ಹುಬ್ಬಳ್ಳಿ-ಧಾರವಾಡ ಸುದ್ದಿ

ವೃದ್ದೆಗೆ ನಿರ್ವಾಹಕಿಯಿಂದ ಕಪಾಳಮೋಕ್ಷ : ವೈರಲ್

ಕುಂದಗೋಳ- ಹುಬ್ಬಳ್ಳಿ ಬಸ್‌ನಲ್ಲಿ ಘಟನೆ

ಹುಬ್ಬಳ್ಳಿ: ಅಹಿತಕರ ಘಟನೆಗಳು ನಡೆಯದಂತೆ ಸಾರಿಗೆ ಸಿಬ್ಬಂದಿಗೆ ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿದ್ದು ಹೀಗಿರುವಾಗಲೇ, ಮಹಿಳಾ ನಿರ್ವಾಹಕರೊಬ್ಬರು ವೃದ್ಧೆಯೊಬ್ಬರಿಗೆ ಕಪಾಳ ಮೋಕ್ಷ ಮಾಡಿದ ಘಟನೆ ತಾಲೂಕಿನ ಶರೆವಾಡದಲ್ಲಿ ನಡೆದಿದೆ.


ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಕುಂದಗೋಳದಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ಬಸ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದಿದ್ದು, ಕೊನೆಗೆ ಮಹಿಳಾ ಕಂಡಕ್ಟರ್, ಅಜ್ಜಿಯ ಕಪಾಳಕ್ಕೆ ಹೊಡೆದಿದ್ದಾರೆ. ತನ್ನ ಅಜ್ಜಿಯ ವಯಸ್ಸಿನ ಮಹಿಳೆಯ ಮೇಲೆ ಈ ರೀತಿ ಹಲ್ಲೆ ಮಾಡಿರುವ ಮಹಿಳಾ ನಿರ್ವಾಹಕರ ನಡೆಗೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

administrator

Related Articles

Leave a Reply

Your email address will not be published. Required fields are marked *