ಕ್ರೀಡಾಕೂಟದ ಜೆರ್ಸಿ, ಟ್ರೋಫಿ ಅನಾವರಣ
ಹುಬ್ಬಳ್ಳಿ: ಡಿ.3 ಮತ್ತು 10ರಂದು ಬಿಎನ್‌ಐ(ಬಿಸಿನೆಸ್ ನೆಟ್‌ವರ್ಕ್ ಇಂಟರ್‌ನ್ಯಾಷನಲ್) ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ ಚಾಪ್ಟರ್ ವತಿಯಿಂದ ಬಿಎನ್‌ಐ ಕ್ರೀಡಾ ಉತ್ಸವ-23 ಆಯೋಜಿಸಲಾಗಿದೆ ಎಂದು ಎಂದು ಕ್ರೀಡಾಕೂಟದ ಸಂಯೋಜಕ ಸತ್ಯಜೀತ್ ಚಿಪ್ರೆ ಹೇಳಿದರು.
ಶನಿವಾರ ನಗರದ ಹನ್ಸ್ ಹೋಟೆಲ್‌ನಲ್ಲಿ ಬಿಎನ್‌ಐ ವಾರ್ಷಿಕ ಕ್ರೀಡಾಕೂಟದ ಜೆರ್ಸಿ, ಟ್ರೋಫಿ ಅನಾವರಣಗೊಳಿಸಿದ ಬಳಿಕ ಮಾತನಾಡಿದ ಅವರು, ಡಿ. 3ರಂದು ಧಾರವಾಡದ ಆರ್.ಎನ್. ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್, 10ರಂದು ಹುಬ್ಬಳ್ಳಿಯ ಬಿಡಿಕೆ ಸ್ಪೋರ್ಟ್ಸ್ ಮೈದಾನದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಆರು, ಧಾರವಾಡದಲ್ಲಿ ಒಂದು ಮತ್ತು ಬೆಳಗಾವಿಯಲ್ಲಿ ಎರಡು ಬಿಎನ್‌ಐ ಚಾಪ್ಟರ್‌ಗಳಿವೆ. ಒಂಬತ್ತು ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದು, ಬಿಎನ್‌ಐ ಜೋಶ್ ಇದನ್ನು ಆಯೋಜಿಸುತ್ತಿದೆ ಎಂದು ತಿಳಿಸಿದರು.
ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿಯ ಚಾಪ್ಟರ್‌ಗಳಲ್ಲಿ 500 ಜನ ಸದಸ್ಯರಿದ್ದಾರೆ. ಎಲ್ಲ ಉದ್ಯಮಿಗಳು ಒಂದೆಡೆ ಸೇರುವುದರಿಂದ ಹೊಸ ವಿಚಾರ ಹಂಚಿ ಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ವ್ಯಾಪಾರ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.
72 ದೇಶಗಳಲ್ಲಿ ಬಿಎನ್‌ಐ ಚಾಪ್ಟರ್‌ಗಳಿವೆ. ಪ್ರತಿವರ್ಷ ಕ್ರೀಡಾಕೂಟ ಆಯೋಜಿಸ ಲಾಗುತ್ತಿದೆ. ನಾಲ್ಕನೇ ಆವೃತಿಯ ಕ್ರೀಡಾಕೂಟ ಇದಾಗಿದೆ ಎಂದರು.
ವಿಷ್ಣು ಕುಸನೂರು, ಉಪೇಂದ್ರ ಕುಕನೂರು, ರವಿ ಕಪಲಿ, ಗೌತಮ ವಂಟಕುದರಿ, ಸಚಿನ ಮಹೇಂದ್ರಕರ, ಅನಿಲ ತುರಮರಿ ಸೇರಿದಂತೆ ಇತರರಿದ್ದರು.