ಹುಬ್ಬಳ್ಳಿ-ಧಾರವಾಡ ಸುದ್ದಿ
ಕಾಂಗ್ರೆಸ್ ಗೂಂಡಾಗಿರಿ, ಅಸಭ್ಯ ವರ್ತನೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಕಾಂಗ್ರೆಸ್ ಗೂಂಡಾಗಿರಿ, ಅಸಭ್ಯ ವರ್ತನೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಹುಬ್ಬಳ್ಳಿ: ಬೆಂಗಳೂರು ಗ್ರಾಮಾಂತರ ರಾಮನಗರದಲ್ಲಿ ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡ ಸರ್ಕಾರಿ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ ಹಾಗೂ ವಿಧಾನ ಪರಿಷತ್ ಸದಸ್ಯ ರವಿ ಇವರು ವೇದಿಕೆ ಮೇಲೆ ನಡೆಸಿದ ಗೂಂಡಾಗಿರಿ ಹಾಗೂ ಅಸಭ್ಯ ವರ್ತನೆ ಖಂಡಿಸಿ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿಂದು ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಘಟಕದ ಕಾರ್ಯಕರ್ತರು ಸಂಸದ ಡಿ.ಕೆ.ಸುರೇಶ ಹಾಗೂ ಡಿ.ಕೆ. ಶಿವಕುಮಾರ ಕಾಂಗ್ರೆಸ್ ಪಕ್ಷದ ಗೂಂಡಾಗಿರಿ ರಾಜ್ಯದ ಜನತೆ ಕ್ಷಮಿಸುವುದಿಲ್ಲ ಎಂದು ಘೋಷಣೆ ಕೂಗಿ, ಧಿಕ್ಕಾರ ಹಾಕಿದರು.
ಈ ಸಂದರ್ಭದಲ್ಲಿ ಧಾರವಾಡ ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ, ದತ್ತಮೂರ್ತಿ ಕುಲಕರ್ಣಿ, ತಿಪ್ಪಣ್ಣ ಮಜ್ಜಗಿ, ಪ್ರಭು ನವಲಗುಂದಮಠ, ರವಿ ನಾಯಕ, ಚಂದ್ರಶೇಖರ ಗೋಕಾಕ್, ರಂಗಾ ಬದ್ದಿ, ಸಿದ್ದು ಮೊಗಲಿಶೆಟ್ಟರ, ಬಸವರಾಜ ಅಮ್ಮಿನಬಾವಿ, ವಿರುಪಾಕ್ಷಿ ರಾಯನಗೌಡ್ರ, ಶಿವಾನಂದ ಮುತ್ತಣ್ಣವರ, ರಾಜು ಜರತಾರಘರ, ಅವಿನಾಶ ಹರಿವಾಣ, ಸುಭಾಷ ಅಂಕಲಕೋಟಿ, ಅಶೋಕ ವಾಲ್ಮೀಕಿ, ಪ್ರಶಾಂತ ಹಾವಣಗಿ, ರಾಜು ಕಾಳೆ, ಇಜಾರದ, ರಜತಸಿಂಗ ಹಜಾರೆ, ಹನುಮಂತಪ್ಪ ದೊಡ್ಡಮನಿ, ಕೃಷ್ಣಾ ಗಂಡಗಾಳೇಕರ, ಈಶ್ವರಗೌಡ ಪಾಟೀಲ, ಲಕ್ಷ್ಮಿಕಾಂತ ಘೋಡಕೆ, ರಾಜು ಕೊರ್‍ಯಾನಮಠ, ಅನುಪ ಬಿಜವಾಡ, ಉಮೇಶ ದುಶಿ, ಪ್ರವೀಣ ಕುಬಸದ, ಅನಿಲ ಗೋಪಾಲ ಕಲ್ಲೂರ, ಸೀಮಾ ಲದ್ವಾ, ಸಂಗೀತಾ ಇಜಾರದ, ಸವಿತಾ ಚವ್ಹಾಣ, ತಾರಾಮತಿ ವಾಶಪ್ಪನವರ, ಪ್ರಿಯಾಂಕ ದೊಂಡಿ, ಅನ್ನಪೂರ್ಣ ಪಾಟೀಲ, ಸುನೀತಾ ಜರತಾರಘರ ಮೊದಲಾ ದವರು ಉಪಸ್ಥಿತರಿದ್ದರು.

ಧಾರವಾಡ ವರದಿ

ಕಾಂಗ್ರೆಸ್ಸ್‌ನ ಡಿಕೆಸಿ ಸಹೋದರರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ಹು-ಧಾ ಮಹಾನಗರ ಜಿಲ್ಲಾ ವತಿಯಿಂದ ಹು-ಧಾ ಪಶ್ಚಿಮ-೭೪, ಹಾಗೂ ಧಾರವಾಡ ೭೧ ರ ಸಹಯೋಗದಲ್ಲಿ ಧಾರವಾಡದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.


ಅಭಿವೃದ್ಧಿ ಸಹಿಸದ ಗೂಂಡಾ ಡಿಕೆ ಬ್ರದರ್ಸ್ ಈ ರೀತಿ ವೇದಿಕೆಯ ಮೇಲೆಯೇ ತಮ್ಮ ಗುಂಡಾ ಪ್ರವೃತ್ತಿಯನ್ನು ಪ್ರದರ್ಶಿಸಿದ್ದಾರೆ. ಇದರ ವಿರುದ್ಧವಾಗಿ ಇವರ ಗೂಂಡಾ ವರ್ತನೆಗಳನ್ನು ಬಲವಾಗಿ ಖಂಡಿಸಿ ಇವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ರಾಜ್ಯಪಾಲರಿಗೆ ಸಲ್ಲಿಸಲಾದ ಮನವಿಯಲ್ಲಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಮುಖಂಡರಾದ ಮೋಹನ ರಾಮದುರ್ಗ, ಸಂಜಯ ಕಪಟಕರ್, ಬಸವರಾಜ ಗರಗ, ಶಿವರುದ್ರಯ್ಯ, ಶಂಕರ ಕೋಟಿ, ಮೂಹನ್ ರಾಮದುಗ೯, ವಿಜಯಾನಂದ ಶಟ್ಟಿ,ಸಂಜಯ ಕಪಟಕರ, ಬಸವರಾಜ ಗರಗ, ಎಸ್.ಬಿ. ಶಿವರುದ್ರಯ್ಯಾ, ಶಿವಾನಂದ ಕುಬಿಹಾಳ, ಎಸ್.ಎಂ.ಸಂತೋಷ, ಬಿಂದುರಾವ ಸವಣೂರು, ಪವನ್ ಥಿಟೆ, ವಿಜಯ್ ಸಾಬಳೆ, ವಿಶ್ವೇಶ್ವರಿ ಅಳಗವಾಡಿ, ಪುಪ್ಪಾ ನವಲಗುಂದ, ರೇಣುಕಾ ಕೋಳೆಕರ, ಮಾಲತಿ ಹುಲಕಟ್ಟಿ, ಶೂಭಾ ಭುಜಂಗನವರ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.

 

administrator

Related Articles

Leave a Reply

Your email address will not be published. Required fields are marked *