ಹುಬ್ಬಳ್ಳಿ-ಧಾರವಾಡ ಸುದ್ದಿ
ಜಾತ್ರೆ ನಿರ್ಬಂಧ ಮುಂದುವರಿಸಿದಲ್ಲಿ ಬಿಜೆಪಿ ಧೂಳೀಪಟ : ಮುತಾಲಿಕ

ಜಾತ್ರೆ ನಿರ್ಬಂಧ ಮುಂದುವರಿಸಿದಲ್ಲಿ ಬಿಜೆಪಿ ಧೂಳೀಪಟ : ಮುತಾಲಿಕ

4ರಂದು ರಾಜ್ಯಾದ್ಯಂತ ಹೋರಾಟ

ಹುಬ್ಬಳ್ಳಿ: ಕೋವಿಡ್, ಓಮೈಕ್ರಾನ್ ಭೀತಿ ರಾಜ್ಯದಲ್ಲಿ ತಗ್ಗಿದ್ದ ಪರಿಣಾಮ ರಾಜ್ಯ ಸರ್ಕಾರ ಹಲವು ನಿಯಮ ತೆರವುಗೊಳಿಸಿದೆ. ಆದರೆ ಜಾತ್ರೆ ಹಾಗೂ ಉತ್ಸವಗಳ ಆಚರಣೆಗೆ ಅವಕಾಶ ನೀಡದೇ ನಿರ್ಬಂಧ ವಿಧಿಸಿದೆ. ಈ ಕಾರಣದಿಂದ ಕೂಡಲೇ ರಾಜ್ಯ ಸರ್ಕಾರ ಫೆ.೪ ರ ಒಳಗಾಗಿ ಆಚರಣೆಗೆ ಅವಕಾಶ ನೀಡಬೇಕು. ಇಲ್ಲದೇ ಹೋದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ಅನಿವಾರ್ಯ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಸರ್ಕಾರ ಕೋವಿಡ್ ನಿಯಮಗಳನ್ನು ಸಡಿಲಿಕೆಗೊಳಿಸಿ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಿ, ಧಾರ್ಮಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರಿರುವುದು ಖಂಡನೀಯವಾಗಿದೆ. ಕಳೆದ 2 ವರ್ಷಗಳಿಂದ ಧಾರ್ಮಿಕ ಚಟುವಟಿಕೆಗಳನ್ನು ನಿಷೇಧ ಹೇರಿರುವುದರಿಂದ ಜಾತ್ರೆ, ಉತ್ಸವಗಳ ನೆಚ್ಚಿ ಜೀವನ ನಡೆಸುವ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ ಎಂದರು.

ಸರ್ಕಾರ ವಿದೇಶಿ ಸಂಸ್ಕೃತಿಗೆ ನಿರ್ಬಂಧ ಸಡಿಲಗೊಳಿಸಿದ್ದು, ಆದರೆ ಸಾಂಪ್ರದಾಯಿಕ ಜಾತ್ರೆಗಳಿಗೆ ನಿರ್ಬಂಧನೆ ಹೇರಿರುವುದು ಖಂಡನೀಯ. ಇದನ್ನೇ ಮುಂದುವರಿಸಿದರೆ ಬಿಜೆಪಿ ಮುಂದಿನ ದಿನಗಳಲ್ಲಿ ಧೂಳಿಪಟವಾಗಲಿದೆ. ಹಿಂದುತ್ವ ಸಾರುವ ಬಿಜೆಪಿ ಸಾಂಪ್ರದಾಯಿಕತೆಗೆ ಧಕ್ಕೆ ತಂದರೇ ಶಾಪ ತಟ್ಟಲಿದೆ, ನೀವೆಲ್ಲರೂ ಸತ್ತು ಹೋಗುತ್ತೀರಿ. ಆದ್ದರಿಂದ ಧಾರ್ಮಿಕ ಸ್ಥಳಗಳಾದ ಯಲ್ಲಮ್ಮನ ಗುಡ್ಡ, ಚಿಂಚಲಿ ಮಾಯಕ್ಕ, ಸಿದ್ಧಾರೂಢ ಮಠ ಸೇರಿದಂತೆ ರಾಜ್ಯದ ಎಲ್ಲ ಧಾರ್ಮಿಕ ಕೆಂದ್ರಗಳಿಗೆ ಹಾಕಿರುವ ನಿರ್ಬಂಧವನ್ನು ಶೀಘ್ರವೇ ತೆರವುಗೊಳಿಸಬೇಕು. ಇದಕ್ಕಾಗಿ ಫೆ.4 ರಂದು ಶ್ರೀರಾಮ ಸೇನೆಯಿಂದ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು. ಹೋರಾಟಕ್ಕೆ ರಾಜ್ಯದ ಮಠಾಧೀಶರು ಬೆಂಬಲ ನೀಡಬೇಕು.ಎಲ್ಲ ತಹಶಿಲ್ದಾರ್ ಹಾಗೂ ಜಿಲ್ಲಾಧಿಕಾರಿ ಕಚೇರಿಗಳಿಗೆ ತೆರಳಿ ಘೇರಾವು ಹಾಕಲಾಗುವುದು ಎಂದು ಮುತಾಲಿಕ್ ಎಚ್ಚರಿಸಿದರು.
ಗೋಷ್ಠಿಯಲ್ಲಿ ಅಣ್ಣಪ್ಪ ದೇವಡಕರ್ ಮತ್ತಿತರರು ಇದ್ದಾರೆ.

ಹಿಜಾಬ್ ಧರಿಸುವ ಪ್ರಶ್ನೆ ಇಲ್ಲ..!

ಉಡುಪಿಯ ಬಾಲಕಿಯರ ಕಾಲೇಜಿನಲ್ಲಿ ಹಿಜಾಬ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮುತಾಲಿಕ್ ಮಾತನಾಡಿ, ಹಿಜಾಬ್ ಹಾಕಿಕೊಂಡು ಬರುವ ಚರ್ಚೆ ಇಲ್ಲ, ಎಲ್ಲರೂ ಸಮವಸ್ತ್ರ ಧರಿಸಬೇಕು. ಅದರಲ್ಲಿ ಯಾವುದೇ ಜಾತಿ ಇಲ್ಲ. ಈ ರೀತಿಯ ಉದ್ಧಟತನ ಟೆರರಿಸ್ಟ್ ಮಟ್ಟಿಗೆ ತೆಗೆದುಕೊಂಡು ಹೋಗುತ್ತದೆ.ಅವರವರ ಸ್ವಾತಂತ್ರ್ಯ ಆವರ ಮನೆಯಲ್ಲಿ ಇರಲಿ ಅಂತವರಿಗೆ ಟಿಸಿ ಕೊಟ್ಟು ಶಾಲೆಯಿಂದ ಹೊರಗೆ ಹಾಕಬೇಕು. ಪ್ರತ್ಯೇಕತೆಬೇಕು ಎಂದರೇ ಪಾಕಿಸ್ತಾನಕ್ಕೆ ಹೋಗಲಿ ಎಂದರು.

administrator

Related Articles

Leave a Reply

Your email address will not be published. Required fields are marked *