ಹುಬ್ಬಳ್ಳಿ: ಧೂಳು ಮುಕ್ತ ನಗರ ಹಾಗೂ ಸಮರ್ಪಕ ಕಸ ವಿಲೇವಾರಿಗೆ ಆಗ್ರಹಿಸಿ ಮಹಾನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಪಾಲಿಕೆಯ ಆಯುಕ್ತರ ಕಚೇರಿ ಎದುರು ಕಸ ಸುರಿದು ಪ್ರತಿಭಟನೆ ವಿನೂತನಾಗಿ ನಡೆಸಿದರು.
ಕಸವನ್ನು ಟ್ರಾಕ್ಟರ್‌ನಲ್ಲಿ ಸಂಗ್ರಹಿಸಿ ಪಾಲಿಕೆ ಆಯುಕ್ತರ ಕಚೇರಿ ಎದುರು ಹಾಕಿ ಅದರ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರದ ಕಟೌಟ್ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಹುತೇಕ ಕಡೆಗಳಲ್ಲಿ ಕಸ ವಿಲೇವಾರಿ ಮಾಡುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದು, ಕೆಲ ಪ್ರಮುಖ ಸ್ಥಳಗಳಲ್ಲಿ ಸರಿಯಾಗಿಡುವ ಯತ್ನ ಮಾಡಲಾಗುತ್ತಿದೆಯಲ್ಲದೇ ಕಾರ್‍ಯಕಾರಿಣಿಯ ಹಿನ್ನೆಲೆಯಲ್ಲಿ ಗುಂಡಿಮುಚ್ಚುವ ಕಾರ್ಯ ನಡೆದಿದೆ ಎಂದು ಮಾತನಾಡಿದ ಪ್ರಮುಖರು ಆರೋಪಿಸಿದರು.
ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಜತ ಉಳ್ಳಾಗಡ್ಡಿಮಠ, ನಾಗರಾಜ ಗೌರಿ, ಬಸವರಾಜ ಕಿತ್ತೂರ, ಪಾಲಿಕೆ ಸದಸ್ಯರಾದ ಆರೀಫ್ ಭದ್ರಾಪುರ, ಪ್ರಕಾಶ ಕುರಹಟ್ಟಿ, ಸುವರ್ಣ ಕಲಕುಂಟಲಾ, ಸಂದಿಲ್ ಕುಮಾರ್, ಮಯೂರ್ ಮೋರೆ, ಇಕ್ಬಾಲ್ ನವಲೂರ್,ನಿರಂಜನ್ ಹಿರೇಮಠ, ಮುಖಂಡರಾದ ಮೋಹನ್ ಹಿರೇಮನಿ, ಯುವ ಮುಖಂಡ ಶಾಜಮಾನ್ ಮುಜಾಹಿದ, ಷರೀಫ್ ಗರಗದ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.