ಹುಬ್ಬಳ್ಳಿ : ಬಿಜೆಪಿಯವರು ಮತ್ತೆ ಅಧಿಕಾರಕ್ಕೇರುವ ಭ್ರಮೆಯಲ್ಲಿ ಇದ್ದಾರೆ.ರಾಜ್ಯದಲ್ಲಿ ಎಂದಾದರೂ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿದೆಯಾ? ಆಪರೇಷನ್ ಕಮಲ ಮಾಡಿನೇ ಅಧಿಕಾರಕ್ಕೆ ಬಂದಿದ್ದು. ಹೌದೋ ಅಲ್ವೋ ಎಂದು ಪ್ರಶ್ನೆ ಹಾಕಿದರು.
ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರಲ್ಲದೇ, ಜಗದೀಶ್ ಶೆಟ್ಟರ್ ಮಾತಿಗೆ ಯಾವ ಕಿಮ್ಮತ್ತು ಇಲ್ಲ.ಅವರು ಮುಖ್ಯಮಂತ್ರಿಯಾಗಿದ್ದಾಗ ಎಷ್ಟು ಸೀಟು ಬಂತು ಗೊತ್ತಿಲ್ವಾ ಎಂದರು.
ಕಾಂಗ್ರೆಸ್ನಲ್ಲಿ ಸಿಎಂ ಆಕಾಂಕ್ಷಿಗಳ ಮಧ್ಯೆ ಕಿತ್ತಾಟ ನಡೆದಿರುವ ಬಗ್ಗೆ ಕೇಳಿದಾಗ ಆಕಾಂಕ್ಷಿಗಳು ಇರೋದು ತಪ್ಪಾ ಎಂದು ಪ್ರಶ್ನಿಸಿದರಲ್ಲದೇ
ಅಂತಿಮವಾಗಿ ಯಾರು ಸಿಎಂ ಆಗಬೇಕು ಅನ್ನೊದು ಶಾಸಕರು, ಹೈಕಮಾಂಡ್ ತಿರ್ಮಾನ ಮಾಡುತ್ತದೆ ಎಂದರು.
ಬಿಜೆಪಿಯಲ್ಲಿ ಯಾವುದೇ ಜಗಳ ಇಲ್ವಾ ಎಂದು ಕೇಳಿದ ಸಿದ್ದು, ಯತ್ನಾಳ ಏನ್ ಮಾಡುತ್ತಿದ್ದಾರೆ, ಶೆಟ್ಟರ್ ಯಾಕೆ ಸಂಪುಟ ಸೇರಲಿಲ್ಲ.
ಬಣಗಳು ಇರೋದು ಬಿಜೆಪಿಯಲ್ಲಿ ಮಾತ್ರ ನಮ್ಮಲ್ಲಿ ಯಾವುದೇ ಬಣ ಇಲ್ಲ.ನಮ್ಮಲ್ಲಿ ಇರೋದು ಒಂದೇ ಬಣ ಅದು ಸೋನಿಯಾ ಗಾಂಧಿ ಬಣ.
ಬಿಜೆಪಿಯಲ್ಲಿ ಕಾಂಗ್ರೆಸ್ನಿಂದ ಹೊದವರು, ಆರ್.ಎಸ್.ಎಸ್ ನವರು, ಜೆಡಿಯುನಿಂದ ಹೋದವರು ಬಣಗಳಿವೆ ಎಂದರು.
ಜೆಡಿಎಸ್ನವರ ಬಗೆಗೆ ಕೇಳಿದಾಗ ಯಾವುದೇ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.