ಹುಬ್ಬಳ್ಳಿ: ಸಂಪೂರ್ಣವಾಗಿ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾರ್ಯ ಹಾಗೂ ನಗರದೆಲ್ಲೆಡೆ ತೆರೆದುಕೊಂಡಿರುವ ಗುಂಡಿಗಳನ್ನು ಆದಷ್ಟು ಬೇಗ ಮುಚ್ಚುವಂತೆ ಆಗ್ರಹಿಸಿ ಇಂದು ಸಂಕಲ್ಪ ಗಣಹೋಮ ನೆರವೇರಿಸಿ ನಗರದ ಕೊಪ್ಪಿಕರ ರಸ್ತೆಯಲ್ಲಿಂದು ಮಹಾನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿನೂತನವಾಗಿ ಪ್ರತಿಭಟಿಸಲಾಯಿತು.
ಮಹಾನಗರ ಆಧ್ಯಕ್ಷ ಅಲ್ತಾಫ್ ಹಳ್ಳೂರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ರಸ್ತೆಯ ಮಧ್ಯದಲ್ಲೇ ಪುರೋಹಿತರಿಂದ ಸಂಕಲ್ಪ ಗಣಹೋಮ ನೆರವೇರಿಸಲಾಯಿತಲ್ಲದೇ ಆದಷ್ಟು ಬೇಗ ರಸ್ತೆ ದುರಸ್ತಿಗೆ ಒತ್ತಾಯಿಸಿ ಗಮನಸೆಳೆಯಲಾಯಿತು.
ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಪಾಲಿಕೆ ಸದಸ್ಯರಾದ ಆರೀಪ್ ಭದ್ರಾಪುರ, ಪ್ರಕಾಶ ಕುರಹಟ್ಟಿ, ಸುವರ್ಣ ಕಲಕುಂಟ್ಲ, ಇಕ್ಬಾಲ್ ನವಲೂರ,ಸೆಂದಿಲ್‌ಕುಮಾರ, ಯುವ ಮುಖಂಡ ಶಾಜಮಾನ್ ಮುಜಾಹಿದ್,ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ, ವಿದ್ಯಾರ್ಥಿ ಕಾಂಗ್ರೆಸ್ ಮುಖಂಡ ಶಿವಾ ಬೆಂಡಿಗೇರಿ, ಮಹಿಳಾ ಮುಖಂಡರಾದ ಅಕ್ಕಮ್ಮ ಕಂಬಳಿ, ಜ್ಯೋತಿ ವಾಲಿಕಾರ ಸೇರಿದಂತೆ ವಿವಿಧ ಘಟಕಗಳ ಅನೇಕ ಕಾರ್ಯಕರ್ತರು ಇದ್ದರು.