿಗೆ ನನಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಸಮಾಜ ಸೇವೆ ಮಾಡುತ್ತೇನೆ. ಪಕ್ಷದ ಸಂಘಟನೆ ಮಾಡುತ್ತೇನೆ, ಈ ಹುದ್ದೆ ನನಗೆ ಸಿಗುವಲ್ಲಿ ಪ್ರೋತ್ಸಾಹಿಸಿದ ಹಾಗೂ ಇದಕ್ಕೆ ಕಾರಣರಾದ ಎಲ್ಲ ಹಿರಿಯ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂಜೆ ದರ್ಪಣಕ್ಕೆ ತಿಳಿಸಿದರು.



