ಹುಬ್ಬಳ್ಳಿ-ಧಾರವಾಡ ಸುದ್ದಿ
ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ; ಹೈಕಮಾಂಡ್‌ನಿಂದ ಬುಲಾವ್ ಬಂದಿಲ್ಲ

ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ; ಹೈಕಮಾಂಡ್‌ನಿಂದ ಬುಲಾವ್ ಬಂದಿಲ್ಲ

ಹುಬ್ಬಳ್ಳಿ: ಉಪಚುನಾವಣೆ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಿರೀಕ್ಷೆಯಲ್ಲಿದ್ದ ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದ್ದು ಸದ್ಯಕ್ಕೆ ಸಂಪುಟ ವಿಸ್ತರಣೆ ವಿಚಾರವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯ ನಿವಾಸದಲ್ಲೇ ದೀಪಾವಳಿ ಹಬ್ಬ ಆಚರಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೈಕಮಾಂಡ್ ನಿಂದ ನನಗೆ ಯಾವುದೇ ಬುಲಾವ್ ಬಂದಿಲ್ಲ. ಹಾಗಾಗಿ ನಾನು ದೆಹಲಿಗೆ ಹೋಗುತ್ತಿಲ್ಲ. ಅಲ್ಲದೇ ಸಂಪುಟ ವಿಸ್ತರಣೆಯೂ ಸಧ್ಯಕ್ಕಿಲ್ಲ ಎಂದರು.
ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ 7 ರೂಪಾಯಿ ಇಳಿಕೆಗೆ ನಿರ್ಧಾರ ಮಾಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 2100 ಕೋಟಿ ಹೊರೆಯಾಗಲಿದೆ.
ಅದನ್ನೆಲ್ಲ ಪರಿಶೀಲಿಸಿ ಇಂದು ಸಂಜೆಯಿಂದ ಬೆಲೆ ಇಳಿಕೆ ಜಾರಿಯಾಗಲಿದೆ ಎಂದರು.
ಜನವರಿ 26 ರಿಂದ ರಾಜ್ಯಾದ್ಯಂತ ಜನಸೇವಕ ಯೋಜನೆ ಜಾರಿಯಾಗಲಿದೆ ಎಂದು ಹೇಳಿದ ಅವರು
ಬಿಟ್ ಕ್ವಾಯಿನ್ ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಆಗ್ರಹ ಕುರಿತಾಗಿ ಕೇಳಿದಾಗ ಈ ಬಗ್ಗೆ ಪ್ರತಿಕ್ರಿಯೆ ಈಗಾಗಲೇ ನೀಡಿದ್ದೇನೆ ಎಂದರು.

100 ದಿನ ಭವಿಷ್ಯಕ್ಕೆ ದಿಕ್ಸೂಚಿ ಭದ್ರ,ಭರವಸೆ ಹೆಜ್ಜೆ

ಹುಬ್ಬಳ್ಳಿ : ನೂರು ದಿನಗಳಲ್ಲಿ ಬಹಳ ದೊಡ್ಡ ಮೈಲುಗಲ್ಲು ಆಗದಿದ್ರೂ, ಮುಂದಿನ ದಿನಗಳಿಗೆ ದಿಕ್ಸೂಚಿಯಾಗಲಿದೆ.ಅಲ್ಲದೇ ನೂರು ದಿನದಲ್ಲಿ ಭದ್ರ, ಭರವಸೆ ಹೆಜ್ಜೆ ಇಟ್ಟಿದ್ದೇವೆ. ದಿಟ್ಟ ತೀರ್ಮಾನಗಳನ್ನು ಕೈಗೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿಂದು ಮಾಧ್ಯಮದವರ ಜತೆ ಮಾತನಾಡಿದ ಅವರು ಬರುವ ದಿನಗಳಲ್ಲಿ ಜನಪರವಾಗಿ ಯಾವ ನಿಟ್ಟಿನಲ್ಲಿ ಹೋಗುತ್ತದೆ ಅನ್ನುವುದರ ದಿಕ್ಸೂಚಿಯಾಗಿದೆ ಎಂದರು.
ಅಮೃತ ಯೋಜನೆ, ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಬಡವರಿಗೆ ಸಂಧ್ಯಾ ಸುರಕ್ಷಾ, ಅಂಗವಿಕಲ, ವಿಧವಾ ವೇತನ ಹೆಚ್ಚಳ ಸೇರಿದಂತೆ ಹಲವಾರು ಯೋಜನೆಗಳನ್ನು ಮಾಡಿದ್ದೇವೆ. ಇಷ್ಟಲ್ಲದೆ ಇನ್ನೂ ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಚಿಂತನೆಯಿದೆ.ಆರ್ಥಿಕತೆ ಈಗ ಚೇತರಿಸಿಕೊಳ್ಳುತ್ತಿದೆ ಎಂದರು.
ವ್ಯವಸ್ಥೆಯಲ್ಲಿ ಸುಧಾರಣೆ ತಂದು, ಜನರ ಬಳಿ ಸರ್ಕಾರ ಹೋಗಬೇಕು. ಆರ್ಥಿಕತೆ ಬೆಳವಣಿಗೆ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲ ಬಳಕೆ ಮಾಡಿಕೊಳ್ಳುವ ಚಿಂತನೆಯಿದೆ ಎಂದರು.
ಎಸ್.ಸಿ., ಎಸ್.ಟಿ., ಓಬಿಸಿ ಮತ್ತು ಬಡವರೂ ಸಹ ಆರ್ಥಿಕತೆಯಲ್ಲಿ ಭಾಗಿಯಾಗಬೇಕೆಂದು ವಿಶೇಷವಾದ ಕಾರ್ಯಕ್ರಮ ರೂಪಿಸಲಾಗಿದೆ. ಆಡಳಿತ ಸುಧಾರಣೆಗೂ ಸಿಎಂ ಡ್ಯಾಷ್ ಬೋರ್ಡ್ ಮಾಡಿದ್ದೇವೆ. ಮೇಲಿನಿಂದ ತಳಮಟ್ಟದವರೆಗೂ ಸುಧಾರಣೆ ತರಲಾಗುವುದು. ರಾಜ್ಯದಲ್ಲಿ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಸಿಎಂ ಡ್ಯಾಷ್ ಬೋರ್ಡ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದರು.

administrator

Related Articles

Leave a Reply

Your email address will not be published. Required fields are marked *