ಹುಬ್ಬಳ್ಳಿ-ಧಾರವಾಡ ಸುದ್ದಿ

ಬಿಜೆಪಿಯದ್ದು ಕುತಂತ್ರದ ರಾಜಕಾರಣ: ವಿನಯ ಕುಲಕರ್ಣಿ

ಅಷ್ಟಗಿ ಸೇರ್ಪಡೆಯಿಂದ ಬಲ

ಚೆನ್ನಮ್ಮನ ಕಿತ್ತೂರು: ಅಭಿವೃದ್ಧಿ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಾಗದ ಬಿಜೆಪಿಯವರು ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ಚುನಾವಣೆ ಬಂದಾಗ ಮಾತ್ರ ಆದಾಯ ತೆರಿಗೆ ಇಲಾಖೆ ದಾಳಿ ಆಗುತ್ತವೆ. ಕಳೆದ ಚುನಾವಣೆಯಲ್ಲಿ ನನ್ನ ಆಪ್ತ ಸಹಾಯಕರನ್ನು ನಾಲ್ಕು, ಐದು ದಿನ ವಿಚಾರಣೆಗೆಂದು ಕರೆದುಕೊಂಡು ಕೂಡಿಸಿದರು. ಈ ರೀತಿಯ ರಾಜಕಾರಣ ಸಲ್ಲದು ಎಂದು ಬೇಸರ ವ್ಯಕ್ತಪಡಿಸಿದರು.


ಯಾವುದೋ ಪಕ್ಷ ಇರಲಿ, ಆಯ್ಕೆಯಾಗಿ ಬಂದ ತಕ್ಷಣ ಜನಪರ ಕೆಲಸ ಮಾಡಬೇಕು. ಆದರೆ, ಕಾಂಗ್ರೆಸ್ಸಿಗರು ಎನ್ನುವುದಕ್ಕಾಗಿ ಅವರಿಗೆ ಸೌಲಭ್ಯ ನೀಡದೇ ಇರುವುದು ನೋವಿನ ಸಂಗತಿ. ಎಲ್ಲರೂ ಒಂದೇ ಎಂದು ನಡೆಯಬೇಕು ಎಂದರಲ್ಲದೇ,ನಮ್ಮ ರಾಜಕಾರಣದ ಮಾಹಿತಿಯನ್ನು ಪಡೆಯಲು ಪೋನ್ ಕದ್ದಾಲಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಸತ್ಯದ ಮೇಲೆ, ನ್ಯಾಯಾಲಯದ ಮೇಲೆ ಭರವಸೆ ಇದೆ. ಅದು ಏನು ತೀರ್ಪು ನೀಡುತ್ತದೆ ಅದಕ್ಕೆ ತಲೆ ಬಾಗುತ್ತೇನೆ. ನಾನು ಇಲ್ಲದಿದ್ದರೂ ನನ್ನ ಪತ್ನಿಗೆ ಗೌರವ ನೀಡುತ್ತಿದ್ದಾರೆ. ಮಕ್ಕಳಿಗೆ ತಮ್ಮ ಮಕ್ಕಳಂತೆ ಕಾಣುತ್ತಾರೆ. ರಕ್ಷಣೆ ನೀಡುತ್ತಿದ್ದಾರೆ. ಇದೇ ಜನರ ನಿಜವಾದ ಪ್ರೀತಿ. ನಾನು ಜನರೊಂದಿಗೆ ನಡೆದ ರೀತಿ ಈಗ ನನಗೆ ಫಲ ನೀಡಲಿದೆ. ಎಲ್ಲೆಡೆ ಕಾಂಗ್ರೆಸ್ ಪರವಾಗಿ ವಾತಾವರಣ ಇದೆ. ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.


ಕೊರವರಗೆ ಚಾಟಿ: ಈಚೆಗೆ ದೊಡ್ಡ ಮಾತನಾಡಿದವರು ದುಡ್ಡು ತೆಗೆದುಕೊಂಡು ಹೋಗಿದ್ದಾರೆ. ಇಷ್ಟು ದಿನ ಅವರ ವಿರುದ್ಧವೇ ಮಾತನಾಡಿದವರು. ಈಗ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಅವರು ಈಗ ಬುಕ್ ಆಗಿದ್ದಾರೆ ಎಂದು ಬಸವರಾಜ ಕೊರವರಗೆ ವಿನಯ ಚಾಟಿ ಬೀಸಿದರು.
ನನಗೆ ಕ್ಷೇತ್ರದಲ್ಲಿ ಸ್ಟಾರ ಪ್ರಚಾರಕರ ಅವಶ್ಯಕತೆ ಇಲ್ಲ. ಕಾರ್ಯಕರ್ತರೇ ನನ್ನ ಸೆಲೆಬ್ರೆಟಿಗಳು. ಸಿದ್ದರಾಮಯ್ಯನವರು ನನ್ನ ಪರ ಮತ ಯಾಚನೆ ಮಾಡುತ್ತಾರೆ. ಸುದೀಪ್ ಅವರು ಅಭಿವೃದ್ಧಿ ಪರ ಮತ ಹಾಕಿ ಎಂದು ಸರಿಯಾಗಿಯೇ ಹೇಳಿದ್ದಾರೆ. ಜನರ ತಲೆ ತುಂಬ ವಿನಯ್ ಕುಲಕರ್ಣಿನೇ ತುಂಬಿಕೊಂಡಿದ್ದಾನೆ ಎಂದರು.
ಕೋಟೂರು ಕೊಲೆ ಪ್ರಕರಣವನ್ನು ಕೇಂದ್ರ ಸಚಿವರು ಸಿಬಿಐ ತನಿಖೆ ಮಾಡಿಸಲಿ ಎಂದು ಒತ್ತಾಯಿಸಿದರು.
ಧಾರವಾಡ-71 ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡರ, ಮುಖಂಡರಾದ ಶಫಿ ಕಳ್ಳಿಮನಿ, ರಮೇಶ ತಳಗೇರಿ, ಹೇಮಂತ ಕುಲಕರ್ಣಿ ಇತರರು ಗೋಷ್ಠಿಯಲ್ಲಿದ್ದರು.

ಅಷ್ಟಗಿ ಸೇರ್ಪಡೆಯಿಂದ ಬಲ

ತವನಪ್ಪ ಅಷ್ಟಗಿ ಅವರು ಮೂಲತಃ ಕಾಂಗ್ರೆಸ್ ನವರೇ, ಇದೀಗ ಮರು ಸೇರ್ಪಡೆ ಆದದ್ದು ಕಾಂಗ್ರೆಸ್‌ನ ಬಲ ಹೆಚ್ಚಿದೆ ಎಂದು ಪ್ರಶ್ನೆಯೊಂದಕ್ಕೆ ವಿನಯ ಕುಲಕರ್ಣಿ ಉತ್ತರಿಸಿದರು.

 

administrator

Related Articles

Leave a Reply

Your email address will not be published. Required fields are marked *