ಹುಬ್ಬಳ್ಳಿ-ಧಾರವಾಡ ಸುದ್ದಿ

ಕಾಡಯ್ಯ ಹಿರೇಮಠ ಕಂಚಿನ ಪುತ್ಥಳಿ ಅನಾವರಣ

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ದಿ. ಎಸ್.ಆರ್. ಬೊಮ್ಮಾಯಿ ಅವರ ನಿಕಟವರ್ತಿ, ಮೌಲ್ಯಾಧಾರಿತ ರಾಜಕಾರಣಕ್ಕೆ ಮಾದರಿಯಾಗಿದ್ದ ಲಿಂ.ವೇ.ಮೂ.ಕಾಡಯ್ಯ ಗು.ಹಿರೇಮಠರ 81 ನೇ ಜನ್ಮ ಸಂಸ್ಮರಣ ಪ್ರಯುಕ್ತ ಅವರ ಕಂಚಿನ ಪುತ್ಥಳಿಯನ್ನು ನಗರದ ಕುಸುಗಲ್ಲ ರಸ್ತೆಯ ಕೆ.ಜಿ.ಗಾರ್ಡನ್‌ನಲ್ಲಿಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದರು.
ಕಾಡಯ್ಯನವರು ಹಿರೇಮಠ ಜನ್ಮ ಸಂಸ್ಮರಣ ಸಮಿತಿಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಸಾನ್ನಿಧ್ಯವನ್ನು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯರು ವಹಿಸಿದ್ದರಲ್ಲದೇ ಅನೇಕ ಮಠಾಧೀಶರು ಉಪಸ್ಥಿತರಿದ್ದರು.


ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರೆ, ಮಾಜಿ ಸಿಎಂ ಜಗದೀಶ ಶೆಟ್ಟರ ’ಮಾನವೀಯ ಮೂರ್ತಿ’ ಸಂಸ್ಮರಣ ಗ್ರಂಥವನ್ನು ಬಿಡುಗಡೆಗೊಳಿಸಿದರೆ,ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಚಿವರಾದ ಸಿ.ಸಿ.ಪಾಟೀಲ, ಶಂಕರಪಾಟೀಲ ಮುನೇನಕೊಪ್ಪ, ಶಾಸಕ ಅಮೃತ ದೇಸಾಯಿ, ಮಹಾಂತೇಶ ಕವಟಗಿಮಠ, ಶಂಕ್ರಣ್ಣ ಮುನವಳ್ಳಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಮಾಜದಲ್ಲಿ ಯಾವುದೇ ಅನ್ಯಾಯವಾಗಲಿ ಸಿಡಿದು ನಿಲ್ಲುತ್ತಿದ್ದ ಮನೋಭಾವದವರಾದ ಕಾಡಯ್ಯ ಹಿರೇಮಠರನ್ನು ಅಕ್ಷರಶಃ ಮಾನವೀಯ ಮೂರ್ತಿ ಎಂದು ಸಿಎಂ ಬೊಮ್ಮಾಯಿ ಶ್ಲಾಘಿಸಿದರಲ್ಲದೇ ಅವರ ಒಡನಾಟದ ನೆನಪಿನ ಬುತ್ತಿ ಬಿಚ್ಚಿದರು.
ಕಾಡಯ್ಯ ಹಿರೇಮಠರ ಪುತ್ರ ಬಸಯ್ಯ ಹಿರೇಮಠ ಸೇರಿದಂತೆ ಅನೇಕ ಗಣ್ಯರು ವೇದಿಕೆ ಮೇಲಿದ್ದರು. ಕಾರ್ಯಕ್ರಮಕ್ಕೆ ಕಾಡಯ್ಯಜ್ಜನವರ ಅಭಿಮಾನಿಗಳು ,ಹಿತೈಷಿಗಳು ಸೇರಿದಂತೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು.

 

 

administrator

Related Articles

Leave a Reply

Your email address will not be published. Required fields are marked *