ಹುಬ್ಬಳ್ಳಿ-ಧಾರವಾಡ ಸುದ್ದಿ
ಪ್ರತಿಷ್ಠಿತ ಉದ್ಯಮಿ ಕಲ್ಯಾಣಿಗೆ ಗೌರವ ಡಾಕ್ಟರೇಟ್

ಪ್ರತಿಷ್ಠಿತ ಉದ್ಯಮಿ ಕಲ್ಯಾಣಿಗೆ ಗೌರವ ಡಾಕ್ಟರೇಟ್

ಕೆಎಲ್‌ಇ ತಾಂತ್ರಿಕ ವಿ.ವಿ ಘಟಿಕೋತ್ಸವ ನಾಳೆ

ಹುಬ್ಬಳ್ಳಿ : ಗುಣಮಟ್ಟದ ಶಿಕ್ಷಣಕ್ಕೆ ಮತ್ತೊಂದು ಹೆಸರಾಗಿರುವ ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಎರಡು ಮತ್ತು ಮೂರನೇ ಘಟಿಕೋತ್ಸವ ನಾಳೆ ನಡೆಯಲಿದೆ.

 

ಈ ಘಟೀಕೋತ್ಸವದಲ್ಲಿ ಕೊರೋನಾದಿಂದ ನಡೆಸಲಾಗದಿದ್ದ2019-20 ಹಾಗೂ 2020-21 ರ ಬ್ಯಾಚನ ಪದವಿಧರರಿಗೆ ಪದವಿ ಪ್ರಧಾನ ಮಡಲಾಗುವುದು ಎಂದು ವಿ.ವಿ.ಯ ಉಪ ಕುಲಪತಿ ಡಾ.ಅಶೋಕ ಶೆಟ್ಟರ್ ತಿಳಿಸಿದರು.
ಪ್ರಸಕ್ತ ಘಟಿಕೋತ್ಸವದಲ್ಲಿ 2509 ಪದವಿದರರಿಗೆ ಪದವಿ ಪ್ರದಾನ ಮಾಡಲಾಗುತ್ತಿದ್ದು, 1598 ಹುಡುಗರು ಹಾಗೂ 911 ಹುಡುಗಿಯರು ಪದವೀಧರರಾಗಿದ್ದು, 404 ಸ್ನಾತಕೋತ್ತರ ಪದವಿಧರರಿಗೆ ಪದವಿ ಪ್ರದಾನ ಮಾಡಲಾಗುವುದು ಎಂದರು.
ವಿವಿಧ ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾದನೆಗೈದ 32 ವಿದ್ಯಾರ್ಥಿಗಳಿಗೆ ಚಿನ್ನದ ಹಾಗೂ 32 ವಿದ್ಯಾರ್ಥಿಗಳಿಗೆ ಬೆಳ್ಳಿಯ ಪದಕ ನೀಡಲಾಗುತ್ತಿದೆ.
ಅಲ್ಲದೇ ಈ ಬಾರಿ ಪ್ರತಿಷ್ಠಿತ ಉದ್ಯಮಿ ಕಲ್ಯಾಣಿ ಸಮೂಹದ ಪದ್ಮಭೂಷಣ ಪುರಸ್ಕೃತ ಬಾಬಾ ಕಲ್ಯಾಣಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು ಎಂದರು. ಹೊಸ ದಿಲ್ಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ( ಎಐಸಿಟಿಇ) ಅಧ್ಯಕ್ಷರಾಗಿರುವ ಡಾ. ಅನಿಲ್ ಡಿ. ಸಹಸ್ರಬುದ್ದೆಯವರು ಹುಬ್ಬಳ್ಳಿ ಬಿ.ವ್ಹಿ.ಬಿ. ಕಾಲೇಜ್ ವಿದ್ಯಾರ್ಥಿಯೇ ಆಗಿದ್ದು, ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕೆಎಲ್ ಇ ಸಂಸ್ಥೆ ಅಧ್ಯಕ್ಷ ಡಾ. ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಲಿದ್ದು, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾ ಮೂರ್ತಿ ಅವರು ಉಪಸ್ಥಿತರಿರುವರು ಎಂದರು.

administrator

Related Articles

Leave a Reply

Your email address will not be published. Required fields are marked *