ಹುಬ್ಬಳ್ಳಿ-ಧಾರವಾಡ ಸುದ್ದಿ
ಸಿಎಂಗೆ ’ಗುಪ್ತ’ ಗುನ್ನಾ: ಬೆಂಗಳೂರ ಪ್ರಯಾಣ ದಿಢೀರ್ ರದ್ದು ಹಾನಗಲ್ ಹಿನ್ನೆಡೆ ನಿಕ್ಕಿ ವರದಿ- ಬೇಲೂರಲ್ಲಿ ರಹಸ್ಯ ಸಭೆ

ಸಿಎಂಗೆ ’ಗುಪ್ತ’ ಗುನ್ನಾ: ಬೆಂಗಳೂರ ಪ್ರಯಾಣ ದಿಢೀರ್ ರದ್ದು ಹಾನಗಲ್ ಹಿನ್ನೆಡೆ ನಿಕ್ಕಿ ವರದಿ- ಬೇಲೂರಲ್ಲಿ ರಹಸ್ಯ ಸಭೆ

ಹುಬ್ಬಳ್ಳಿ : ನಿನ್ನೆಯ ಹಾನಗಲ್‌ನಲ್ಲಿ ನಡೆದ ಕಾಂಗ್ರೆಸ್ಸಿನ ಬಹಿರಂಗ ಸಭೆ ಹಾಗೂ ಗುಪ್ತಚರ ವರದಿಗಳು ಅಕ್ಷರಶಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆತ್ಮಸ್ಥೈರ್ಯವನ್ನು ಅಲುಗಾಡಿಸಿ ಬಿಟ್ಟಿವೆ ಎನ್ನಲಾಗಿದೆ.
ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗುವದು ನಿಕ್ಕಿ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದ್ದು ಇಂದು ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿಗೆ ತೆರಳಿ11 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಬೃಹತ್ ಮೆಟ್ಟಿಲುಗಳ ಮೇಲೆ ನಡೆಯುವ ರಾಜ್ಯೋತ್ಸವದಂಗವಾಗಿ ಇಂದು ನಡೆಯ ಬೇಕಾದ ಕನ್ನಡ ರಾಜ್ಯೋತ್ಸವದ ಅಧಿಕೃತ ಸಭೆಗೂ ಹೋಗಲಾರದೆ, ತಮ್ಮ ಖುರ್ಚಿಗೆ ಎಲ್ಲಿ ತೊಂದರೆಯಾಗುತ್ತದೋ ಎಂಬ ಭೀತಿಯಲ್ಲಿ ಅವರು ಹುಬ್ಬಳ್ಳಿಯಲ್ಲೇ ಉಳಿದುಕೊಂಡು, ಆಪ್ತರೊಂದಿಗೆ ಧಾರವಾಡದ ಬೇಲೂರ ಔದ್ಯೋಗಿಕ ವಸಾಹತಿನಲ್ಲಿ ಸಭೆ ನಡೆಸಿದ್ದಾರೆ.
ಶ್ರೀನಿವಾಸ ಮಾನೆಯವರ ಬಗ್ಗೆ ಹಾನಗಲ್ಲ ಕ್ಷೇತ್ರದಲ್ಲಿರುವ ಜನಪ್ರಿಯತೆಗೆ ಪರ್ಯಾಯವಾಗಿ ಏನನ್ನೂ ಮಾಡಲಾಗುತ್ತಿಲ್ಲ ಎನ್ನುವ ಸ್ಥಿತಿ ಅವರದ್ದಾಗಿದೆ.
ಒಂದು ಕಡೆ ವಿಧಾನಸೌಧಕ್ಕೆ ಮುಖ್ಯಮಂತ್ರಿ ಆದಿಯಾಗಿ ಯಾವ ಸಚಿವರಿಲ್ಲದೇ ಬೀಗ ಜಡೆಯುವಂತಾಗಿದ್ದು, ಇನ್ನೊಂದೆಡೆ ಹೈಕಮಾಂಡ ಎಚ್ಚರಿಕೆಯು ಮುಖ್ಯಮಂತ್ರಿಯ ಚಿಂತೆಯನ್ನು ಹೆಚ್ಚು ಮಾಡಿದೆ
ಹಾನಗಲ್ ಬಗೆಗೆ ಬಿಜೆಪಿ ಹೈಕಮಾಂಡ್ ಕೂಡ ಸಂಶಯವನ್ನು ಈಗಾಗಲೇ ವ್ಯಕ್ತಪಡಿಸಿದ್ದು,ಸ್ವತಃ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೊಮ್ಮಾಯಿಯವರೊಂದಿಗೆ ಮಾತುಕತೆ ನಡೆಸಿದ್ದು, ಕೊನೇ ಕ್ಷಣದಲ್ಲಿ ಹಾನಗಲ್ ವಿಧಾನಸಭಾ ಕ್ಷೇತ್ರ ಕೈತಪ್ಪುವ ಸಾಧ್ಯತೆ ಇದೆ. ಹಾಗಾಗಿ ಯಾವುದೇ ಕಾರಣಕ್ಕೂ ಬಿಜೆಪಿಗೆ ಹಿನ್ನಡೆಯಾಗದಂತೆ ನೋಡಿಕೊಳ್ಳಿ ಎಂದಿದ್ದಾರೆನ್ನಲಾಗಿದೆ.

administrator

Related Articles

Leave a Reply

Your email address will not be published. Required fields are marked *