ಹುಬ್ಬಳ್ಳಿ-ಧಾರವಾಡ ಸುದ್ದಿ

28 ರಂದು ಗ್ರಂಥಗಳು, ಸಾಕ್ಷ್ಯಚಿತ್ರ ಲೋಕಾರ್ಪಣೆ

ಧಾರವಾಡ : ನಗರದ ಡಾ.ಎಸ್ ಆರ್ ರಾಮನಗೌಡರ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಪ್ರೈ.ಲಿ, ಹಾಗೂ ಡಾ.ಎಸ್.ಆರ್ ರಾಮನಗೌಡರ ಎಜ್ಯುಕೇಶನ್ ಆಂಡ್ ರೂರಲ್ ಡೆವಲಪ್ಮೆಂಟ್ ಸೊಸಾಯಿಟಿ ಸಂಯುಕ್ತ ಆಶ್ರಯದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಸ್ ಆರ್ ರಾಮನಗೌಡರ ಇವರು ರಚಿಸಿದ ಗ್ರಂಥಗಳು ಹಾಗೂ ಡಾ.ಎಸ್ ಆರ್ ರಾಮನಗೌಡರ ಅವರನ್ನು ಕುರಿತು ರಚಿಸಿದ ಕೃತಿಗಳು ಮತ್ತು ಸಾಕ್ಷ್ಯಚಿತ್ರದ ಲೋಕಾರ್ಪಣೆ ಸಮಾರಂಭ ದಿ. 28 ರಂದು ನಗರದ ದೊಡ್ಡನಾಯಕನಕೊಪ್ಪದ ಬಿ.ಡಿ.ಪಾಟೀಲ ಕನ್ವೆನ್ಶನ್ ಹಾಲ್‌ನಲ್ಲಿ ಬೆಳಿಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ.


ಸಮಾಜ ಸೇವಕರಾದ ಸಂಗನಗೌಡ ರಾಮನಗೌಡರ ಸುದ್ದಿಗೋಷ್ಠಿಯಲ್ಲಿ ಈ ಸಮಾರಂಭದ ವಿವರ ನೀಡಿದರು.

ಕಾಶಿ ಜ್ಞಾನ ಸಿಂಹಾಸನದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕಾರ್ಯಕ್ರಮದ ಸಾನಿಧ್ಯವಹಿಸಿ, ಗ್ರಂಥಗಳು ಹಾಗೂ ಸಾಕ್ಷ್ಯಚಿತ್ರ ಲೋಕಾರ್ಪಣೆಗೊಳಿಸುವರೆಂದರು.

’ಸದ್ಗುರು ವಾಣಿ’ ಗ್ರಂಥದ ಪರಿಚಯವನ್ನು ಅಮ್ಮಿನಭಾವಿ ಪಂಚಗೃಹ ಹಿರೇಮಠದ ಶ್ರೀ ಆಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಮಾಡುವರು. ’ಆತ್ಮಜ್ಞಾನಿ ಶ್ರೀ ಸದ್ಗುರು ಸಮರ್ಥ ಔಜಿಕರ ಮಹಾರಾಜರು’ ಸಂಪುಟ 1, 2, 3 ಈ ಗ್ರಂಥಗಳ ಪರಿಚಯವನ್ನು ಹಿರಿಯ ಸಾಹಿತಿ ಮೃತ್ಯುಂಜಯಸ್ವಾಮಿ ಹಿರೇಮಠ ಮಾಡುವರು. ಶ್ರೀ ಸದ್ಗುರು ಸಮರ್ಥ ಔಜಿಕರ ಮಹಾರಾಜರ ಜೀವನದರ್ಶನ ಮತ್ತು ಮರಾಠಿ ಭಾಷೆಯ ’ಶ್ರೀ ಲಕ್ಷ್ಮಣ ಚರಿತ ಮಾನಸ’ ದ ಕನ್ನಡ ಅನುವಾದಿತ ಕೃತಿಯ ಪರಿಚಯವನ್ನು ಹಿರಿಯ ಸಾಹಿತಿ ಪ್ರೊ.ಕೆ.ಎಸ್ ಕೌಜಲಗಿ ಮಾಡುವರು.


ಇದೇ ಸಂದರ್ಭದಲ್ಲಿ ಡಾ.ಎಸ್.ಆರ್ ರಾಮನಗೌಡರ ಕುರಿತು ಬೆಳಗಾವಿಯ ಚಲನಚಿತ್ರ ನಿರ್ದೇಶಕ ಉಮೇಶ ಬಡಿಗೇರ ಅವರ ನಿರ್ದೇಶನದಲ್ಲಿ ನಿರ್ಮಿಸಿದ ಸಾಕ್ಷ್ಯಚಿತ್ರ ’ಸಂತ ವೈದ್ಯ’ ಹಾಗೂ ಸಾಹಿತಿ, ಸಂಶೋದಕ ಡಾ.ಬಾಳಪ್ಪ ಚಿನಗುಡಿ ಇವರು ಈ ಸಾಕ್ಷ್ಯಚಿತ್ರಕ್ಕೆ ಅಕ್ಷರರೂಪ ನೀಡಿ ರಚಿಸಿದ ’ಸಂತ ವೈದ್ಯ’ ಕೃತಿ ಮತ್ತು ವಿಶ್ರಾಂತ ಪ್ರಾಂಶುಪಾಲ ಬಸಯ್ಯ ಶಿರೋಳ ಸಂಪಾದಿಸಿದ ’ಸಂಸಾರಿ ವಿರಕ್ತ ಡಾ.ಎಸ್.ಆರ್ ರಾಮನಗೌಡರ’ ಎಂಬ ಕೃತಿಗಳೂ ಸಹ ಲೋಕಾರ್ಪಣೆಗೊಳ್ಳಲಿವೆ. ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಮನೋರೋಗ ತಜ್ಞ ಡಾ.ಆನಂದ ಪಾಂಡುರಂಗಿ ಅತಿಥಿಯಾಗಿ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಚಡಚಣ ತಾಲೂಕಿನ ಕನಕನಹಾಳ ಔಜಗಿರಿ ಆಶ್ರಮದ ಗಿರೀಶಾನಂದ ಸ್ವಾಮಿಗಳು ವಹಿಸುವರು. ಕಾರ್ಯಕ್ರಮದ ಅಂತ್ಯದಲ್ಲಿ ಸಂತ ವೈದ್ಯ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.

ಡಾ.ಬಾಳಪ್ಪ ಚಿನಗುಡಿ, ಪ್ರೊ.ಬಸಯ್ಯ ಶಿರೋಳ, ಗುರನಗೌಡ ರಾಮನಗೌಡರ, ಬಸವರಾಜ ಕೌಜಲಗಿ ಪತ್ರಿಕಾಗೋಷ್ಠಿಯಲ್ಲಿದ್ದರು.

administrator

Related Articles

Leave a Reply

Your email address will not be published. Required fields are marked *